IPL 2023: ಬಿಸಿಸಿಐ ಬೊಕ್ಕಸ ಸೇರಿದ 5000 ಕೋಟಿ ರೂ.
19 ವರ್ಷಗಳ ಹಿಂದೆ ಕಂಡ ಕನಸು ಭಾರತೀಯ ಕ್ರಿಕೆಟ್ ಮಂಡಳಿಗೆ ಇಷ್ಟು ಹಣವನ್ನು ತಂದು ಕೊಡುತ್ತದೆ ಎಂದು ಯಾರು ಊಹಿಸಿರಲ ಸಾಧ್ಯವಿಲ್ಲ. ಅಂದು ಆರಂಭವಾದ ಐಪಿಎಲ್ ದೇಶದಲ್ಲಿ ಯುವ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಅಷ್ಟೇ ಅಲ್ಲದೆ ಬಿಸಿಸಿಐ ಖಜಾನೆ ತುಂಬುತ್ತಲೆ ಸಾಗಿದೆ. ಕಳೆದ ಆವೃತ್ತಿಯ ಐಪಿಎಲ್‌ನಿಂದ ಬಿಸಿಸಿಐ ಬೊಕ್ಕಸಕ್ಕೆ ಹರಿದು ಬಂದ ಹಣ ಎಷ್ಟು ಎಂದು ಗೊತ್ತಾ?
ಕಳೆದ ಆವೃತ್ತಿಯಲ್ಲಿ ಬಿಸಿಸಿಐ ಖಜಾನೆಯನ್ನು ಐಪಿಎಲ್ ಒಂದು ಆವೃತ್ತಿಯಿಂದ ತುಂಬಿದೆ ಅಂದರೆ ನಂಬಲು ಕಷ್ಟ. ಆದರೆ ಇದೇ ನಿಜ ಸಂಗತಿ. ಈ ಅಂಕಿಅಂಶಗಳೇ ಈ ಲೀಗ್‌ನ್ನು ವಿಶ್ವದ ಶ್ರೀಮಂತ ಲೀಗ್ ಎನ್ನುವ ಹಾಗೆ ಮಾಡಿದೆ. 17ನೇ ಆವೃತ್ತಿಯ ಐಪಿಎಲ್‌ನಿಂದ ಬಿಸಿಸಿಐ 5000 ಕೋಟಿ ರೂ.ಗೂ ಹೆಚ್ಚು 'ಹೆಚ್ಚುವರಿ' ಗಳಿಸಿದೆ ಎಂದು ತಿಳಿದು ಬಂದಿದೆ.

ಜಸ್ಟ್ ಒಮ್ಮೆ ಹಿಂತಿರುಗಿ ನೋಡಿದ್ರೆ ಬಿಸಿಸಿಐ ನಡೆದು ಬಂದ ದಾರಿಯಲ್ಲಿ ಐಪಿಎಲ್ ಕೊಡುಗೆ ಏನು ಎಂಬುದು ಅರ್ಥವಾಗುತ್ತದೆ. 1983ರಲ್ಲಿ ಕಪಿಲ್ ದೇವ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಕೊಂಡಿತ್ತು. ಆಗ ಅವರಿಗೆ ನೀಡಲು ಹಣವಿರಲಿಲ್ಲ. ಅಲ್ಲದೆ ಒಂದು ಕಾಲದಲ್ಲಿ ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಮಾಡಲು ಬಿಸಿಸಿಐ ಒಂದಿಷ್ಟು ಹಣವನ್ನು ವಾಹಿನಿಗಳಿಗೆ ನೀಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ.
ಬಿಸಿಸಿಐ ಖಜಾನೆಗೆ 5000 ಕೋಟಿ ರೂ.
'ಎಕನಾಮಿಕ್ ಟೈಮ್ಸ್' ವರದಿಯ ಪ್ರಕಾರ, BCCI ಐಪಿಎಲ್ 2023 ರಿಂದ ಸುಮಾರು 5120 ಕೋಟಿ ರೂ.ಗಳ 'ಹೆಚ್ಚುವರಿ' ಹಣವನ್ನು ಗಳಿಸಿದೆ ಎಂದು ತಿಳಿದು ಬಂದಿದೆ. ಇದು 2022ರ ಐಪಿಎಲ್‌ಗಿಂತಲೂ 116 ಪಟ್ಟು ಹೆಚ್ಚಾಗಿದೆ. 16ನೇ ಆವೃತ್ತಿಯ ಐಪಿಎಲ್‌ನಿಂದ ಬಿಸಿಸಿಐ ಬೊಕ್ಕಸಕ್ಕೆ 2367 ಕೋಟಿ ರೂ ಹರಿದು ಬಂದಿತ್ತು.
ಮಾಧ್ಯಮ ಹಕ್ಕುಗಳ ಬೆಲೆ ಏರಿಕೆ
ಐಪಿಎಲ್ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆ ಆರಂಭದಲ್ಲಿದ್ದ ಮಾಧ್ಯಮ ಹಕ್ಕುಗಳ ಬೆಲೆ ಹಾಗೂ ಈಗಿನ ಮಾಧ್ಯಮ ಹಕ್ಕುಗಳ ಬೆಲೆಯಲ್ಲಿ ಭೂಮಿ ಆಕಾಶದ ಅಂತರವನ್ನು ಕಾಣಬಹುದು. ಅಷ್ಟೇ ಏಕೆ 2022ರಲ್ಲಿ ಮಾಧ್ಯಮ ಹಕ್ಕುಗಳಿಂದ 3,780 ಕೋಟಿ ರೂ. ಆದಾಯ ಬಂದಿತ್ತು. ಆದರೆ 2023ರಲ್ಲಿ ಇದರ ಮೌಲ್ಯ 8,744 ಕೋಟಿಗೆ ಏರಿಕೆ ಆಗಿದೆ ಎಂದು ಹೇಳಲಾಗಿದೆ.
ಬಿಸಿಸಿಐ ಐಪಿಎಲ್ ಮಾಧ್ಯಮ ಹಕ್ಕುಗಳ ಮಾರಾಟವನ್ನು ಬಿಡ್ ಮೂಲಕ ನಡೆಸುತ್ತದೆ. ಈ ವೇಳೆ 2023 ರಿಂದ 27ರ ವರೆಗಿನ ಮಾಧ್ಯಮ ಹಕ್ಕುಗಳ ಮೌಲ್ಯ 48,390 ಕೋಟಿ ರೂಪಾಯಿ ಆಗಿದೆ. ಸ್ಟಾರ್ ವಾಹಿನಿ ನೇರ ಪ್ರಸಾರದ ಹಕ್ಕುಗಳನ್ನು ಹೊಂದಿದ್ದರೆ, ವಯಾಕಾಮ್ 18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ.
ಇದಲ್ಲದೆ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಐದು ವರ್ಷಗಳ ಕಾಲ ಟಾಟಾ ಸನ್ಸ್‌ಗೆ ಪಡೆದುಕೊಂಡಿದ್ದು, ಇದರಿಂದ 2,500 ಕೋಟಿ ರೂ. ಆದಾಯ ಬರುತ್ತದೆ. ಉಳಿದ ಅಸೋಸಿಯೇಟ್ ಪ್ರಾಯೋಜಕರಿಂದ ಬಿಸಿಸಿಐ ಸುಮಾರು 1,485 ಕೋಟಿ ಗಳಿಸಿದರು.
2008ರಲ್ಲಿ ಬಿಸಿಸಿಐ ಬಳಿ ಅಷ್ಟೇನು ಹಣವೂ ಇರಲಿಲ್ಲ. ಆಗ ಉದ್ಯಮಿ ಲಲಿತ್ ಮೋದಿ ನೀಡಿದ ಒಂದು ಪ್ರಸ್ತಾವನೆ ಕ್ಲಿಕ್ ಆಯಿತು. ಭಾರತದಲ್ಲಿ ಐಪಿಎಲ್ ಆರಂಭವಾಗಲು ಲಲಿತ್ ಮೋದಿ ಅವರ ಕೊಡುಗೆ ಸಹ ಅಪಾರ. ಐಪಿಎಲ್ ಆರಂಭವಾದ ಬಳಿಕ ಬಿಸಿಸಿಐ ಹಣದ ವಿಷಯದಲ್ಲಿ ಎಲ್ಲಾ ಕ್ರಿಕೆಟ್ ಮಂಡಳಿಗಳನ್ನು ಹಿಂದಿಕ್ಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications