Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಪಾರ್ಟಿಯಲ್ಲಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ!

IPL 2023: As per reports Delhi Capitals player misbehaved with a woman during party

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯ ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಿವೆ. ಎಲ್ಲಾ ತಂಡಗಳು ತಮ್ಮ ಮೊದಲ ಏಳು ಪಂದ್ಯಗಳು ಮುಕ್ತಾಯವಾದ ಬಳಿಕ ಪ್ಲೇಆಫ್ ಅವಕಾಶಕ್ಕೆ ಹತ್ತಿರವಾಗುವತ್ತ ಯೋಚಿಸುತ್ತಿವೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಸತತವಾಗಿ ಐದು ಪಂದ್ಯಗಳಲ್ಲಿ ಸೋತ ಬಳಿಕ ಎರಡು ಪಂದ್ಯಗಳಲ್ಲಿ ಗೆದ್ದು ಈಗಷ್ಟೇ ಗೆಲುವಿನ ಖಾತೆ ತೆರೆದಿದೆ. ಹೀಗೆ ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ಮುಗಿಯುವ ಹೊತ್ತಿಗೆ ಮೊದಲ ಗೆಲುವನ್ನು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 4 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಹೀಗೆ ಹೀನಾಯ ಸ್ಥಿತಿಯಲ್ಲಿದ್ದು, ಮುಖಭಂಗಕ್ಕೊಳಗಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೈದಾನದಿಂದಾಚೆ ಸಹ ವಿವಾದವನ್ನು ಮಾಡಿಕೊಂಡು ಮುಖಭಂಗವನ್ನು ಅನುಭವಿಸುವಂತಾಗಿದೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಗೆಲುವಿನ ರುಚಿ ಕಂಡಿತ್ತು. ಈ ಮೊದಲ ಗೆಲುವನ್ನು ಸಂಭ್ರಮಿಸುವ ವೇಳೆ ನಡೆದ ಪಾರ್ಟಿಯೊಂದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೋರ್ವ ತಾವು ತಂಗಿದ್ದ ಹೊಟೇಲ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹೊಸ ನಿಯಮವನ್ನು ಜಾರಿಗೆ ತಂದು ಪ್ರತಿಕ್ರಿಯೆ ನೀಡಿದೆ.

ಹೌದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿರುವ ಒಂದು ವರದಿಯ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನೀತಿ ಸಂಹಿತೆಯೊಂದನ್ನು ಜಾರಿಗೆ ತಂದಿದೆ ಎಂದು ಹೇಳಲಾಗಿದೆ. ಈ ನೀತಿ ಸಂಹಿತೆ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್‌ನ ಯಾವುದೇ ಆಟಗಾರ ಸಹ ರಾತ್ರಿ 10 ಗಂಟೆ ಬಳಿಕ ಯಾವುದೇ ಅತಿಥಿಯನ್ನೂ ತಮ್ಮ ವೈಯಕ್ತಿಕ ಕೋಣೆಗಳಿಗೆ ಕರೆತರುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಮೀರಿಯೂ ರೂಮ್‌ಗೆ ಅತಿಥಿ ಕರೆತರುವ ಆಟಗಾರನಿಗೆ ದಂಡ ಹಾಕಲಿದ್ದು, ಫ್ರಾಂಚೈಸಿ ಜತೆಗಿನ ಒಪ್ಪಂದ ಕಡಿತಗೊಳ್ಳುವ ಸಾಧ್ಯತೆ ಸಹ ಇದೆ ಎಂದು ಎಚ್ಚರಿಸಿದೆ.

ಇನ್ನು ಆಟಗಾರರು ಅತಿಥಿಗಳನ್ನು ಹೊಟೇಲ್‌ಗೆ ಕರೆತರಬಹುದಾಗಿದ್ದು, ತಮ್ಮ ವೈಯಕ್ತಿಕ ರೂಮ್‌ಗೆ ಹತ್ತು ಗಂಟೆಯ ಬಳಿಕ ಕರೆತರುವಂತಿಲ್ಲ, ಆದರೆ ಹೊಟೇಲ್‌ನ ಸಾಮಾನ್ಯ ಪ್ರದೇಶ ಹಾಗೂ ಕೆಫೆಟೇರಿಯಾಗಳಲ್ಲಿ ಅತಿಥಿಗಳ ಜತೆ ಭೇಟಿಯಾಗಬಹುದು, ಮಾತನಾಡಬಹುದು ಎಂದು ನಿಯಮವನ್ನು ಹಾಕಿದೆ. ಈ ರೀತಿ ನಿಯಮವನ್ನು ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಎಲ್ಲಿಯೂ ಸಹ ಮಹಿಳೆ ಜತೆ ತಮ್ಮ ಆಟಗಾರನೋರ್ವ ಅನುಚಿತವಾಗಿ ವರ್ತಿಸಿದ್ದನ್ನು ಉಲ್ಲೇಖಿಸಿಲ್ಲ.

ಆದರೆ ಪರೋಕ್ಷವಾಗಿ ಈ ರೀತಿಯ ನಿಯಮವನ್ನು ಮಾಡುವ ಮೂಲಕ ಅಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವುದಂತೂ ಸತ್ಯ. ಇನ್ನು ಈ ವಿವಾದ ಮಾತ್ರವಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಇದಕ್ಕೂ ಮುನ್ನ ಮತ್ತೊಂದು ವಿವಾದಕ್ಕೆ ಒಳಗಾಗಿತ್ತು. ತಮ್ಮ ತಂಡದ ಕಿಟ್‌ಗಳು, ಬ್ಯಾಟ್‌ಗಳನ್ನು ಕಳೆದುಕೊಂಡಿತ್ತು.

ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದು 5 ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಈ ಮೂಲಕ ಪ್ಲೇಆಫ್ ರೇಸ್‌ನಿಂದ ಈಗಾಗಲೇ ತುಸು ದೂರ ಉಳಿದಿರುವ ಡೆಲ್ಲಿ ಕ್ಯಾಪಿಟಲ್ಸ್ ಉಳಿದಿರುವ 7 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಲೇಬೇಕಿದೆ.

Story first published: Thursday, April 27, 2023, 21:42 [IST]
Other articles published on Apr 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+