ಐಪಿಎಲ್ ಮಿನಿ ಹರಾಜು 2023: ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಸ್ ಗೇಲ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವರ್ಣರಂಜಿತ ದಾಖಲೆಗಳನ್ನು ಬರೆದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ವಿಂಡೀಸ್ ದಿಗ್ಗಜ ಗ್ರಿಸ್ ಗೇಲ್ ಸಕ್ರಿಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕ್ರಿಸ್ ಗೇಲ್ ಮತ್ತೆ ಅಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಬದಲಾಗಿ ವಿಶೇಷ ಜವಾಬ್ಧಾರಿಯೊಂದಿಗೆ ಗೇಲ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ 2023ರ ಆವೃತ್ತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. 10 ತಂಡಗಳು ಮಿನಿ ಹರಾಜಿನಲ್ಲಿರುವ ಆಟಗಾರರ ಪೈಕಿ ತಮಗೆ ಪೂರಕವೆನಿಸುವ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಲಿದೆ. ಈ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಕ್ರಿಸ್ ಗೇಲ್ ವಿಶ್ಲೇಷಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಾರಿಯ ಐಪಿಎಲ್‌ನ ಸ್ಟ್ರೀಮಿಂಗ್ ಪಾರ್ಟರ್‌ಆಗಿರುವ ವಯಕಾಮ್ 18 ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಜಿಯೋ ಸಿನಿಮಾ ಮೂಲಕ ವೀಕ್ಷಕರಿಗೆ ಪ್ರಸ್ತುತಪಡಿಸಲಿದೆ. ಈ ಸಂದರ್ಭದಲ್ಲಿ ಜಿಸೋ ಸಿನಿಮಾದಲ್ಲಿ ವಿಶ್ಲೇಷಕರಾಗಿ ಕ್ರಿಸ್ ಗೇಲ್ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಜಿಯೋ ಸಿನಿಮಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ.
ವಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಒಟ್ಟು ಮೂರು ತಮಡಗಳ ಕಾಲ ಆಡಿದ್ದಾರೆ. ಆರಂಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಕ್ರಿಸ್ ಗೇಲ್ ಬಳಿಕ ಆರ್‌ಸಿಬಿ ತಂಡದಲ್ಲಿ ಸುದೀರ್ಘ ಕಾಲ ಇದ್ದರು. ಬಳಿಕ ಪಂಜಾಬ್ ಕಿಂಗ್ಸ್ ತಂಡದಲ್ಲಿಯೂ ಆಡಿದ್ದಾರೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 142 ಪಂದ್ಯಗಳನ್ನು ಆಡಿರುವ ಗೇಲ್ 4965 ರನ್‌ಗಳನ್ನು ಗಳಿಸಿದ್ದು 148.96ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 39.72ರ ಸರಾಸರಿಯಲ್ಲಿ ಗೇಲ್ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು ಕ್ರಿಸ್ ಗೇಲ್ ಇನ್ನಿಂಗ್ಸ್‌ವೊಂದರಲ್ಲಿ 175 ರನ್‌ಗಳಿಸಿರುವುದು ಐಪಿಎಲ್ ಇತಿಹಾಸದಲ್ಲಿ ಇನ್ನೂ ದಾಖಲೆಯಾಗಿಯೇ ಉಳಿದುಕೊಂಡಿದ್ದು ಪುಣೆ ವಾರಿಯರ್ಸ್ ವಿರುದ್ಧ ಈ ಸ್ಕೋರ್ ಬಾರಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ ಗೇಲ್ ಒಟ್ಟು 405 ಬೌಂಡರಿ ಹಾಗೂ 357 ಸಿಕ್ಸರ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications