Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2023: ಲಕ್ನೋ ಸೂಪರ್ ಜೈಂಟ್ಸ್ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಆಸಿಸ್ ಮಾಜಿ ನಾಯಕ

IPL 2023: Aaron Finch interesting prediction on KL Rahul led Lucknow Super Giants Team

ಕಳೆದ ಬಾರಿಯ ಐಪಿಎಲ್ ಮೂಲಕ ಮೊದಲ ಬಾರಿಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೊಚ್ಚಕ ಆವೃತ್ತಿಯಲ್ಲಿಯೇ ಪ್ಲೇಆಫ್‌ಗೆ ಪ್ರವೇಶಿಸಿ ಗಮನಸೆಳೆದಿತ್ತು. ಹಾಗಾಗಿ ಈ ಬಾರಿಯ ಆವೃತ್ತಿಯಲ್ಲಿಯೂ ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ ತಂಡದ ಮೇಲೆ ಸಾಕಷ್ಟು ನಿರೀಕ್ಷೆಯಿರುವುದು ಸುಳ್ಳಲ್ಲ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಈ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವುದಿಲ್ಲ ಎಂದಿದ್ದಾರೆ ಆಸಿಸ್ ಮಾಜಿ ನಾಯಕ ಫಿಂಚ್. ಇದಕ್ಕೆ ಕಾರಣವನ್ನು ಕೂಡ ಅವರು ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೂ ಮುನ್ನ ತಂಡಗಳ ಬಲಾಬಲದ ವಿಶ್ಲೇಷಣೆ ನಡೆಸಿದ ಆರೋನ್ ಫಿಂಚ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಗ್ಗೆ ಈ ರೀತಿಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಲಕ್ನೊ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿಲ್ಲ ಎಂದಿರುವ ಅವರು ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ. ಡೆತ್ ಓವರ್‌ನಲ್ಲಿ ರಾಹುಲ್ ಪಡೆ ಹಿನ್ನಡೆ ಅನುಭವಿಸಲಿದೆ, ಇದು ಮುಂದಿನ ಆವೃತ್ತಿಯಲ್ಲಿ ಲಕ್ನೋ ಪಡೆಗೆ ದುಬಾರಿಯಾಗಲಿದೆ ಎಂದು ಆರೋನ್ ಫಿಂಚ್ ಭವಿಷ್ಯ ನುಡಿದಿದ್ದಾರೆ.

"ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಆವೃತ್ತಿಯಲ್ಲಿ ದೌರ್ಬಲ್ಯವೆನಿಸಬಲ್ಲ ವಿಭಾಗವನ್ನು ನಾನು ಗುರುತಿಸಿದ್ದು ಡೆತ್ ಬೌಲಿಂಗ್ ವಿಭಾಗ ಹಿನ್ನಡೆ ಕಾಣಲಿದೆ. ಮಧ್ಯಮ ಓವರ್‌ಗಳಲ್ಲಿ ಅವರು ಸಾಕಷ್ಟು ಅವಕಾಶಗಳನ್ನು ಹೊಂದಿದ್ದಾರೆ. ಕೆಲ ಉತ್ತಮ ಆಲ್‌ರೌಂಡರ್‌ಗಳು ಕೂಡ ಅವರಲ್ಲಿದ್ದಾರೆ. ಆದರೆ ಸಂಯೋಜನೆಯನ್ನು ನೋಡಿದಾಗ ಕೊನೆಯ ನಾಲ್ಕು ಓವರ್‌ಗಳ ಅವಧಿ ಪ್ರಶ್ನೆ ಮೂಡಿಸುತ್ತದೆ. ಅದು ಅವರಿಗೆ ನಿಜವಾದ ಸವಾಲಾಗಿರಲಿದೆ" ಎಂದಿದ್ದಾರೆ ಆರೋನ್ ಫಿಂಚ್.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಸೂಕ್ತವಾದ ನಾಲ್ವರು ವಿದೇಶಿ ಆಟಗಾರರನ್ನು ಹೆಸರಿಸುವಂತೆ ಕೇಳಿಕೊಂಡಾಗ ಫಿಂಚ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಓರ್ವ ಆಟಗಾರನನ್ನು ಅವರು ಆಯ್ಕೆ ಮಾಡಿದ್ದಾರೆ. "ನನ್ನ ಪ್ರಕಾರ ಲಕ್ನೋ ಸೂಪರ ಜೈಂಟ್ಸ್ ತಂಡದ ಪ್ರಥಮ ಆಯ್ಕೆಯ ನಾಲ್ವರು ವಿದೇಶಿ ಆಟಗಾರರು ಎಂದರೆ ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್ ಹಾಗೂ ಮಾರ್ಕ್ ವುಡ್" ಎಂದಿದ್ದಾರೆ ಆರೋಬ್ ಫಿಂಚ್.

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಪಂದ್ಯದ ಗತಿ ಬದಲಾಯಿಸಬಲ್ಲ ಆಟಗಾರನನ್ನು ಕೂಡ ಫಿಂಚ್ ಹೆಸರಿಸಿದರು. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಪಂದ್ಯದ ಗತಿ ಬದಲಾಯಿಸಬಲ್ಲ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ.

2022ರ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿತು. ಮೊದಲ ಆವೃತ್ತಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿರುವ ಲಕ್ನೋ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು. ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ ತಂಡ ಪ್ಲೇಆಫ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡು ಮೊದಲ ಆವೃತ್ತಿಯ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿಯೂ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಕರಣ್ ಶರ್ಮಾ, ಮಾರ್ಕಸ್ ಸ್ಟೋನಿಸ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ಯುದ್ಧವೀರ್ ಚರಕ್, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್, ಜಯದೇವ್ ಉನದ್ಕತ್, ಯಶ್ ಠಾಕೂರ್, ಅಮಿತ್ ಮಿಶ್ರಾ, ನವೀನ್-ಉಲ್-ಹಕ್.

Story first published: Wednesday, March 29, 2023, 2:30 [IST]
Other articles published on Mar 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+