DC vs rcb: ಸೋತರೂ ಮಿಂಚಿದ ಮಹಿಪಾಲ್ ಲೋಮ್ರೋರ್: ವಿಶೇಷ ಪ್ರದರ್ಶನದ ಬಗ್ಗೆ ಹೇಳಿದ್ದಿಷ್ಟು!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹೀನಾಯವಾಗಿ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಆರ್‌ಸಿಬಿ ತಂಡದ ಬೌಲಿಂಗ್ ತಂಡದ ಸೋಲಿಗೆ ಕಾರಣವಾಯಿತು. ಈ ಸೋಲಿನ ಮಧ್ಯೆಯೂ ಆರ್‌ಸಿಬಿ ತಂಡದ ಓರ್ವ ಆಟಗಾರನ ಪ್ರದರ್ಶನ ಗಮನಸೆಳೆದಿದ್ದು ಸ್ವಲ್ಪ ಸಮಾಧಾನ ತಂದಿದೆ.
ಆರ್‌ಸಿಬಿ ತಂಡದ ಯುವ ಆಟಗಾರ ಮಹಿಪಾಲ್ ಲೋಮ್ರೋರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದರು. ವೇಗವಾಗಿ ಬ್ಯಾಟಿಂಗ್ ನಡೆಸಿದ ಲೋಮ್ರೋರ್ ಕೇವಲ 29 ಎಸೆತಗಳಲ್ಲಿ 54 ರನ್ ಬಾರಿಸಿ ಅಬ್ಬರಿಸಿದರು. 6 ಬೌಂಡರಿ ಸಿಡಿಸಿದ ಅವರು 3 ಸಿಕ್ಸರ್ ಕೂಡ ಬಾರಿಸಿದರು. ಈ ಮೂಲಕ ತಂಡ ಸವಾಲಿನ ಗುರಿ ನೀಡಲು ಕಾರಣವಾದರು.

ಈ ಪ್ರದರ್ಶನದ ಬಳಿಕ ಲೋಮ್ರೋರ್ ತ,ಡದಲ್ಲಿ ತನಗೆ ನೀಡಲಾಗಿರುವ ಪಾತ್ರದ ಬಗ್ಗೆ ಹಾಗೂ ಅಂಗಳದಲ್ಲಿ ತನ್ನ ಪ್ರಮುಖ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. "ನನ್ನ ಜವಾಬ್ಧಾರಿ ಸ್ಪಿನ್ನರ್‌ಗಳ ವಿರುದ್ಧ ಆಡುವುದಾಗಿತ್ತು ಹಾಗೂ ವಿರಾಟ್ ಕೊಹ್ಲಿಯವರಿಗೆ ವೇಗಿಗಳನ್ನು ಎದುರಿಸುವ ಜವಾಬ್ಧಾರಿಯಿತ್ತು" ಎಂದಿದ್ದಾರೆ ಮಹಿಪಾಲ್ ಲೋಮ್ರೋರ್.
"ನನಗೆ ನೀಡಿರುವ ಜವಾಬ್ಧಾರಿಯಲ್ಲಿ ದೊಡ್ಡ ಮೊತ್ತದ ರನ್ ಬಾರಿಸುವುದು ಸವಾಲಿನದ್ದಾಗಿತ್ತು. ಬೌಲರ್‌ಗಳ ಮೇಲೆ ಆಕ್ರಮಣಕಾರಿಯಾಗಿ ಎರಗಿ ಅವರು ಹಿಂದೇಟು ಹಾಕುವಂತೆ ಮಾಡುವುದು ನನ್ನ ಜವಾಬ್ಧಾರಿಯಾಗಿತ್ತು. ಈ ಸವಾಲಿನಲ್ಲಿ ದೊಡ್ಡ ಮೊತ್ತದ ರನ್ ಬಾರಿಸುವುದು ನಿಜಕ್ಕೂ ಸವಾಲು. ನನ್ನ ಪರಿಶ್ರಮದಿಂದಾಗಿ ಈ ಪರಿಣಾಮಕಾರಿ ಇನ್ನಿಂಗ್ಸ್ ಬಂದಿದೆ. ವಿಶೇಷ ಸಾಧನೆ ಮಾಡಿರುವುದಕ್ಕೆ ಸಂತಸ ತಂದಿದೆ" ಎಂದಿದ್ದಾರೆ ಮಹಿಪಾಲ್ ಲೋಮ್ರೋರ್.
"ಸಾಮಾನ್ಯವಾಗಿ ನಾನು ನಿಧಾನದ ಪಿಚ್‌ನಲ್ಲಿ ಆಡುವುದನ್ನು ಇಷ್ಟ ಪಡುತ್ತೇನೆ. ಯಾಕೆಂದರೆ ಬ್ಯಾಕ್‌ಫೂಟ್‌ನಲ್ಲಿ ಆಡಲು ಹೆಚ್ಚಿನ ಅವಕಾಶ ದೊರೆಯುತ್ತದೆ. ನನ್ನ ಬಲ ಕೂಡ ಅದುವೇ ಆಗಿದೆ. ಡೆಹಲಿಯ ಪಿಚ್‌ನ ಲಾಭವನ್ನು ಕುಡ ನಾನು ಪಡೆದುಕೊಂಡೆ,. ಯಾಕೆಂದರೆ ಅದು ಸಾಮಾನ್ಯಕ್ಕಿಂತ ನಿಧಾನಗತಿಯ ಪಿಚ್. ಇಲ್ಲಿ ಚೆಂಡನ್ನು ಬಾರಿಸಲು ನನಗೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ" ಎಂದಿದ್ದಾರೆ ಆರ್‌ಸಿಬಿ ಯುವ ಆಟಗಾರ.
ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್‌ಗಳನ್ನು ಗಳಿಸಿತು. ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಮಹಿಪೊಆಲ್ ಲೋಮ್ರೋರ್ ಅರ್ಧ ಶತಕ ಬಾರಿಸಿದರೆ ಫಾಫ್ ಡು ಪ್ಲೆಸಿಸ್ 45 ರನ್ ಬಾರಿಸಿ ಅಬ್ಬರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಶೂನ್ಯ ಸುತ್ತಿ ಫೆವಿಲಿಯನ್ ಸೇರಿಕೊಂಡಿದ್ದರು.
ಆರ್‌ಸಿಬಿ ತಮಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಅದರಲ್ಲೂ ಫಿಲಿಪ್ ಸಾಲ್ಟ್ ಕೇವಲ 45 ಎಸೆತಗಳಲ್ಲಿ 87 ರನ್ ಬಾರಿಸಿ ಆರ್‌ಸಿಬಿ ತಂಡದ ಗೆಲವಿಇನ ಕನಸನ್ನು ಭಗ್ನಗೊಳಿಸಿದರು. ಅವರಿಗೆ ಆರಂಭದಲ್ಲಿ ಡೇವಿಡ್ ವಾರ್ನರ್ ಹಾಗೂ ರಿಲೀ ರೊಸ್ಸೋ ಅದ್ಭುತವಾಗಿ ಸಾಥ್ ನೀಡಿದರು. ಆರ್‌ಸಿಬಿ ನೀಡಿದ್ದ ಗುರಿಯನ್ನು ಡಿಸಿ ಕೇವಲ 16.4 ಓವರ್‌ಗಳಲ್ಲಿ ತಲುಪುವಲ್ಲಿ ಯಶಸ್ವಿಯಾಗಿದ್ದು ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications