IPL 2023: 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ CSK: ವೈರಲ್ ಆಗಿದೆ ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋ
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಚಾಂಪಿಯನ್ ತಂಡವಾಗಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಹೊಮ್ಮಿದೆ. ಸೋಮವಾರ ನಡೆದ ರೋಚಕ ಸೆಣೆಸಾಟದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸಿದ ಸಿಎಸ್‌ಕೆ ಐಪಿಎಲ್‌ನಲ್ಲಿ 5ನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡಿದ್ದು ಮುಂಬೈ ಇಂಡಿಯನ್ಸ್ ಮಾಡಿದ ಸಾಧನೆಯನ್ನು ಸರಿಗಟ್ಟಿದಂತಾಗಿದೆ.
ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಲು ಆರಂಬಿಸಿತ್ತು. ಗೆಲುವಿನ ಅವಕಾಶ ಕೊನೆಯ ಎಸೆತದವರೆಗೂ ಎರಡು ತಂಡಗಳಿಗೂ ಇತ್ತು. ಆದರೆ ಅಂತಿಮವಾಗಿ ಹಾಲಿ ಚಾಂಪಿಯನ್ ತಂಡವಾಗಿದ್ದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸಿಎಸ್‌ಕೆ ಟ್ರೋಫಿ ಎತ್ತಿಹಿಡಿದಿದೆ. ಈ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿರುವುದು ತಂಡದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟುವಂತೆ ಮಾಡಿದೆ.

ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದ ಸಂದರ್ಭದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆಯ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಯಸ್ಸಿನ ಭೇದ ಮರೆತು ಅಭಿಮಾನಿಗಳು ಹುಚ್ಚೆದ್ದು ಸಿಎಸ್‌ಕೆ ಗೆಲುವನ್ನು ಸಂಭ್ರಮಿಸಿರುವುದು ದಾಖಲಾಗಿದೆ.
ಒಂದು ವಿಡಿಯೋದಲ್ಲಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಸಿಎಸ್‌ಕೆ ಪರ ರವೀಂದ್ರ ಜಡೇಜಾ ಗೆಲುವಿನ ಬೌಂಡರಿ ಬಾರಿಸುತ್ತಿದ್ದಂತೆಯೇ ಕುಳತಲ್ಲಿಂದಲೇ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಯುವಕನೊಬ್ಬ ಸ್ನೇಹಿತರೊಂದಿಗೆ ಪಂದ್ಯವನ್ನು ವೀಕ್ಷಿಸುತ್ತಿದ್ದು ಸಿಎಸ್‌ಕೆ ಗೆಲುವು ಖಚಿತವಾಗಿತ್ತಿದ್ದಂತೆಯೇ ಕಿರುಚುತ್ತಾ ಬಾಗಿಲನ್ನು ಬಡಿದು ಭಾವನೆ ವ್ಯಕ್ತಪಡಿಸಿದ್ದಾನೆ.
ಇನ್ನು ವೈರಲ್ ಆಗಿರುವ ಮತ್ತೊಂದು ವಿಡಿಯೋ ಪಂದ್ಯ ನಡೆಯುತ್ತಿದ್ದ ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದ ನೇರಪ್ರಸಾರದ ಸಂದರ್ಭದ ವಿಡಿಯೋಗಳು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ ತೊಟ್ಟು ಮಹಿಳಾ ಅಭಿಮಾನಿ ಗೆಲುವಿಗೂ ಮುನ್ನ ಭಾವುಕವಾಗಿ ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿರುವ ವಿಡಿಯೋ ಹಾಗೂ ಗೆಲುವಿನ ಬಳಿಕ ಸಂತಸದಿಂದ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ಫೈನಲ್ ಪಂದ್ಯ ಮೇ 28 ಭಾನುವಾರ ನಡೆಯಬೇಕಾಗಿತ್ತು. ಆದರೆ ಭಾನುವಾರವಿಡೀ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಎಆಸ್ ನಡೆಸಲು ಕೂಡ ಅವಕಾಶ ದೊರೆಯಲಿಲ್ಲ. ಹೀಗಾಗಿ ಈ ಫೈನಲ್ ಪಂದ್ಯ ಮೀಸಲು ದಿನದಂದು ಆಯೋಜಿಸಲಾಯಿತು. ಮೀಸಲು ದಿನದಂದು ಕೂಡ ಕೆಲ ಕಾಲ ಮಳೆ ಅಡ್ಡಿಯುಂಟು ಮಾಡಿದ್ದು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ತಂಡಕ್ಕೆ 15 ಓವರ್‌ಗಳಲ್ಲಿ ಗುರಿ ತಲುಪಲು ಸ್ಕೋರ್ ಪರಿಷ್ಕರಿಸಲಾಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಅವರ 96 ರನ್‌ಗಳ ಕೊಡುಗೆಯ ಕಾಣದಿಂದಾಗಿ 214 ರನ್‌ಗಳನ್ನು ಕಲೆಹಾಕಿತು. ಮೊದಲ ಇನ್ನಿಂಗ್ಸ್ ಮಳೆ ಬಂದ ಕಾರಣ 15 ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 171 ರನ್‌ಗಳನ್ನು ಗಳಿಸುವ ಗುರಿ ನೀಡಲಾಯಿತು.
ಈ ಪಂದ್ಯದಲ್ಲಿ ಕೊನೆಯ ಎರಡು ಎಸೆತದಲ್ಲಿ 10 ರನ್‌ಗಳ್ನನು ಗಳಿಸುವ ಸವಾಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಿತ್ತು. ಮೋಹಿತ್ ಶರ್ಮಾ ಎಸೆದ 5ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದ ಜಡೇಜಾ ಕೊನೆಯ ಎಸೆತವನ್ನು ಬೌಂಡಿರಿಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಸಿಎಸ್‌ಕೆ ಐದನೇ ಬಾರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಯಿತು. ಸಿಎಸ್‌ಕೆ ಪರವಾಗಿ ಫೈನಲ್ ಪಂದ್ಯದಲ್ಲಿ ಶಿವಂ ದುಬೆ, ಡೆವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಂದಲೂ ಮಹತ್ವದ ಕೊಡುಗೆ ಬಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications