ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಜಯಭೇರಿ ಬಾರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಈ ಮೂಲಕ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಾಧಾರಣ ಆರಂಭ ಪಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ತಮಡದ ಆರಂಬಿಕ ಆಟಗಾರ ಹ್ಯಾರಿ ಬ್ರೂಕ್ ಒಂದು ಶತಕ ಸಿಡಿಸಿದ ಬಳಿಕ ಮತ್ತೆ ತಮ್ಮ ಲಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದ್ದು ಈ ಪಂದ್ಯದಲ್ಲಿ ಕೇವಲ 18 ರನ್ ಮಾತ್ರವೇ ಗಳಿಸಿದರು. ಮತ್ತೋರ್ವ ಆಟಗಾರ ಅಭಿಶೇಕ್ ಶರ್ಮಾ 34 ರನ್‌ಗಳ ಕೊಡುಗೆ ನೀಡಿದರು.

ಬಳಿಕ ಸನ್‌ರೈಸರ್ಸ್ ಹೈದರಬಾದ್ ತಂಡದ ಆಟಗಾರರಿಂದ ಉತ್ತಮ ಜೊತೆಯಾಟ ಬಾರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಎಸ್‌ಆರ್‌ಹೆಚ್ ತಂಡದ ದಾಂಟಿಗರನ್ನು ಹೆಚ್ಚು ಹಿತ್ತು ಕ್ರೀಸ್‌ನಲ್ಲಿ ನೆಲೆಯೂರದಂತೆ ಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್‌ಗಳನ್ನು ಮಾತ್ರವೇ ಗಳಸಿತು. ಈ ಪಂದ್ಯದಲ್ಲಿ ಸಿಎಸ್‌ಕೆ ಪರವಾಗಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದು ಕೇವಲ 22 ರನ್‌ಗಳನ್ನು ನೀಡಿ 3 ವಿಕೆಟ್ ಪಡೆದರು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ನೀಡಿದ ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಜೋಡಿ 87 ರನ್‌ಗಳ ಕೊಡುಗೆ ನೀಡಿದರು. ಋತು 35 ರನ್‌ಗಳಿಸಿ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಡೆವೋನ್ ಕಾನ್ವೆ ಕೊನೆಯ ಹಂತದವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲವಿನ ದಡ ಸೇರಿಸಿದರು. 57 ಎಸೆತಗಳಲ್ಲಿ 77 ರನ್‌ಗಳನ್ನು ಬಾರಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್‌ಕೆ ತಂಡ ಈ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮಥೀಶ ಪತಿರಣ
ಬೆಂಚ್: ಅಂಬಾಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆರ್‌ಎಸ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ಅಜಯ್ ಜಾದವ್ ಮಂಡಲ್, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಭಗತ್ ವರ್ಮಾ, ನಿಶಾಂತ್ ಸಿಂಧು
ಸನ್‌ರೈರರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್
ಬೆಂಚ್: ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಡಾಗರ್, ಟಿ ನಟರಾಜನ್, ವಿವ್ರಾಂತ್ ಶರ್ಮಾ, ಅಕೇಲ್ ಹೊಸೈನ್, ಆದಿಲ್ ರಶೀದ್, ಸಮರ್ಥ್ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ, ನಿತೀಶ್ ರೆಡ್ಡಿ