CSK vs PBKS: ಪಂದ್ಯದಲ್ಲಿ ನಿಮ್ಮ ಡ್ರೀಮ್ ಗೆಲ್ಲಲು ಈ ಆಟಗಾರರನ್ನು ಆರಿಸಿ

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ಏಪ್ರಿಲ್ 30ರ ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎದುರಾಗಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಚೆನ್ನೈನ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಟೂರ್ನಿಯ 41ನೇ ಪಂದ್ಯವಾಗಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಎರಡೂ ತಂಡಗಳು 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋತು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, 4 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ನಿನ್ನೆ ಗುಜರಾತ್ ಟೈಟನ್ಸ್ ಜಯ ಸಾಧಿಸಿದ ಕಾರಣದಿಂದಾಗಿ ಅಗ್ರಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಇಂದಿನ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಏರಿಕೆ ಕಾಣುವ ಯೋಜನೆಯಲ್ಲಿದೆ. ಒಂದೆಡೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಊಹೆ ಲೆಕ್ಕಾಚಾರಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಫ್ಯಾಂಟಸಿ ಕ್ರಿಕೆಟ್ ಆಡುವವರು ತಮ್ಮದೇ ಇಲೆವೆನ್ ರಚಿಸಿ ಗೆಲ್ಲುವ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ರೀತಿ ಡ್ರೀಮ್ ಟೀಮ್ ರಚಿಸುತ್ತಿರುವವರು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಬಹುದು ಎನ್ನಬಹುದು.
ಡ್ರೀಮ್ ಟೀಮ್ 1: ಕೀಪರ್ - ಡೆವೊನ್ ಕಾನ್ವೇ
ಬ್ಯಾಟ್ಸ್‌ಮನ್‌ಗಳು - ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ
ಆಲ್ ರೌಂಡರ್‌ಗಳು - ರವೀಂದ್ರ ಜಡೇಜಾ, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್
ಬೌಲರ್‌ಗಳು- ತುಷಾರ್ ದೇಶಪಾಂಡೆ, ಅರ್ಷದೀಪ್ ಸಿಂಗ್, ಮಥೀಶ ಪತಿರಣ
ಡ್ರೀಮ್ ಟೀಮ್ 2: ಕೀಪರ್ - ಡೆವೊನ್ ಕಾನ್ವೇ
ಬ್ಯಾಟ್ಸ್‌ಮನ್‌ಗಳು - ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ
ಆಲ್ ರೌಂಡರ್‌ಗಳು - ರವೀಂದ್ರ ಜಡೇಜಾ, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್
ಬೌಲರ್‌ಗಳು - ತುಷಾರ್ ದೇಶಪಾಂಡೆ, ಅರ್ಷ್‌ದೀಪ್ ಸಿಂಗ್ (ಉಪನಾಯಕ), ಮಹೀಶ್ ತೀಕ್ಷಣ
ಸಂಭಾವ್ಯ ಆಡುವ ಬಳಗಗಳು:
ಪಂಜಾಬ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ: ಶಿಖರ್ ಧವನ್ (ನಾಯಕ), ಅಥರ್ವ ತೈಡೆ, ಸಿಕಂದರ್ ರಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ(ವಾಕ್), ಶಾರುಖ್ ಖಾನ್, ಗುರ್ನೂರ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್, ಅಂಬಟಿ ರಾಯುಡು
ಇತ್ತಂಡಗಳ ಹೆಡ್ ಟು ಹೆಡ್ : ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಇಲ್ಲಿಯವರೆಗೂ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದಿದ್ದು, ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಮುಖಾಮುಖಿ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications