Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಸೆಲ್ vs ರಿಂಕು ಸಿಂಗ್: ರಿಂಕು ಬಾರಿಸಿದ 1 ರನ್ ಬೆಲೆ 11603, ರಸೆಲ್ ಬಾರಿಸಿದ 1 ರನ್ ಬೆಲೆ ಅಬ್ಬಬ್ಬಾ!

IPL 2023: Andre Russell vs Rinku Singh cost per run comparison

ಮಾರ್ಚ್ ತಿಂಗಳ ಕೊನೆಯಲ್ಲಿ ಆರಂಭಗೊಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ನಿನ್ನೆ ( ಮೇ 23 ) ನಡೆದ ಟೂರ್ನಿಯ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ 15 ರನ್‌ಗಳ ಗೆಲುವನ್ನು ದಾಖಲಿಸಿ ಫೈನಲ್ ಪ್ರವೇಶಿಸಿದರೆ, ಸೋತ ಗುಜರಾತ್ ಟೈಟನ್ಸ್ ಎರಡನೇ ಕ್ವಾಲಿಫಯರ್ ಆಡಲು ಸಜ್ಜಾಗಿದೆ.

ಈ ತಂಡಗಳ ಜತೆಗೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಿವೆ. ಇನ್ನು ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ರೇಸ್‌ನಲ್ಲಿದ್ದು ಕೊನೆಯ ಹಂತದಲ್ಲಿ ಪಂದ್ಯಗಳನ್ನು ಸೋಲುವ ಮೂಲಕ ಅರ್ಹತೆ ಕಳೆದುಕೊಂಡಿದ್ದ ತಂಡಗಳಲ್ಲಿ ಒಂದು.

ಈ ತಂಡ 14 ಪಂದ್ಯಗಳಲ್ಲಿ ಕಣಕ್ಕಿಳಿದು 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ ಒಂದು ರನ್ ಅಂತರದಿಂದ ಸೋತು ಪ್ಲೇಆಫ್ ರೇಸ್‌ನಿಂದ ಹೊರಬಿದ್ದು, ಎಲಿಮಿನೇಟ್ ಆಗಿತ್ತು.

ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 177 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ರಿಂಕು ಸಿಂಗ್ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ್ದರು. ತಂಡ ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದಾಗ ತಾಳ್ಮೆಯಿಂದ ಬ್ಯಾಟ್ ಬೀಸಿದ್ದ ರಿಂಕು ಸಿಂಗ್ ವೀಕ್ಷಕರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವ ಮಟ್ಟಕ್ಕೆ ಬ್ಯಾಟ್ ಬೀಸಿ ಗೆಲುವಿನ ಸನಿಹಕ್ಕೆ ತಂದಿದ್ದರು. ಅದರಲ್ಲಿಯೂ ಗೆಲ್ಲಲು ಕೊನೆಯ 12 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದ್ದಾಗ ನವೀನ್ ಉಲ್ ಹಕ್ ಮಾಡಿದ 19ನೇ ಓವರ್‌ನಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 20 ರನ್ ಬಾರಿಸಿದ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿರಾದರೂ ಸಹ ಒಂದು ರನ್‌ನಿಂದ ತಂಡ ಸೋತಿತ್ತು.

ಕೇವಲ ಈ ಪಂದ್ಯ ಮಾತ್ರವಲ್ಲದೇ ಗುಜರಾತ್ ಟೈಟನ್ಸ್ ವಿರುದ್ಧ ಸತತ 5 ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದಿಟ್ಟಿದ್ದರು. ಕೇವಲ ಈ ಎರಡು ಪಂದ್ಯಗಳು ಮಾತ್ರವಲ್ಲದೇ ಟೂರ್ನಿಯುದ್ದಕ್ಕೂ ಸಹ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೆಕೆಆರ್ ಪರ ಆಂಡ್ರೆ ರಸೆಲ್ ಯಾವ ರೀತಿ ಅಬ್ಬರಿಸಿದ್ದರೋ ಅದೇ ಕೆಲಸವನ್ನು ರಿಂಕು ಸಿಂಗ್ ಈ ಬಾರಿ ಹೆಚ್ಚಾಗಿಯೇ ಮಾಡಿದ್ದಾರೆ.

ಆದರೆ ಈ ಬಾರಿ ರಸೆಲ್ ಅಬ್ಬರಿಸುವಲ್ಲಿ ಮಂಕಾಗಿದ್ದು, ಅವರ ಸ್ಥಾನವನ್ನು ರಿಂಕು ಸಿಂಗ್ ತುಂಬಿದ್ದಾರೆ ಎಂದೇ ಹೇಳಬಹುದು. ಆದರೆ ರಸೆಲ್‌ಗೆ 12 ಕೋಟಿ ಕೊಟ್ಟು ರಿಟೇನ್ ಮಾಡಿಕೊಂಡಿದ್ದರೆ, ರಿಂಕು ಸಿಂಗ್‌ಗೆ ಕೇವಲ 55 ಲಕ್ಷ ರೂಪಾಯಿಗಳನ್ನು ನೀಡಿದೆ ಕೆಕೆಆರ್ ಫ್ರಾಂಚೈಸ್.

ಹೀಗಿರುವಾಗ ಈ ಬಾರಿಯ ಟೂರ್ನಿಯಲ್ಲಿ ಈ ಇಬ್ಬರೂ ಆಟಗಾರರು ಸಹ ಕಲೆಹಾಕಿರುವ ರನ್‌ಗಳ ಬಗ್ಗೆ ಹೋಲಿಕೆ ಶುರುವಾಗಿದ್ದು, ಇಬ್ಬರೂ ಪಡೆದುಕೊಂಡಿರುವ ಮೊತ್ತದ ಪ್ರಕಾರ ಅವರು ಗಳಿಸಿರುವ ರನ್‌ ಒಂದಕ್ಕೆ ಎಷ್ಟು ಹಣ ತಗುಲಿತು ಎಂಬುದನ್ನು ಕ್ರಿಕೆಟ್ ಪ್ರಿಯರು ಎಣಿಸಿ ಚರ್ಚಿಸಿದ್ದಾರೆ.

55 ಲಕ್ಷ ಪಡೆದಿರುವ ರಿಂಕು ಸಿಂಗ್ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 14 ಇನ್ನಿಂಗ್ಸ್ ಆಡಿದ್ದು, 474 ರನ್ ಗಳಿಸಿದ್ದಾರೆ. ಈ ಮೂಲಕ ರಿಂಕು ಸಿಂಗ್‌ ಗಳಿಸಿದ ಒಂದು ರನ್‌ಗೆ 11,603 ರೂಪಾಯಿ ವೆಚ್ಚ ತಗುಲಿದ್ದರೆ, 12 ಕೋಟಿ ಪಡೆದ ಆಂಡ್ರೆ ರಸೆಲ್ 14 ಇನ್ನಿಂಗ್ಸ್ ಆಡಿ 227 ರನ್ ಗಳಿಸಿದ್ದಾರೆ ಹಾಗೂ ರಸೆಲ್ ಗಳಿಸಿದ ರನ್ ಒಂದಕ್ಕೆ 5,28,634 ರೂಪಾಯಿಯಾಗಿದೆ. ಸದ್ಯ ಈ ರೀತಿಯ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟ್ರೋಲ್ ಆಗ್ತಿದೆ.

Story first published: Wednesday, May 24, 2023, 11:23 [IST]
Other articles published on May 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+