Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2023: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅವರಿಬ್ಬರೇ ಬಲ ಎಂದ ಆಸಿಸ್ ಮಾಜಿ ನಾಯಕ

IPL 2023: Aaron Finch said Lucknow Super Giants biggest strength is their two openers in IPL 2023

ಕಳೆದ ಬಾರಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಎರಡು ನೂತನ ತಂಡಗಳ ಪೈಕಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಒಂದು. ಚೊಚ್ಚಲ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿಯೂ ಅಂಥಾದ್ದೇ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ ಎಲ್‌ಎಸ್‌ಜಿ ಪಡೆ. ಈ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಗ್ಗೆ ಕೆಲ ಕುತೂಹಲಕಾರಿ ಅನಿಸಿಕೆ ಹಂಚಿಕೊಂಡಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್.

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇಬ್ಬರು ಆಟಗಾರರೇ ದೊಡ್ಡ ಬಲ ಎಂದಿದ್ದಾರೆ ಆರೋನ್ ಫಿಂಚ್. ಆ ಇಬ್ಬರ ಮೇಲೆ ಲಕ್ನೋ ಪಡೆ ಅತಿಯಾಗಿ ಅವಲಂಬಿತವಾಗಿದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು. ಆ ಇಬ್ಬರು ಆಟಗಾರರು ಬೇರೆ ಯಾರೂ ಅಲ್ಲ. ನಾಯಕ ಕೆಎಲ್ ರಾಹುಲ್ ಹಾಗೂ ಅನುಭವಿ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್.

ಐಪಿಎಲ್ 16ನೇ ಆವೃತ್ತಿಯ ಹಿನ್ನೆಲೆಯಲ್ಲಿ ಲಕ್ನೋ ಫ್ಆಂಚೈಸಿಯ ವಿಶ್ಲೇಷಣೆ ನಡೆಸಿದ ಆರೋನ್ ಫಿಂಚ್ ತಂಡದ ಆರಂಭಿಕ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ವಿಂಟನ್ ಡಿಕಾಕ್ ಹಾಗೂ ಕೆಎಲ್ ರಾಹುಲ್ ಮಧ್ಯೆ ಉತ್ತಮವಾದ ಹೊಂದಾಣಿಕೆಯಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ಬೆನ್ನು ತಟ್ಟುತ್ತಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ.

"ಅವರಿಬ್ಬರು ಭಿನ್ನವಾದ ಆಟಗಾರರು. ಇಬ್ಬರಿಗೂ ಪರಸ್ಪರರ ಬಲ ಹಾಗೂ ದೌರ್ಬಲ್ಯಗಳ ಬಗ್ಗೆ ತಿಳಿದಿದೆ. ನನ್ನ ಪ್ರಕಾರ ಇವರಿಬ್ಬರಿಗೂ ಇದು ದೊಡ್ಡ ಆವೃತ್ತಯಾಗಿರಲಿದೆ. ಈ ಬಾರಿ ಎಲ್‌ಎಸ್‌ಜಿ ತಂಡಕ್ಕೆ ತವರಿನ ಮೈದಾನದ ಲಾಭವೂ ದೊರೆಯಲಿದೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಪಿಂಚ್.

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಪಂದ್ಯದ ಗತಿ ಬದಲಾಯಿಸಬಲ್ಲ ಆಟಗಾರನನ್ನು ಕೂಡ ಫಿಂಚ್ ಹೆಸರಿಸಿದರು. ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಪಂದ್ಯದ ಗತಿ ಬದಲಾಯಿಸಬಲ್ಲ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ.

2022ರ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿತು. ಮೊದಲ ಆವೃತ್ತಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿರುವ ಲಕ್ನೋ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು. ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ ತಂಡ ಪ್ಲೇಆಫ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡು ಮೊದಲ ಆವೃತ್ತಿಯ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿಯೂ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಕರಣ್ ಶರ್ಮಾ, ಮಾರ್ಕಸ್ ಸ್ಟೋನಿಸ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ಯುದ್ಧವೀರ್ ಚರಕ್, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್, ಜಯದೇವ್ ಉನದ್ಕತ್, ಯಶ್ ಠಾಕೂರ್, ಅಮಿತ್ ಮಿಶ್ರಾ, ನವೀನ್-ಉಲ್-ಹಕ್.

Story first published: Tuesday, March 28, 2023, 2:30 [IST]
Other articles published on Mar 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+