For Quick Alerts
ALLOW NOTIFICATIONS  
For Daily Alerts
 

IPL 2023: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಲು ಈ 3 ಅಂಶಗಳೇ ಕಾರಣ!

ಈ ಬಾರಿಯ ಐಪಿಎಲ್‌ನಲ್ಲಿ ಈವರೆಗಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಥಿತ ಮಾತ್ರ ಹೀನಾಯ ಪರಿಸ್ಥಿರಿಯಲ್ಲಿದೆ. ಆರಂಭದಲ್ಲಿ ಆಡಿದ ಐದು ಪಂದ್ಯದಲ್ಲಿ ಐದರಲ್ಲಿಯೂ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಕಡೆಗೂ ಆರನೇ ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿದೆ. ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದರೂ ಡೆಲ್ಲಿ ಕ್ಯಾಪಿಟಲ್ಸ ತಂಡದ ಈ ಪ್ರದರ್ಶನ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಈ ಹಿಂದಿನ ಎರಡ್ಮೂರು ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಅದ್ಭುತವಾಗಿತ್ತು. ಎದುರಾಳಿಗಳಿಗೆ ಡೆಲ್ಲಿ ತಂಡವನ್ನು ಎದುರಿಸುವುದು ಸುಲಭ ಸವಾಲಾಗಿರಲಿಲ್ಲ. ಆದರೆ ಈ ಬಾರಿಯ ಆರಂಭ ಡೆಲ್ಲಿ ಪಾಲಿಗೆ ಅತ್ಯಂತ ಕಳಪೆಯಾಗಿತ್ತು. ಅನುಭವಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ನಾಯಕತ್ವ ತಂಡಕ್ಕಿದ್ದರೂ ಹಿನ್ನಡೆ ಅನುಭವಿಸುವಂತಾಯಿತು.

David Warner

ಹಾಗಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಭಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಈ ಪ್ರಮಾಣದ ಹಿನ್ನಡೆ ಅನುಭವಿಸಲು ಕಾರಣವೇನು? ಇಲ್ಲಿದೆ ಮಾಹಿತಿ ಮುಂದೆ ಓದಿ..

ಡಿಸಿಗೆ ಕಾಡುತ್ತಿದೆ ರಿಷಭ್ ಪಂತ್ ಅಲಭ್ಯತೆ

ಕಳೆದ ಡಿಸೆಂಬರ್‌ನಲ್ಲಿ ಭೀಕರ ಅಪಘಾತಕೆ ತುತ್ತಾದ ರಿಷಭ್ ಪಂತ್ ಗಾಯದ ಕಾರಣದಿಂದಾಗಿ ಸದ್ಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್‌ನಿಂದ ರಿಷಭ್ ಪಂತ್ ಅನಿವಾರ್ಯವಾಗಿ ದೂರವುಳಿದಿದ್ದಾರೆ. ರಿಷಭ್ ಪಂತ್ ಕಳೆದ ಸುಮಾರು ಐದು ಐಪಿಎಲ್ ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಿದ್ದ ಆಟಗಾರ. ಹಾಗಾಗಿ ರಿಚಭ್ ಪಂತ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರರ ಡೆಲ್ಲಿ ಕ್ಯಾಪಿಟಲ್ಸ ತಂಡಕ್ಕೆ ದೊರೆಯಲಿಲ್ಲ. ಇದು ತಂಡಕ್ಕೆ ಉಂಟಾದ ದೊಡ್ಡ ಆಘಾತ.

ಆರಂಭಿಕ ಕೆಲ ಪಂದ್ಯಗಳಲ್ಲೇ ತಂಡದಲ್ಲಿ ಭಾರೀ ಬದಲಾವಣೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ 6 ಪಂದ್ಯಗಳನ್ನು ಆಡಿದೆ. ಆದರೆ ಈ ಆರು ಪಂದ್ಯಗಳಲ್ಲಿಯೂ ಆಡಿರುವ ಆಟಗಾರರು ಎಂದರೆ ಕೇವಲ ಇಬ್ಬರು ಮಾತ್ರ. ನಾಯಕ ವಾರ್ನರ್ ಹಾಗೂ ಪೃಥ್ವಿ ಶಾ ಮಾತ್ರವೇ ಎಲ್ಲಾ ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಮನೀಶ್ ಪಾಂಡೆ, ಸರ್ಫರಾಜ್ ಖಾನ್, ರಿಲೀ ರೊಸೊವ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್, ಅಮನ್ ಹಕೀಮ್ ಖಾನ್, ಫಿಲ್ ಸಾಲ್ಟ್, ರೋವ್‌ಮನ್ ಪೊವೆಲ್, ಮಿಚೆಲ್ ಮಾರ್ಷ್ ಮತ್ತು ಯಶ್ ಧುಲ್ ಎರಡರಿಂದ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪ್ರಮಾಣದ ಬದಲಾವಣೆಗಳು ತಮಡದಲ್ಲಿ ನಕಾರಾತ್ಮಕವಾಗಿ ಪರಿಣಾಮ ಬೀರಿದೆ.

ಆಟಗಾರರನ್ನು ಸೂಕ್ತ ಕ್ರಮಾಂಕದಲ್ಲಿ ಆಡಿಸುವಲ್ಲಿ ಡಿಸಿ ವಿಫಲ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಎಡವಟ್ಟು ಮಾಡಿಕೊಂಡಿರುವುದು ಆಟಗಾರರಿಗೆ ಸೂಕ್ತ ಕ್ರಮಾಂಕ ಒದಗಿಸುವಲ್ಲಿ. ಪೃಥ್ವಿ ಶಾ ಹಾಗೂ ನಾಯಕ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ ನಿಜ. ಆದರೆ ಅದಾದ ಬಳಿಕ ಬರುವ ಆಟಗಾರರ ಕ್ರಮಾಂಕದಲ್ಲಿ ಭಾರೀ ಬದಲಾವಣೆಗಳು ಆಗಿವೆ. ಉದಾಹರಣೆಗೆ ರೋವ್ಮನ್ ಪೊವೆಲ್ ಕಳೆದ ಋತುವಿನಲ್ಲಿ ಆರನೇ ಕ್ರಮಾಂಕದಲ್ಲಿ ಆಡಿ 22.33 ರ ಸರಾಸರಿಯಲ್ಲಿ ಮತ್ತು 142.55 ರ ಸ್ಟ್ರೈಕ್ ರೇಟ್‌ನಲ್ಲಿ 134 ರನ್ ಗಳಿಸಿದ್ದರು. ಆದರೆ ಅವರನ್ನು ಈ ಋತುವಿನಲ್ಲಿ ಐದು ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ.

ಇನ್ನೋರ್ವ ಆಟಗಾರ ಮಿಚೆಲ್ ಮಾರ್ಶ್ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕ ಆಟಗಾರನಾಗಿ ಆಸ್ಟ್ರೇಲಿಯಾದ ಪರವಾಗಿ ಅದ್ಭುತ ಪ್ರದರ್ಶನ ನೀಡಿದರು. ಆದರೆ DC ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುತ್ತಿದೆ. ಇದು ಕೂಡ ಸರಿಯಾದ ನಿರ್ಧಾರವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತೊಡಿಸುತ್ತಿದ್ದಾರೆ ಅಭಿಮಾನಿಗಳು

Story first published: Friday, April 21, 2023, 19:31 [IST]
Other articles published on Apr 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+