IPL 2023: ಡಗೌಟ್‌ನಲ್ಲಿ ರಿಷಬ್ ಪಂತ್ ಜೆರ್ಸಿ ನೇತುಹಾಕಿದ್ದಕ್ಕೆ ಬಿಸಿಸಿಐ ಅಸಮಾಧಾನ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ರಿಷಬ್ ಪಂತ್ ಅವರ ಅನುಪಸ್ಥಿತಿಯನ್ನು ಹೆಚ್ಚಾಗಿ ಅನುಭವಿಸುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಅವರ ಜೆರ್ಸಿಯನ್ನು ನೇತುಹಾಕುವ ಮೂಲಕ ಅವರ ಬಗ್ಗೆ ವಿಶೇಷವಾದ ಭಾವನೆಯನ್ನು ವ್ಯಕ್ತಪಡಿಸಿತ್ತು. ನಾಯಕ ಡೇವಿಡ್ ವಾರ್ನರ್ ಕೂಡ ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್‌ನ ಈ ವರ್ತನೆಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಡಗೌಟ್‌ನಲ್ಲಿ ರಿಷಬ್ ಪಂತ್ ಜೆರ್ಸಿ ನೇತು ಹಾಕಿರುವುದು ಅವರಿಗೆ ಒಪ್ಪಿಗೆಯಾಗಿಲ್ಲ. ಈ ರೀತಿ ಮಾಡುವುದು ಅನವಶ್ಯಕ ಎಂದು ಬಿಸಿಸಿಐ ಹೇಳಿದೆ. ರಿಷಬ್ ಪಂತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ಶೀಘ್ರದಲ್ಲೇ ಮೈದಾನಕ್ಕೆ ಬರುವ ಬಗ್ಗೆ ಕೂಡ ವಿಶ್ವಾಸ ಇದೆ, ಆದರೆ ಈ ರೀತಿ ಜೆರ್ಸಿ ನೇತು ಹಾಕುವುದು ದುರಂತದ ಸಂದರ್ಭದಲ್ಲಿ ಮಾತ್ರ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.

"ಇದು ಸ್ವಲ್ಪ ಅತಿಯಾದಂತೆ ಕಾಣುತ್ತದೆ. ಅಂತಿಮ ದುರಂತ ಅಥವಾ ಆಟಗಾರ ನಿವೃತ್ತಿಯಾದ ಸಂದರ್ಭದಲ್ಲಿ ಮಾತ್ರ ಈ ರೀತಿ ಮಾಡುವುದಕ್ಕೆ ಅವಖಾಶ ಇರುತ್ತದೆ. ಆದರೆ, ಈಗ ಇದೆರಡೂ ಆಗಿಲ್ಲ, ರಿಷಭ್ ಅವರು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಗೌರವ ನೀಡುವ ಉದ್ದೇಶದಿಂದ ಈ ರೀತಿ ಮಾಡಿದ್ದರೂ, ಮುಂದಿನ ಪಂದ್ಯಗಳಲ್ಲಿ ಈ ರೀತಿ ವರ್ತನೆ ತೋರದಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಬಿಸಿಸಿಐ ಹೇಳಿದೆ" ಎಂದು ಐಪಿಎಲ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ತವರಿನ ಪಂದ್ಯವನ್ನು ನೋಡಲು ಬರಲಿದ್ದಾರೆ ಪಂತ್
ಇದೆಲ್ಲದರ ನಡುವೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಂತೋಷದ ಸುದ್ದಿ ಸಿಕ್ಕಿದೆ. ಏಪ್ರಿಲ್ 4ರಂದು ನಡೆಯಲಿರುವ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ರಿಷಬ್ ಪಂತ್ ಮೈದಾನಕ್ಕೆ ಬರಲಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಅಪಘಾತದಲ್ಲಿ ಗಾಯಗೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಮೈದಾನಕ್ಕೆ ಬರುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬಿಸಿಸಿಐನ ಭ್ರಷ್ಟಾಚಾರ-ವಿರೋಧಿ ಮತ್ತು ಭದ್ರತಾ ಘಟಕದಿಂದ (ACSU) ಅನುಮತಿ ಪಡೆಯುವಲ್ಲಿ ಯಶಸ್ವಿಯಾದರೆ, ರಿಷಬ್ ಪಂತ್ ಡಗೌಟ್‌ನಲ್ಲಿ ಆಟಗಾರರ ಜೊತೆ ಕೆಲ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಎಸಿಎಸ್‌ಯು ಅನುಮತಿ ನೀಡದ ಹೊರತು ಆಟಗಾರರು, ಸಿಬ್ಬಂದಿ ಹೊರತು ಪಡಿಸಿ ಬೇರೆಯವರು ಡಗೌಟ್‌ನಲ್ಲಿ ಇರುವಂತಿಲ್ಲ ಎನ್ನುವ ನಿಯಮ ಇದೆ.

ಇತ್ತೀಚೆಗೆ ಬಂದಿರುವ ವರದಿಯ ಪ್ರಕಾರ, ಒಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಆಟಗಾರರು ರಿಷಬ್ ಪಂತ್ ಅವರ ಸಂಖ್ಯೆಯನ್ನು ಹೊಂದಿರುವ ಜೆರ್ಸಿಯನ್ನು ಧರಿಸಿ ಆಡಲಿದ್ದಾರೆ ಎಂದು ವರದಿಯಾಗಿದೆ. ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ರಿಷಬ್ ಪಂತ್‌ರನ್ನು ತಂಡ ಮಿಸ್ ಮಾಡಿಕೊಳ್ಳದಂತೆ ಮಾಡಲು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಕನಿಷ್ಠ 9 ತಿಂಗಳು ಅವರು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೂ ಅವರು ಆ ಸಮಯಕ್ಕೆ ನಿಖರವಾಗಿ ಫಿಟ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಅವರು ವಿಶೇಷವಾದ ಬಾಂಧವ್ಯ ಹೊಂದಿದ್ದಾರೆ. ಈ ಬಾರಿ ಐಪಿಎಲ್‌ನಿಂದ ಹೊರುಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications