IPL 2023: ಹರ್ಷಲ್ ಪಟೇಲ್ ಮಂಕಡ್ ಪ್ರಯತ್ನದ ಬಗ್ಗೆ ಬೆನ್‌ಸ್ಟೋಕ್ಸ್ ಹೇಳಿದ್ದೇನು?
ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಆರ್ ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ರವಿ ಬಿಷ್ಣೋಯ್‌ರನ್ನು ನಾನ್‌ಸ್ಟ್ರೈಕರ್ ಎಂಡ್‌ನಲ್ಲಿ ರನ್‌ಔಟ್ ಮಾಡುವಲ್ಲಿ ವಿಫಲವಾದರು. ಒಂದು ವೇಳೆ ಹರ್ಷಲ್ ಪಟೇಲ್ ಇದರಲ್ಲಿ ಯಶಸ್ವಿಯಾಗಿದ್ದರೆ ಪಂದ್ಯ ಡ್ರಾನಲ್ಲಿ ಅಂತ್ಯವಾಗುತ್ತಿತ್ತು, ಅವರು ರನೌಟ್ ಮಾಡುವಲ್ಲಿ ಎಡವಿದ್ದರಿಂದ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿದ ಲಕ್ನೋ ಸೂಪರ್ ಜೈಂಟ್ಸ್ ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿತು.
ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡುವುದು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿದೆ. ಆರ್ ಸಿಬಿ ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲಿ ಹರ್ಷಲ್ ಪಟೇಲ್ ಮಂಕಡ್ ಮಾಡಲು ವಿಫಲವಾದ ನಂತರ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಸ್‌ನಿಂದ ಬೇಗನೆ ಹೊರಡುವ ಮೂಲಕ ಅನ್ಯಾಯದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುವ ಬ್ಯಾಟರ್‌ಗೆ ದಂಡ ವಿಧಿಸಲು ವಿಶಿಷ್ಟವಾದ ಉಪಾಯವನ್ನು ಪ್ರಸ್ತಾಪ ಮಾಡಿದ್ದಾರೆ.

ಅಂತಿಮ ಓವರ್‌ನಲ್ಲಿ ಎಲ್‌ಎಸ್‌ಜಿ ಗೆಲುವಿಗೆ 5 ರನ್‌ಗಳ ಅಗತ್ಯವಿತ್ತು, ಆದರೆ ಕೊನೆಯ ಓವರ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡ ನಂತರ ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯ ಇತ್ತು. ಕೊನೆಯ ವಿಕೆಟ್ ಮಾತ್ರ ಬಾಕಿ ಉಳಿದಿತ್ತು. ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ ಮಾಡುವ ಮುನ್ನವೇ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟು ರನ್ ಕದಿಯಲು ಮುಂದಾಗಿದ್ದರು, ಆದರೆ ಇದನ್ನು ಗಮನಿಸಿದ ಹರ್ಷಲ್ ಪಟೇಲ್ ಅವರನ್ನು ರನೌಟ್ ಮಾಡಲು ಯತ್ನಿಸಿದರು ವಿಫಲವಾದರು. ಫಾಲೋ-ಥ್ರೂ ಅನ್ನು ಪೂರ್ಣಗೊಳಿಸಿದ ನಂತರ, ನಾನ್ ಸ್ಟ್ರೈಕರ್ ನಲ್ಲಿ ಬ್ಯಾಟರ್ ಅನ್ನು ಮಂಕಡ್ ಮಾಡಲು ಕ್ರಿಕೆಟ್ ಕಾನೂನುಗಳು ಅನುಮತಿಸುವುದಿಲ್ಲ.
ಹರ್ಷಾ ಭೋಗ್ಲೆ ಟ್ವೀಟ್‌ಗೆ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ
ಪಂದ್ಯದ ನಂತರ ಟ್ವೀಟ್ ಮಾಡಿದ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, " ರವಿ ಬಿಷ್ಣೋಯಿ ಕ್ರೀಸ್ ಅನ್ನು ಬೇಗನೆ ಬಿಡುತ್ತಿದ್ದಾರೆ. ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಬಾರದು ಎಂದು ಹೇಳುವವರು ಇನ್ನೂ ಇದ್ದಾರ?" ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದರ ಬೆನ್ ಸ್ಟೋಕ್ಸ್ "ಅಂಪೈರ್ ಗಳ ನಿರ್ಧಾರಕ್ಕೆ ಬಿಟ್ಟದ್ದು, ಕ್ರೀಸ್‌ಅನ್ನು ಬೇಗನೆ ಬಿಟ್ಟು ಅನ್ಯಾಯದ ಲಾಭ ಪಡೆಯಲು ಪ್ರಯತ್ನಿಸಿದರೆ 6 ಪೆನಾಲ್ಟಿ ರನ್‌ಗಳನ್ನು ನೀಡಿದರೆ ಹೇಗೆ? ಇದರಿಂದ ಯಾವುದೇ ವಿವಾದಗಳು ಇಲ್ಲದೆ ಬ್ಯಾಟರ್ ಗಳು ಇದನ್ನು ಮಾಡುವುದನ್ನು ನಿಲ್ಲಿಸುತ್ತಾರೆ" ಎಂದು ಸಲಹೆ ನೀಡಿದ್ದಾರೆ.
ಮಂಕಡಿಂಗ್ ವಿರೋಧಿಸಿದ್ದ ಇಂಗ್ಲೆಂಡ್ ಕ್ರಿಕೆಟಿಗರು
ಮಂಕಡಿಂಗ್ ಮಾಡುವುದಕ್ಕೆ ಇಂಗ್ಲೆಂಡ್ ಕ್ರಿಕೆಟಿಗರು ಮೊದಲಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ. ಆದರೆ ಮಂಕಡಿಂಗ್ ಮಾಡುವುದು ನ್ಯಾಯಯುತ ರನೌಟ್ ಎಂದು ಈಗಾಗಲೇ ಮಾನ್ಯ ಮಾಡಲಾಗಿದೆ. ರವಿಚಂದ್ರನ್ ಅಶ್ವಿನ್ ಐಪಿಎಲ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಮಂಕಡ್ ಮಾಡಿದ್ದರು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರು ಅಶ್ವಿನ್ ಅದನ್ನು ಸಮರ್ಥನೆ ಮಾಡಿಕೊಂಡಿದ್ದರು. ನಂತರ ದೀಪ್ತಿ ಶರ್ಮಾ ಕೂಡ ಇಂಗ್ಲೆಂಡ್ ವಿರುದ್ಧ ಈ ರೀತಿ ಮಾಡಿದ್ದು ಮತ್ತೆ ವಿವಾದಕ್ಕೆ ಕಾರಣವಾಗಿತ್ತು. ಈಗ ಹರ್ಷಲ್ ಪಟೇಲ್ ಈ ರೀತಿಯ ಯತ್ನ ಮಾಡಿದರೂ ಅದರಲ್ಲಿ ಸಫಲರಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications