For Quick Alerts
ALLOW NOTIFICATIONS  
For Daily Alerts
 

IPL 2023: 100 ಕೋಟಿ ರೂ. ದಾಟಿದ ಪ್ರತಿ ಪಂದ್ಯದ ಪ್ರಸಾರ ಹಕ್ಕು; ಇನ್ನೂ ಹೆಚ್ಚಾಗುವ ನಿರೀಕ್ಷೆ

IPL 2023 Broadcast Rights Bidding; Every Match Of The Tournament Crossed The Rs 100-crore Mark

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿ 2023ರಿಂದ 2027ರ ಮಾಧ್ಯಮ ಹಕ್ಕುಗಳ ಒಟ್ಟು ಮೌಲ್ಯವು 43,000 ಕೋಟಿ ರೂಪಾಯಿಗಳ ಗಡಿ ದಾಟಿದ್ದು, ಐಪಿಎಲ್ ಪಂದ್ಯಾವಳಿಯ ಪ್ರತಿ ಪಂದ್ಯದ ಟಿವಿ ಮತ್ತು ಡಿಜಿಟಲ್‌ ಹಕ್ಕುಗಳ ಮೌಲ್ಯವು 100 ಕೋಟಿ ರೂ. ಗಡಿ ದಾಟಿದೆ.

ಪ್ರಸಾರ ಹಕ್ಕುಗಳು, ಡಿಜಿಟಲ್ ಹಕ್ಕುಗಳು, ಹೆಚ್ಚಿನ ಮೌಲ್ಯದ ಪಂದ್ಯಗಳ ಹಕ್ಕುಗಳು ಮತ್ತು ವಿದೇಶಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಒಳಗೊಂಡಿರುವ ಬೆಸ್ಪೋಕ್ ಪ್ಯಾಕೇಜ್‌ಗಾಗಿ ಭಾನುವಾರ ಬೆಳಗ್ಗೆ 11ಕ್ಕೆ ಬಿಡ್ಡಿಂಗ್ ಪ್ರಾರಂಭವಾಯಿತು. ಏಜೆನ್ಸಿಗಳ ಪ್ರಕಾರ, ಡಿಸ್ನಿ DIS.N, Sony 6758.T ಮತ್ತು ಭಾರತದ ರಿಲಯನ್ಸ್ (RELI.NSin) ಬಹು-ಶತಕೋಟಿ ಒಪ್ಪಂದಕ್ಕೆ ಪೈಪೋಟಿ ನಡೆಸುತ್ತಿವೆ.

ಭಾನುವಾರದ ಹರಾಜು ಪ್ರಕ್ರಿಯೆಗಳನ್ನು ಸಂಜೆ 6 ಗಂಟೆಗೆ ವಿರಾಮಗೊಳಿಸಲಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಗದಿಪಡಿಸಿದ ನಿಯಮಗಳ ಪ್ರಕಾರ ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಸೋಮವಾರದವರೆಗೆ ಮುಂದುವರಿಯುತ್ತದೆ ಎಂದು ವರದಿ ತಿಳಿಸಿದೆ. ಪ್ರತಿ ಬಿಡ್‌ನ ನಡುವೆ ಇರುವ 30 ನಿಮಿಷಗಳ ಅಂತರವನ್ನು ಬಿಡ್‌ದಾರರು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಕುರಿತು ಮಾಹಿತಿ
2023ರಿಂದ 2027ರ ವರೆಗಿನ ಐಪಿಎಲ್ ನೇರ ಪ್ರಸಾರ ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ ಹರಾಜು ಪ್ರಕರಿಯೆ ನಡೆಸುತ್ತಿದೆ.

ಡಿಜಿಟಲ್ ಮತ್ತು ಟೆಲಿವಿಷನ್ ಹಕ್ಕುಗಳು ಈಗ ವಾಲ್ಟ್ ಡಿಸ್ನಿ ಕಂಪನಿ ಮಾಲೀಕತ್ವದ ಸ್ಟಾರ್ ಇಂಡಿಯಾ 2017ರಲ್ಲಿ ಪಾವತಿಸಿದ 163.48 ಶತಕೋಟಿ ರೂಪಾಯಿಗಳಿಗಿಂತ (2.09 ಶತಕೋಟಿ ಡಾಲರ್) ದುಪ್ಪಟ್ಟಾಗಿದೆ ಎಂದು ನಿರೀಕ್ಷಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಪ್ರಸಾರ ಜಂಟಿ ಉದ್ಯಮದ ಮೂಲಕ ಬಿಡ್ ಮಾಡುತ್ತಿದೆ. Viacom 18. ಸೋನಿ ಕಾರ್ಪ್‌ನ ಭಾರತ ಘಟಕ ಮತ್ತು ಸ್ಥಳೀಯ ಬ್ರಾಡ್‌ಕಾಸ್ಟರ್ ಝೀ ಎಂಟರ್‌ಟೈನ್‌ಮೆಂಟ್ ವಿಲೀನದ ಮಾತುಕತೆಯಲ್ಲಿದೆ, ಆದರೆ ಪ್ರತ್ಯೇಕವಾಗಿ ಬಿಡ್ ಮಾಡುತ್ತಿವೆ.

ಟಿವಿ ಮತ್ತು ಡಿಜಿಟಲ್ ಹಕ್ಕುಗಳ ಬಿಡ್ಡಿಂಗ್ ಇನ್ನೂ ಮುಕ್ತಾಯಗೊಂಡಿಲ್ಲ, ಸೋಮವಾರ ಸಂಯೋಜಿತ ಮೌಲ್ಯವು 50,000 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.

* ಪ್ಯಾಕೇಜ್ A - ಭಾರತೀಯ ಉಪಖಂಡದಲ್ಲಿ ನೇರ ಪ್ರಸಾರ ಮಾಡುವುದು. ಈ ಬಿಡ್ಡಿಂಗ್‌ನ ಮೂಲ ಬೆಲೆ 49 ಕೋಟಿ ಆಗಿತ್ತು.

* ಪ್ಯಾಕೇಜ್‌ B ಭಾರತೀಯ ಉಪಖಂಡದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ನೇರ ಪ್ರಸಾರನದ್ದಾಗಿದೆ. ಈ ಬಿಡ್ಡಿಂಗ್‌ನ ಮೂಲ ಬೆಲೆ 33 ಕೋಟಿ ಆಗಿದ್ದು, ಇನ್ನೂ ಎರಡು ಪ್ಯಾಕೇಜುಗಳು ಕಣದಲ್ಲಿವೆ.

* ಪ್ಯಾಕೇಜ್ C , 18 ಕೋಟಿ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ವಿಶೇಷ ಪಂದ್ಯಗಳ ಪ್ರಸಾರ ಒಳಗೊಂಡಿದೆ (ಮೂಲ ಬೆಲೆ ರೂ. 11 ಕೋಟಿ).

* ಪ್ಯಾಕೇಜ್ ಡಿ, ಇದು ಮೂಲ ಬೆಲೆ 3 ಕೋಟಿ ರೂ.ನಿಂದ ಬಿಡ್ಡಿಗ್ ಆರಂಭವಾಗುತ್ತದೆ. ಇದು ವಿಶ್ವದ ಉಳಿದ ಪ್ರದೇಶಗಳ ಹಕ್ಕುಗಳನ್ನು ಒಳಗೊಂಡಿರುತ್ತದೆ.

ಪ್ರತಿ ಪಂದ್ಯದ ಟಿವಿ ಹಕ್ಕುಗಳು ಇ-ಹರಾಜಿನ ಮೊದಲ ದಿನದ ಅಂತ್ಯದಲ್ಲಿ ಪ್ರತಿ ಪಂದ್ಯಕ್ಕೆ 105 ಕೋಟಿ ರೂ. ದಾಟಿದೆ ಎಂದು ಅಂದಾಜಿಸಲಾಗಿದ್ದು, ಇದು ಬಿಸಿಸಿಐ ಮೂಲ ಬೆಲೆಯಾಗಿ ನಿಗದಿಪಡಿಸಿದ ಪ್ರತಿ ಪಂದ್ಯಕ್ಕೆ 49 ರೂ. ಕೋಟಿಗಿಂತ ದುಪದಪಟ್ಟಾಗಿದೆ. ಭಾನುವಾರದ ಬಿಡ್ಡಿಂಗ್ ಅಂತ್ಯದ ವೇಳೆಗೆ ಡಿಜಿಟಲ್ ಹಕ್ಕುಗಳು ಪ್ರತಿ ಪಂದ್ಯಕ್ಕೆ 50 ಕೋಟಿ ರೂ. ಇದು ಇ-ಹರಾಜಿನ ಮೊದಲು ಕ್ರಿಕೆಟ್ ಸಂಸ್ಥೆಯು ನಿಗದಿಪಡಿಸಿದ ಪಂದ್ಯಕ್ಕೆ 33 ಕೋಟಿಗಿಂತ 50 ಪ್ರತಿಶತ ಅಧಿಕವಾಗಿದೆ.

2022ರ ಹೊತ್ತಿಗೆ, 4 ಪ್ಲೇಆಫ್ ಪಂದ್ಯಗಳನ್ನು ಒಳಗೊಂಡಂತೆ ಪ್ರತಿ ಕ್ರೀಡಾ ಋತುವಿನಲ್ಲಿ 74 ಪಂದ್ಯಗಳಿವೆ. ಆದರೆ ಮುಂಬರುವ ಆವೃತ್ತಿಯ ಕೊನೆಯ ಎರಡು ವರ್ಷಗಳಲ್ಲಿ ಬಿಸಿಸಿಐ ಎಣಿಕೆಯನ್ನು 84/94ಕ್ಕೆ ಹೆಚ್ಚಿಸಲಾಗುತ್ತದೆ.

ಬಿಸಿಸಿಐ ಸೋಮವಾರ ಉತ್ತಮ ಸಂಖ್ಯೆಯನ್ನು ನಿರೀಕ್ಷಿಸುತ್ತಿದೆ
"ಬಿಡ್ಡಿಂಗ್ ನಾವು ಯೋಜಿಸಿದ ರೀತಿಯಲ್ಲಿ ನಡೆಯುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ. ಭಾಗವಹಿಸುವವರು ತುಂಬಾ ಉತ್ಸುಕರಾಗಿದ್ದಾರೆ. ಬಿಡ್ಡಿಂಗ್ ಇನ್ನೂ ನಡೆಯುತ್ತಿದೆ ಮತ್ತು ನಾವು ಸೋಮವಾರ ಉತ್ತಮ ಸಂಖ್ಯೆಯನ್ನು ನಿರೀಕ್ಷಿಸುತ್ತೇವೆ," ಎಂದು ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

DK ಗಿಂತ ಮುಂಚೆ Axar Patel ಕಳುಹಿಸಿದ Pant | *Cricket | OneIndia Kannada

"ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಾವು ಇ-ಬಿಡ್ಡಿಂಗ್‌ಗೆ ಹೋಗಿದ್ದು ಇದೇ ಮೊದಲ ಬಾರಿಗೆ," ಎಂದರು.

Story first published: Sunday, June 12, 2022, 22:14 [IST]
Other articles published on Jun 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+