ಕೊಹ್ಲಿ 2016ರ ಐಪಿಎಲ್‌ನಲ್ಲಿ ಟಿ20 ಬ್ಯಾಟಿಂಗ್ ಶೈಲಿಗೆ ಹೊಸ ಭಾಷ್ಯ ಬರೆದರು: ಆಕಾಶ್ ಚೋಪ್ರ!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ಫಾರತ್ಮ್ ಕಳೆದುಕೊಂಡು ಮಂಕಾಗಿದ್ದ ವಿರಾಟ್ ಕೊಒಹ್ಲಿ ಈ ಬಾರಿಯ ಟೂರ್ನಿಗೂ ಮುನ್ನ ಫಾರ್ಮ್ ಕಂಡುಕೊಂಡಿದ್ದು ಐಪಿಎಲ್‌ನಲ್ಲಿ ಅಬ್ಬರಿಸುವ ಭರವಸೆ ಮೂಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಭಾರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ 2016ರ ಐಪಿಎಲ್‌ನಲ್ಲಿ ಕೊಹ್ಲಿ ನೀಡಿದ ಬ್ಯಾಟಿಂಗ್ ಪ್ರದರ್ಶನವನ್ನು ಸ್ಮರಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ಸತತವಾಗಿ ಆಡುತ್ತಿದ್ದು ನಿರಂತರವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಪ್ರತಿ ಆವೃತ್ತಿಯಲ್ಲಿಯೂ ವಿರಾಟ್ ಕೊಹ್ಲಿ ಬೆಳವಣಿಗೆ ಸಾಧಿಸಿಕೊಂಡೇ ಬಂದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ 2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ ಮಾಡಿದ್ದರು. ಒಂದೇ ಆವೃತ್ತಿಯಲ್ಲಿ ಕೊಹ್ಲಿ 973 ರನ್‌ಗಳನ್ನು ಗಳಿಸಿ ಅಬ್ಬರಿಸಿದ್ದರು.
2016ರಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಆಕಾಶ್ ಚೋಪ್ರ ಸ್ಮರಿಸಿದ್ದು ಅಂದು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನ ಬ್ಯಾಟಿಂಗ್ ಶೈಲಿಗೆ ಹೊಸ ಭಾಷ್ಯವನ್ನು ಬರೆದರು ಎಂದು ಉಲ್ಲೇಖಿಸಿದ್ದಾರೆ. "ಈ ಹಿಂದೆ ವಿರಾಟ್ ಕೊಹ್ಲಿ ಹೆಚ್ಚಿನ ಪ್ರಮಾಣದಲ್ಲಿ ರನ್‌ಗಳಿಸುತ್ತಿದ್ದರು ಕೂಡ ಟಿ20 ಮಾದರಿಯ ಅತ್ಯುತ್ತಮ ರಾಕ್‌ಸ್ಟಾರ್ ಬ್ಯಾಟರ್ ಎಂದು ಪರಿಗಣಿಸುತ್ತಿರಲಿಲ್ಲ. ಅವರು ಹೆಚ್ಚಾಗಿ ಬೌಂಡರಿಗಳ ಮೂಲಕ ರನ್‌ಗಳನ್ನು ಗಳಿಸುತ್ತಿದ್ದರು. ಆಗಸದಲ್ಲಿ ಚೆಂಡನ್ನು ಬಾರಿಸಿ ಹತ್ತು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸುವಂತಾ ಶೈಲಿಯ ಬ್ಯಾಟಿಂಗ್ ಅವರದ್ದು ಅಲ್ಲ. ಆ ರೀತಿಯ ಆಟಗಾರ ಕೊಹ್ಲಿ ಅಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ
ಮುಂದುವರಿದು ಅವರು "ಆದರೆ 2016ರಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಗೆ ಹೊಸತನವನ್ನು ನೀಡಿದರು. ಸೂಕ್ತವಾದ ತಾಂತ್ರಿಕ ಸಾಮರ್ಥ್ಯದ ಮೂಲಕ ಅದರಲ್ಲೂ ಒಂದೆರಡಲ್ಲ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. ಆ ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ ಅಮೋಘವಾದದ್ದು" ಎಂದಿದ್ದಾರೆ ಆಕಾಶ್ ಚೋಪ್ರ.
ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಮೊದಲ ಆವೃತ್ತಿಯಿಂದಲೂ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿದ್ದು ಸಾಕಷ್ಟು ದಾಖಲೆಗಳನ್ನು ಬರೆದಿದ್ದು ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿಯೇ ಇದೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ: 2022 ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ನಾಯಕತ್ವ ತೊರೆದು ಪೂರ್ಣಪ್ರಮಾಣದ ಆಟಗಾರನಾಗಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ನಿಒರ್ಧರಿಸಿದ ಕಾರಣ ಕಳೆದ ಆವೃತ್ತಿಯಿಂದ ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡಿದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತ್ತು. ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳು ತಂಡದ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.
ಆರ್‌ಸಿಬಿ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್(ನಾಯಕ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications