IPL Auction: ಐಪಿಎಲ್ ಹರಾಜಿನಲ್ಲಿ ಸೋಲ್ಡ್ ಆಗದೇ ಉಳಿಯಬಹುದಾದ 5 ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ದುಬೈನಲ್ಲಿ ಡಿಸೆಂಬರ್ 19ರಂದು ನಡೆಯಲಿದೆ. ಐಪಿಎಲ್ ಹರಾಜಿನ ಮೊದಲು, ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ಇದಕ್ಕೆ ನವೆಂಬರ್ 26ರ ಭಾನುವಾರ ಕೊನೆಯ ದಿನಾಂಕವಾಗಿದೆ.
ಈ ದಿನಾಂಕದೊಳಗೆ ಎಲ್ಲಾ ತಂಡಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗುತ್ತದೆ. ಆದರೆ ಈ ಹರಾಜಿಗೂ ಮುನ್ನ ಅನೇಕ ದೊಡ್ಡ ಆಟಗಾರರನ್ನು ಬಿಡುಗಡೆ ಮಾಡಬಹುದು. ಈ ಆಟಗಾರರು ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದಾದ, ಅಂದರೆ ಯಾವುದೇ ತಂಡವು ಬಿಡ್ ಮಾಡುವುದಿಲ್ಲ. ಈ ಪಟ್ಟಿಯಲ್ಲಿ ಅನೇಕ ದೊಡ್ಡ ಹೆಸರುಗಳನ್ನು ಸೇರಿಸಲಾಗಿದೆ.

ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಆದರೆ ರಾಜಸ್ಥಾನ್ ರಾಯಲ್ಸ್ ಜೋ ರೂಟ್ ಅವರನ್ನು ಬಿಡುಗಡೆ ಮಾಡುವ ಮೊದಲೇ 2024ರ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
ಇದೇ ಸಮಯದಲ್ಲಿ ಜೋ ರೂಟ್ ಅವರನ್ನು ರಾಜಸ್ಥಾನ್ ರಾಯಲ್ಸ್ ಕೈ ಬಿಟ್ಟು ಹರಾಜಿನ ಭಾಗವಾಗಿದ್ದರೆ, ಬಹುಶಃ ಯಾವುದೇ ತಂಡವು ಮಾಜಿ ಇಂಗ್ಲೆಂಡ್ ನಾಯಕನ ಮೇಲೆ ಬಾಜಿ ಕಟ್ಟುತ್ತಿರಲಿಲ್ಲ. ಹೀಗಾಗಿ ಜೋ ರೂಟ್ ಹರಾಜಿನಲ್ಲಿ ಮಾರಾಟವಾಗದೆ ಉಳಿಯುತ್ತಿದ್ದರು.
ಸರ್ಫರಾಜ್ ಖಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡುಗಡೆ ಮಾಡಬಹುದು. ಈ ಮೂಲಕ ಸರ್ಫರಾಜ್ ಖಾನ್ ಹರಾಜಿನ ಭಾಗವಾಗಲಿದ್ದಾರೆ. ಆದರೆ, ಈಗ ತಂಡಗಳು ಸರ್ಫರಾಜ್ ಖಾನ್ ಬಗ್ಗೆ ಆಸಕ್ತಿ ತೋರಿಸುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ. ಒಂದು ವೇಳೆ ತಂಡಗಳು ಸರ್ಫರಾಜ್ ಖಾನ್ ಬಗ್ಗೆ ಆಸಕ್ತಿ ತೋರಿಸದಿದ್ದರೆ, ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಈ ಯುವ ಬ್ಯಾಟ್ಸ್‌ಮನ್ ಮಾರಾಟವಾಗದೆ ಉಳಿಯಬಹುದು.

ಶ್ರೀಲಂಕಾದ ಆಲ್‌ರೌಂಡರ್ ದಸುನ್ ಶನಕ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ. ಆದರೆ, ಗುಜರಾತ್ ಟೈಟನ್ಸ್ ದಸುನ್ ಶನಕ ಅವರನ್ನು ಬಿಡುಗಡೆ ಮಾಡಬಹುದು ಎಂದು ನಂಬಲಾಗಿದೆ. ಇದಾದ ನಂತರ ದಸುನ್ ಶನಕ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂಡಗಳು ದಸುನ್ ಶನಕ ಅವರನ್ನು ಬಿಡ್ ಮಾಡದಿದ್ದರೆ, ಈ ಆಲ್‌ರೌಂಡರ್ ಅನ್‌ಸೋಲ್ಡ್ ಆಗಿ ಉಳಿಯಬಹುದು.
ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಶಕೀಬ್ ಅಲ್ ಹಸನ್ ಇತ್ತೀಚೆಗೆ ಗಾಯಗೊಂಡಿದ್ದರು. ಅದೇ ಸಮಯದಲ್ಲಿ, ಈಗ ಕೋಲ್ಕತ್ತಾ ನೈಟ್ ರೈಡರ್ಸ್ ಶಕೀಬ್ ಅಲ್ ಹಸನ್ ಅವರನ್ನು ಕೈ ಬಿಡಬಹುದು. ಶಕೀಬ್ ಅಲ್ ಹಸನ್ ಅವರ ಇತ್ತೀಚಿನ ಪ್ರದರ್ಶನ ಸ್ಥಿರವಾಗಿಲ್ಲ. ಹೀಗಾಗಿ ಶಕೀಬ್ ಮಾರಾಟವಾಗದೇ ಉಳಿಯಲಿದ್ದಾರೆ.

ಕಳೆದ ಋತುವಿನಲ್ಲಿ, ಮುಂಬೈ ಇಂಡಿಯನ್ಸ್ ಬದಲಿ ಆಟಗಾರನಾಗಿ ಇಂಗ್ಲೆಂಡ್ ಆಲ್‌ರೌಂಡರ್ ಕ್ರಿಸ್ ಜೋರ್ಡಾನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿತ್ತು. ಆದರೆ ಇದೀಗ ಕ್ರಿಸ್ ಜೋರ್ಡಾನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಜೋರ್ಡಾನ್ ಹರಾಜಿಗೆ ಬಂದರೆ, ಫ್ರಾಂಚೈಸಿಗಳ ಚಿತ್ತ ಕದಿಯುವಲ್ಲಿ ವಿಫಲರಾಗಬಹುದು ಎಂದು ಊಹಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications