Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023, ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಆಡುವ ಬಳಗ, Live ಸ್ಕೋರ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಕಣಕ್ಕಿಳಿಯುತ್ತಿದೆ. ಆದರೆ ಮುಂಬೈ ಇಂಡಿಯನ್ಸ್ ತಮಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ರಾಘವ್ ಗೋಯೆಲ್ ಇದೇ ಮೊದಲ ಬಾರಿಗೆ ಅವಕಾಶವನ್ನು ಗಳಿಸಿಕೊಂಡಿದ್ದು ಮುಮಾರ್ ಕಾರ್ತಿಕೇಯ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇನ್ನು ತಿಲಕ್ ವರ್ಮಾ ಗಾಯದ ಕಾರಣ ಹೊರಗುಳಿದಿದ್ದು ಟ್ರಿಸ್ಟನ್ ಸ್ಟಬ್ಸ್ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

IPL 2023, Chennai Super Kings vs Mumbai Indians, Toss report and playing

ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಸಮತೋಲಿತ ಹೋರಾಟವನ್ನು ನೀಡುವ ಪಿಚ್ ಆಗಿದೆ. ಇಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರೆ ಮಾತ್ರವೇ ಯಶಸ್ಸು ಸಾಧ್ಯ. ಬಳಿಕ ಮೇಲುಗೈ ಸಾಧಿಸುವ ಅವಕಾಶವಿದೆ. ಆದರೆ ಮಧ್ಯಮ ಓವರ್‌ಗಳಲ್ಲಿ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ.

Live ಸ್ಕೋರ್ ಹೀಗಿದೆ

1
57104

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಬೆಂಚ್: ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಆರ್ ಎಸ್ ಹಂಗರ್ಗೇಕರ್, ಸಿಸಂದಾ ಮಗಳ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ನಿಶಾಂತ್ ಸಿಂಧು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್
ಬೆಂಚ್: ಕುಮಾರ್ ಕಾರ್ತಿಕೇಯ, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್, ವಿಷ್ಣು ವಿನೋದ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ದುವಾನ್ ಜಾನ್ಸೆನ್, ತಿಲಕ್ ವರ್ಮಾ

Story first published: Saturday, May 6, 2023, 15:44 [IST]
Other articles published on May 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+