For Quick Alerts
ALLOW NOTIFICATIONS  
For Daily Alerts
 

IPL 2023: ಚೆನ್ನೈ ಸೂಪರ್ ಕಿಂಗ್ಸ್‌ಗೆ ತವರಿನಲ್ಲೇ ಆಘಾತ: 6 ವಿಕೆಟ್‌ಗಳ ಗೆಲುವು ಸಾಧಿಸಿದ ಕೆಕೆಆರ್

IPL 2023, CSK vs KKR: Kolkata Knight Riders won the match by 6 wickets against CSK

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಮೋಘ ಗೆಲುವು ಸಾಧಿಸಿದೆ. ಚೆನ್ನೈನ ತವರು ಚೆಪಾಕ್ ಕ್ರೀಡಾಂಗಣದಲ್ಲಿಯೇ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಸರ್ವಾಂಗೀಣ ಪ್ರದರ್ಶನ ನೀಡಿದ ಕೆಕೆಆರ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಕೆಕೆಆರ್ ವಿರುದ್ಧದ ಈ ಸೋಲು ಸಿಎಸ್‌ಕೆ ತಂಡಕ್ಕೆ ಆಘಾತ ನೀಡಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಕೆಆರ್‌ಗೆ 145 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಆರಂಭಿಕ ಆಘಾತವನ್ನು ಅನುಭವಿಸಿತು. 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಕೆಕೆಆರ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ಸಂದರ್ಭದಲ್ಲಿ ಕೆಕೆಆರ್‌ಗೆ ಮತ್ತೊಮ್ಮೆ ಆಸರೆಯಾಗಿದ್ದು ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್.

ಈ ಜೋಡಿ ಜವಾಬ್ಧಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 99 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಹಂತದಲ್ಲಿ ರಿಂಕು ಸಿಂಗ್ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರಾದರೂ ಅದು ಯಾವುದೇ ನಷ್ಟವನ್ನುಂಟು ಮಾಡಲಿಲ್ಲ. ಅಂತಿಮವಾಗಿ ಕೆಕೆಆರ್ 6 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ರಿಂಕು ಸಿಂಗ್ 54 ರನ್‌ಗಳಿಸಿದರೆ ನಾಯಕ ನಿತೀಶ್ ರಾಣಾ ಅಜೇಯ 57 ರನ್‌ಗಳಿಸಿ ಗೆಲುವಿನ ರೂವಾರಿ ಎನಿಸಿದರು.

ಇನ್ನು ಇದಕ್ಕೂ ಮುನ್ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಸಿಎಸ್‌ಕೆ ತಂಡ ಸಾಧಾರಣ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ಪಡೆದ ಸಿಎಸ್‌ಕೆ ಪರವಾಗಿ ಋತುರಾಜ್ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಅಜಿಂಕ್ಯಾ ರಹಾನೆಯಿಂದಲೂ 16 ರನ್‌ ಮಾತ್ರ ಹರಿದು ಬಂದಿತು. ಇನ್ನು ಡೆವೀಓನ್ ಕಾನ್ವೆ 30 ರನ್‌ಗಳಿಸಿ ಔಟಾದರು. ಅಂಬಾಟಿ ರಾಯುಡು ನಾಲ್ಕು ರನ್‌ಗಳಿಸಲು ಮಾತ್ರವೇ ಶಕ್ತವಾದರು. ಮೊಯೀನ್ ಅಲಿ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡಾದ ಸಿಎಸ್‌ಕೆ ತಮಡದ ಮೊತ್ತ 75 ರನ್‌ಗಳಿಗೆ 5 ವಿಕೆಟ್.

ಆದರೆ ನಂತರ ಶಿವಂ ದುಬೆ ಹಾಗೂ ರವೀಮದ್ರ ಜಡೇಜಾ ಅವರಿಂದ ಮಹತ್ವದ ಜೊತೆಯಾಟವೊಂದು ಸಿಎಸ್‌ಕೆ ದೊರೆಯಿತು. ಜಡೇಜಾ 24 ಎಸೆತಗಳಲ್ಲಿ 20 ರನ್‌ಗಳಿಸಿ ಶಿವಂ ದುಬೆ ಅವರಿಗೆ ಅದ್ಭುತ ಸಾಥ್ ನೀಡಿದರು. ಶಿವಂ ದುಬೆ ಕೊನೆಯವರೆಗೂ ಹೋರಾಡಿದ್ದು ಅಜೇಯ 48 ರನ್‌ಗಳಿಸಿದರು. ಹೀಗಾಗಿ ಅಂತಿಮವಾಗಿ ಸಿಎಸ್‌ಕೆ ಕೆಕೆಆರ್‌ಗೆ 145 ರನ್‌ಗಳ ಗುರಿ ನಿಗದಿಪಡಿಸಿತು

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಬೆಂಚ್: ಮಥೀಶ ಪತಿರಾನ, ನಿಶಾಂತ್ ಸಿಂಧು, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಲಾ, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ
ಬೆಂಚ್: ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ಎನ್ ಜಗದೀಸನ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ಕುಲ್ವಂತ್ ಖೆಜ್ರೋಲಿಯಾ, ಟಿಮ್ ಸೌಥಿ, ಮಂದೀಪ್ ಸಿಂಗ್, ಜಾನ್ಸನ್ ಚಾರ್ಲ್ಸ್, ಡೇವಿಡ್ ವೈಸ್, ಆರ್ಯ ದೇಸಾಯಿ

Story first published: Sunday, May 14, 2023, 23:33 [IST]
Other articles published on May 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+