Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ತನ್ನನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದಿದ್ದ ಕ್ರಿಸ್‌ ಗೇಲ್ ಬಗ್ಗೆ ಕೊಹ್ಲಿ ಕೊಟ್ಟ ಪ್ರತಿಕ್ರಿಯೆ ಹೇಗಿತ್ತು ಗೊತ್ತ

IPL 2023: Chris Gayle Shares Virat Kohlis Priceless Reaction On Losing Orange Cap

ಮಾಜಿ ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟರ್ ಯುನಿವರ್ಸಲ್ ಬಾಸ್ ಎಂದೇ ಕರೆಯುವ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ. ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ನಡುವೆ ಉತ್ತಮ ಬಾಂಧವ್ಯವಿದೆ.

ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಸ್ಪರ್ಧೆಗೆ ಬಿದ್ದವರಂತೆ ಆರ್ ಸಿಬಿ ತಂಡಕ್ಕಾಗಿ ರನ್ ಗಳಿಸುತ್ತಿದ್ದರು. ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದಾಗ ಎದುರಾಳಿಗಳಿಗೆ ಚಳಿ ಬಿಡಿಸುತ್ತಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಜೋಡಿ 10 ಬಾರಿ ಶತಕದ ಜೊತೆಯಾಟ ಆಡಿದ್ದಾರೆ.

ಕ್ರಿಸ್ ಗೇಲ್ ಇದೀಗ ವಿರಾಟ್ ಕೊಹ್ಲಿ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡುವುದು ಅದ್ಭುತ ಅನುಭವವಾಗಿದೆ. ಅವರಿಗೆ ಆಟದ ಬಗ್ಗೆ ಇರುವ ಉತ್ಸಾಹ ಮತ್ತು ಕೆಲಸದ ಮೇಲಿನ ಶ್ರದ್ಧೆಯನ್ನು ನಾನು ಇಷ್ಟಪಡುತ್ತೇನೆ. ಅದಕ್ಕಾಗಿ ನೀವು ಅವರಿಗೆ ಕ್ರೆಡಿಟ್ ನೀಡಬೇಕು, ವಿರಾಟ್ ಕೊಹ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತಾರೆ" ಎಂದು ಗೇಲ್ ಹೇಳಿದರು.

IPL 2023: Chris Gayle Shares Virat Kohlis Priceless Reaction On Losing Orange Cap

ಜೊತೆಯಲ್ಲಿ ನೃತ್ಯ ಮಾಡುತ್ತಿದ್ದನ್ನು ನೆನಪಿಸಿಕೊಂಡ ಗೇಲ್

ಜಿಯೋ ಸಿನಿಮಾದಲ್ಲಿ ಲಭ್ಯವಿರುವ 'ಮೈ ಟೈಮ್ ವಿತ್ ವಿರಾಟ್' ಸಂಚಿಕೆಯಲ್ಲಿ, ಗೇಲ್ ಅವರು ಕೊಹ್ಲಿಯೊಂದಿಗಿನ ಡ್ರೆಸ್ಸಿಂಗ್ ರೂಮ್ ನೆನಪುಗಳನ್ನು ಮೆಲುಕು ಹಾಕಿದರು. ಇಬ್ಬರೂ ಜೊತೆಯಲ್ಲಿ ನೃತ್ಯ ಮಾಡಿದ ಬಗ್ಗೆ ಕೂಡ ಮಾತನಾಡಿದರು.

"ವಿರಾಟ್ ಕೊಹ್ಲಿ ಮತ್ತು ಇತರೆ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತಿದ್ದೆ. ನಾನು ಒಮ್ಮೆ ಅಲ್ಲಿಗೆ ಬಂದರೆ ಯಾವಾಗಲೂ ತಮಾಷೆಯಾಗಿರುತ್ತೇನೆ, ಬಹಳಷ್ಟು ಮೋಜು, ನೃತ್ಯ ಮಾಡುತ್ತಿದ್ದೆ" ಎಂದು ಗೇಲ್ ಹೇಳಿದರು.

"ವಿರಾಟ್ ಕೊಹ್ಲಿ ಕೂಡ ಅತ್ಯುತ್ತಮವಾಗಿ ನೃತ್ಯ ಮಾಡಬಲ್ಲರು. ಭಾರತೀಯ ಶೈಲಿಯ ನೃತ್ಯವಾಗಿದ್ದರೆ ವಿರಾಟ್ ಕೊಹ್ಲಿ ಗೆಲುವು ಸಾಧಿಸುತ್ತಿದ್ದರೆ, ಕೆರಿಬಿಯನ್ ಶೈಲಿಯ ನೃತ್ಯವಾಗಿದ್ದರೆ ನಾನು ಗೆಲುವು ಸಾಧಿಸುತ್ತಿದ್ದೆ." ಎಂದು ಗೇಲ್ ಹೇಳಿದರು. ಈ ಜೋಡಿ ಆಟದ ವಿಚಾರದಲ್ಲಿ ಕೂಡ ಹೆಚ್ಚಿನ ಸ್ಪರ್ಧೆಯಲ್ಲಿದ್ದರು.

IPL 2023: Chris Gayle Shares Virat Kohlis Priceless Reaction On Losing Orange Cap

ಕೊಹ್ಲಿಯಿಂದ ಆರೆಂಜ್ ಕ್ಯಾಪ್ ಪಡೆದಿದ್ದ ಗೇಲ್

ಒಂದು ಐಪಿಎಲ್ ಋತುವಿನಲ್ಲಿ ವಿರಾಟ್ ಕೊಹ್ಲಿಯಿಂದ ಆರೆಂಜ್ ಕ್ಯಾಪ್ ಪಡೆದುಕೊಂಡ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದ್ದಾರೆ. "ನನಗೆ ಒಂದು ವಿಚಾರ ಇನ್ನೂ ನೆನಪಿದೆ. ಒಂದು ನಿರ್ದಿಷ್ಟ ಐಪಿಎಲ್ ಋತುವಿನಲ್ಲಿ, ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೊಂದಿದ್ದರು, ನಾನು ಕೂಡ ಆ ಸಮಯದಲ್ಲಿ ರನ್ ಗಳಿಸುತ್ತಿದ್ದೆ, ಆ ಸಮಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸಿದ ವ್ಯಕ್ತಿಯಾಗಿದ್ದರು. ಆದರೆ, ಎರಡು ಮೂರು ಪಂದ್ಯಗಳಲ್ಲಿ ನಾನು ರನ್ ಹೊಡೆದು, ಆರೆಂಜ್ ಕ್ಯಾಪ್ ಗೆದ್ದುಬಿಟ್ಟೆ" ಎಂದು ಹೇಳಿದರು.

ನಾನು ಆರೆಂಜ್ ಕ್ಯಾಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಯಾವಾಗಲೂ ನೆನಪು ಮಾಡಿಕೊಳ್ಳುವ ತಮಾಷೆಯ ವಿಷಯವಾಗಿತ್ತು ಎಂದು ಗೇಲ್ ಹೇಳಿದರು. "ಈತ ಈಗಿನ್ನೂ ಬಂದಿದ್ದಾನೆ, ಆಗಲೇ ಆರೆಂಜ್ ಕ್ಯಾಪ್ ಗೆದ್ದುಬಿಟ್ಟ" ಎಂದು ಕೊಹ್ಲಿ ಪ್ರತಿಕ್ರಿಯೆ ನೀಡಿದ್ದರು ಎಂದು ಗೇಲ್ ಹೇಳಿದ್ದಾರೆ.

"ನಾವು ಹತ್ತು 100-ರನ್ ಜೊತೆಯಾಟ ಆಡಿದ್ದೇವೆ, ನಾವು ಎಷ್ಟು ಬಾರಿ ಎರಡು ಮತ್ತು ಮೂರು ರನ್‌ಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ಪರಿಶೀಲಿಸಿ. ನಾನು ವಿಕೆಟ್‌ಗಳ ನಡುವೆ ವೇಗವಾಗಿ ಓಡಿದೆ." ಎಂದು ಗೇಲ್ ಹೇಳಿದ್ದಾರೆ.

Story first published: Sunday, March 26, 2023, 17:11 [IST]
Other articles published on Mar 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+