IPL 2023: ಶತಕ ಸಿಡಿಸಿದ ಆಟಗಾರರನನ್ನು ಡ್ರಾಪ್ ಮಾಡಿ ಎಂದಿದ್ಯಾಕೆ ಬ್ರೇಟ್ ಲೀ
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದೆ ಸನ್‌ರೈಸರ್ಸ್ ಹೈದರಾಬಾದ್. ಕೊನೆಯ ಓವರ್‌ನ್ಲಲಿ 9 ರನ್‌ಗಳಿಸುವ ಗುರಿ ಹೊಂದಿದ್ದ ಎಸ್‌ಆರ್‌ಹೆಚ್ ತಂಎ ಕೇವಲ 3 ರನ್ ಮಾತ್ರವೇ ಗಳಿಸಲು ಶಕ್ತವಾಗುವ ಮೂಲಕ ಆಘಾತಕಾರಿ ಸೋಲು ಕಂಡಿತು. ಈ ಸೋಲು ಎಸ್‌ಆರ್‌ಹೆಚ್ ತಂಡವನ್ನು ಮತ್ತಷ್ಟು ಕುಗ್ಗಿಸಿದ್ದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಮಧ್ಯಮ ಕ್ರಮಾಂಕದಲ್ಲಿ ನಾಯಕ ಐಡೆನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಅದ್ಭುತ ಹೋರಾಟ ಪ್ರದರ್ಶಿಸಿದ ಕಾರಣ ಗೆಲುವಿನ ಸನಿಹಕ್ಕೆ ತಲುಪಲು ಕಾರಣವಾಯಿತು. ಆದರೆ ಈ ಆವೃತ್ತಿಯಲ್ಲಿಯೇ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಶತಕವನ್ನು ಸಿಡಿಸಿದ ಹ್ಯಾರಿ ಬ್ರೂಕ್ ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ. ನಾಲ್ಕು ಎಸೆತಗಳಲ್ಲಿ ಶೂನ್ಯಕ್ಕೆ ಔಟಾದರು ಬ್ರೂಕ್. ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬ್ರೂಕ್ ಮನಸ್ಥಿತಿಯ ಬಗ್ಗೆ ಉಲ್ಲೇಖಿಸಿದ್ದಾರೆ ಲೀ.

ಟೆಸ್ಟ್ ಮಾದರಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ಹ್ಯಾರಿ ಬ್ರೂಕ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬರೊಬ್ಬರಿ 13.25 ಕೋಟಿ ನೀಡಿ ಖರೀದಿಸಿತ್ತು. ಆಡಿರುವ 6 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಸಿಡಿಸಿರುವ ಬ್ರೂಕ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದರು. ಆದರೆ ಐಪಿಎಲ್‌ನಲ್ಲಿ ಒಂದು ಶತಕ ಸಿಡಿಸಿದ್ದು ಬಿಟ್ಟರೆ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಲು ಬ್ರೂಕ್‌ಗೆ ಸಾಧ್ಯವಾಗಿಲ್ಲ. ಕೆಕೆಆರ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ರೂಕ್ ಅಮೋಘ ಶತಕ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದ್ದರು.
ಆದರೆ ಈಡನ್ ಗಾರ್ಡನ್‌ನಲ್ಲಿನ ಆ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಳಿಕ ಮತ್ತೆ ಕಳಪೆ ಪ್ರದರ್ಶನ ನೀಡಿದ್ದಾರೆ ಬ್ರೂಕ್. ಆಡಿರುವ 9 ಪಂದ್ಯಗಳಲ್ಲಿ ಅವರು ಒಂದು ಶತಕದ ಹೊರತಾಗಿಯೂ ಗಳಿಸಿದ್ದು 163 ರನ್ ಮಾತ್ರ. ಈಡನ್ ಗಾರ್ಡನ್‌ನಲ್ಲಿ ಶತಕ ಸಿಡಿಸಿದ ಬಳಿಕ 9, 18, 7, 0, 0 ಮಾತ್ರವೇ ಗಳಿಸಲು ಸಾಧ್ಯವಾಗಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 172 ರನ್‌ಗಳ ಗುರಿ ನಿಗದಿಪಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ ಮಧ್ಯಮ ಕ್ರಮಾಂಕದ ಆಟಗಾರರಿಂದ ಅದ್ಭುತ ಪ್ರದರ್ಶನ ಬಂದ ಕಾರಣ ಕಡೆಯ ಹಂತದವರೆಗೂ ಅದ್ಭುತ ಹೋರಾಟ ನಡೆಸಿತು. ಒಂದು ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವು ಸಾಧಿಸುವುದು ನಿಚ್ಚಳ ಎಂಬಂದಿದ್ದರೂ ಕೊನೆಯ ಹಂತದಲ್ಲಿ ಕೆಕೆಆರ್ ತಂಡದ ಕೈಮೇಲಾಗಿದ್ದು ಗೆಲುವಿನ ನಗೆ ಬೀರಿದೆ. ಐದು ರನ್‌ಗಳ ಅಂತರದಿಂದ ಈ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಗೆದ್ದುಕೊಂಡಿತು.
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ
ಬೆಂಚ್: ರಾಹುಲ್ ತ್ರಿಪಾಠಿ, ವಿವ್ರಾಂತ್ ಶರ್ಮಾ, ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್, ಮಯಾಂಕ್ ಡಾಗರ್, ಗ್ಲೆನ್ ಫಿಲಿಪ್ಸ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಆದಿಲ್ ರಶೀದ್, ಉಪೇಂದ್ರ ಯಾದವ್, ಫಜಲ್ಹಕ್ ಫಾರೂಕಿ, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್
ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ
ಬೆಂಚ್: ಸುಯಶ್ ಶರ್ಮಾ, ಅನುಕೂಲ್ ರಾಯ್, ಎನ್ ಜಗದೀಸನ್, ಕುಲ್ವಂತ್ ಖೆಜ್ರೋಲಿಯಾ, ಮಂದೀಪ್ ಸಿಂಗ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಉಮೇಶ್ ಯಾದವ್, ಆರ್ಯ ದೇಸಾಯಿ, ಡೇವಿಡ್ ವೈಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications