ಐಪಿಎಲ್ 16ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಪೋಟಕ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ 193 ರನ್‌ಗಳನ್ನು ಗಳಿಸಿ ಕಠಿಣ ಸವಾಲು ಮುಂದಿಟ್ಟಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಏಕಾನ ಕ್ರೀಡಾಂಗಣದಲ್ಲಿ ರನ್‌ಗಳಿಸಲು ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಪರದಾಡಿತು. ನಂತರ ನಾಯಕ ಕೆಎಲ್ ರಾಹುಲ್ ಅಗ್ಗಕ್ಕೆ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಆರಂಭವಾಗಿದದ ಕೇಲ್ ಮೇಯರ್ಸ್ ಅಬ್ಬರ.

ಆರಂಭಿಕ ಆಟಗಾರ ಕೇಲ್ ಮೇಯರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಲು ಆರಂಭಿಸಿದರು. ಎರಡನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟವನ್ನು ನೀಡಿದರು. ಕುತೂಹಲಕಾರಿ ಅಂಶವೆಂದರೆ ಈ ಜೊತೆಯಾಟದಲ್ಲಿ ಹೂಡಾ ಪಾಲು ಕೇವಲ 17 ರನ್. ಹೂಡಾ ಔಟಾದ ತಕ್ಷಣವೇ ಕೇಲ್ ಮೇಯರ್ಸ್ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಈ ಮೂಲಕ ಸ್ಪೋಟಕ ಇನ್ನಿಂಗ್ಸ್ ಅಂತ್ಯವಾಯಿತು. 38 ಎಸೆತಗಳಲ್ಲಿ 73 ರನ್ ಬಾರಿಸಿ ಅಬ್ಬರಿಸಿದರು ಕೇಲ್ ಮೇಯರ್ಸ್. ಇದರಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳು ಇದ್ದವು.
ಇನ್ನು ಅಂತಿಮ ಹಂತದಲ್ಲಿ ಪೂರನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 36 ರನ್‌ಗಳ ಕೊಡುಗೆ ನೀಡಿದರು. ಯುವ ಆಟಗಾರ ಆಯುಷ್ ಬದೋನಿ ಕೂಡ ಸ್ಪೋಟಕ ಆಟವಾಡುವ ಮೂಲಕ ತಂಡದ ಮೊತ್ತವನ್ನು 193ಕ್ಕೆ ತಂದು ನಿಲ್ಲಿಸಿದರು. ಆಯುಷ್ ಬದೋನಿ 7 ಎಸೆತಗಳಲ್ಲಿ 18 ರನ್‌ಗಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್
ಬೆಂಚ್: ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಕರಣ್ ಶರ್ಮಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಬೆಂಚ್: ಫಿಲಿಪ್ ಸಾಲ್ಟ್, ಅಮನ್ ಹಕೀಮ್ ಖಾನ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಅಭಿಷೇಕ್ ಪೊರೆಲ್