IPL 2023 Retention : ತಂಡಕ್ಕೆ ಹೊಸ ರೂಪ ನೀಡಲು MI ನಿರ್ಧಾರ: ಉಳಿಸಿಕೊಂಡ, ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ

ಕಳೆದ ಐಪಿಎಲ್ ಆವೃತ್ತಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದು ಟೂರ್ನಿಯನ್ನು ಅಂತ್ಯಗೊಳಿಸಿತ್ತು. ಐದು ಬಾರಿಯ ಚಾಂಪಿಯನ್ ಆಗಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ಕಳೆದ ಆವೃತ್ತಿಯ ಮೊದಲ 8 ಪಂದ್ಯಗಳಲ್ಲಿ ಸತತವಾಗಿ ಸೋಲು ಅನುಭವಿಸಿ ಕೆಟ್ಟ್ ದಾಖಲೆಯನ್ನು ಬರೆದುಕೊಂಡಿತ್ತು.
ಕಳೆದ ಬಾರಿಯ ಹರಾಜಿನಲ್ಲಿ ಮಾಡಿಕೊಂಡ ಎಡವಟ್ಟನ್ನು ಸರಿಮಾಡಿಕೊಳ್ಳಲು ಈ ಬಾರಿಯ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪ್ರಯತ್ನಿಸಲಿದೆ. ಮುಂಬೈ ತಂಡದಲ್ಲಿ ಆಗಿರುವ ಅತ್ಯಂತ ದೊಡ್ಡ ಬದಲಾವಣೆಯೆಂದರೆ ಸುದೀರ್ಘ 13 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಂಗವಾಗಿದ್ದ ಕೀರನ್ ಪೊಲಾರ್ಡ್ ಐಪಿಎಲ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಪೊಲಾರ್ಡ್ ಹೊರತುಪಡಿಸಿ 12 ಆಟಗಾರರನ್ನು ಮುಂಬೈ ಇಂಡಿಯನ್ಸ್ ತಂಡ ಹರಾಜಿಗಾಗಿ ಬಿಡುಗಡೆಗೊಳಿಸಿದೆ.

ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮ, ಟ್ರಿಸ್ಟನ್ ಸ್ಟಬ್ಸ್, ಜೋಫ್ರಾ ಆರ್ಚರ್, ಅರ್ಜುನ್ ತೆಂಡೂಲ್ಕರ್, ಜಸ್ಪ್ರೀತ್ ಬೂಮ್ರಾ, ಜೇಸನ್ ಬೆಹ್ರೆನ್‌ಡ್ರಾರ್ಫ್, ಅರ್ಷದ್ ಖಾನ್, ರಿತಿಕ್ ಶೋಕೀನ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್

ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ
ಕೀರನ್ ಪೊಲಾರ್ಡ್ (ಐಪಿಎಲ್‌ನಿಂದ ನಿವೃತ್ತಿ), ಜಯದೇವ್ ಉನದ್ಕತ್, ಮುರುಗನ್ ಅಶ್ವಿನ್, ರಾಹುಲ್ ಬುದ್ಧಿ, ರಿಲೆ ಮೆರೆಡಿತ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಟೈಮಲ್ ಮಿಲ್ಸ್, ಅನ್ಮೋಲ್ಪ್ರೀತ್ ಸಿಂಗ್, ಆರ್ಯನ್ ಜುಯಲ್, ತುಳಸಿ ತಂಪಿ, ಡೇನಿಯಲ್ ಸ್ಯಾಮ್ಸ್, ಮಾಯಾಂಕ್ ಮಾರ್ಕಂಡೆ

ಮಿನಿ ಹರಾಜಿಗೆ ಮುಂಬೈ ಇಂಡಿಯನ್ಸ್ ಸಜ್ಜು
ಇನ್ನು ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಟ್ಟು 12 ಆಟಗಾರರನ್ನು ಸೇರ್ಪಡೆಗೊಳಿಸುವ ಅವಕಾಶವಿದ್ದು ಇದರಲ್ಲಿ 9 ಮಂದಿ ದೇಶೀಯ ಆಟಗಾರರ ಸ್ಥಾನ ಹಾಗೂ 3 ವಿದೇಶಿ ಆಟಗಾರರ ಸ್ಥಾನಗಳು ಬಾಕಿಯಿದೆ.
ಇನ್ನು ಈ ಬಾರಿಯ ಹರಾಜಿಗಾಗಿ ಮುಂಬೈ ಇಂಡಿಯನ್ಸ್ ತಂಡದ ಪರ್ಸ್‌ನಲ್ಲಿ 20.55 ಕೋಟಿ ಬಾಕಿಯಿದ್ದು ಯಾವೆಲ್ಲಾ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications