For Quick Alerts
ALLOW NOTIFICATIONS  
For Daily Alerts
 

IPL 2023: ಗೆಲುವೇ ಕಾಣದಿರುವ ಡೆಲ್ಲಿಗೆ ಮತ್ತೊಂದು ಹಿನ್ನಡೆ; ಆಟಗಾರನೋರ್ವ ಟೂರ್ನಿಯಿಂದಲೇ ಔಟ್!

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 26 ಪಂದ್ಯಗಳು ನಿನ್ನೆ ( ಏಪ್ರಿಲ್ 19 ) ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯವಾಗಿದ್ದು, ಎಲ್ಲಾ ತಂಡಗಳು ಗೆಲುವಿನ ಖಾತೆ ತೆರೆದು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಟೂರ್ನಿ ಆರಂಭವಾಗಿ ಇಷ್ಟು ಪಂದ್ಯಗಳು ಮುಕ್ತಾಯಗೊಂಡರೂ ಯಾವ ಪಂದ್ಯದಲ್ಲಿಯೂ ಗೆಲುವನ್ನು ಕಂಡಿಲ್ಲ.

ಹೌದು, ಟೂರ್ನಿಯಲ್ಲಿ ಇಲ್ಲಿಯವರೆಗೂ ಐದು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಖಾತೆ ತೆರೆಯಲಾಗದೇ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಹೀಗೆ ತೀವ್ರ ಹಿನ್ನಡೆ ಅನುಭವಿಸಿ ಇನ್ನೆರಡು ಪಂದ್ಯಗಳನ್ನು ಸೋತರೆ ಟೂರ್ನಿಯಿಂದಲೇ ಹೊರಬೀಳುವ ಹಂತದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯನಾಗಿರುವ ಕಮಲೇಶ್ ನಾಗರಕೋಟಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೌದು, ಬೆನ್ನಿನ ಗಾಯದ ಸಮಸ್ಯೆಗೆ ಒಳಗಾಗಿರುವ ಕಮಲೇಶ್ ನಾಗರಕೋಟಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇನ್ನು 2022ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಕಮಲೇಶ್ ನಾಗರಕೋಟಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವ ಪಂದ್ಯದಲ್ಲಿಯೂ ಸಹ ಆಡಿಲ್ಲ. ಈಗಾಗಲೇ ಎಲ್ಲಾ ಪಂದ್ಯಗಳನ್ನು ಸೋತು ತಂಡದ ಆಟಗಾರರಲ್ಲಿ ಬದಲಾವಣೆ ತರುವ ಚಿಂತನೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಿನ್ನಡೆಯುಂಟಾಗಿದೆ.

ಇದೇ ದಿನ ದೇಶಿ ಕ್ರಿಕೆಟ್ ಪ್ರತಿಭೆಗಳಾದ ಅಭಿಮನ್ನು ಪ್ರಿಯಮ್ ಗಾರ್ಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರ್ಪಡೆಗೊಂಡಿದ್ದು ಬದಲಿ ಆಟಗಾರರನ್ನಾಗಿ ನೇಮಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಆರಿಸಲ್ಪಟ್ಟ ಕಮಲೇಶ್ ನಾಗರಕೋಟಿ 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಇದೇ ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಯಾವ ಪಂದ್ಯದಲ್ಲಿಯೂ ಕಣಕ್ಕಿಳಿದಿರಲಿಲ್ಲ.

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿ 9 ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದ ಕಮಲೇಶ್ ನಾಗರಕೋಟಿ ಒಟ್ಟು 26 ಓವರ್ ಬೌಲಿಂಗ್ ಮಾಡಿ 231 ರನ್ ನೀಡಿ 8.88 ರ ಎಕಾನಮಿಯಲ್ಲಿ ಕೇವಲ 5 ವಿಕೆಟ್ ಪಡೆದಿದ್ದರು. ಬಳಿಕ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಕಣಕ್ಕಿಳಿದು 2 ಓವರ್ ಬೌಲಿಂಗ್ ಮಾಡಿದ್ದ ಕಮಲೇಶ್ ನಾಗರಕೋಟಿ 25 ರನ್ ನೀಡಿ ಯಾವುದೆ ವಿಕೆಟ್ ಪಡೆದಿರಲಿಲ್ಲ. ಹಾಗೂ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಹ 2 ಓವರ್ ಬೌಲಿಂಗ್ ಮಾಡಿದ್ದ ಕಮಲೇಶ್ ನಾಗರಕೋಟಿ 29 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ.

ಅಲ್ಲದೇ ದೇಸಿ ಕ್ರಿಕೆಟ್‌ನಲ್ಲಿಯೂ ಕಮಲೇಶ್ ನಾಗರಕೋಟಿ ಪ್ರದರ್ಶನ ಅಷ್ಟಕ್ಕಷ್ಟೇ. 2022ರಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 7 ವಿಕೆಟ್ ಪಡೆದಿದ್ದ ಕಮಲೇಶ್ ನಾಗರಕೋಟಿ 2023ರಲ್ಲಿ ಯಾವುದೇ ಟೂರ್ನಿಯಲ್ಲಿಯೂ ಸಹ ಕಣಕ್ಕಿಳಿದು ಆಟವನ್ನಾಡಿರಲಿಲ್ಲ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಇಲ್ಲಿಯವರೆಗೂ ಆಡಿರುವ ಯಾವ ಪಂದ್ಯದಲ್ಲಿಯೂ ಸಹ ಆಡುವ ಬಳಗದಲ್ಲಿ ಕಮಲೇಶ್ ನಾಗರಕೋಟಿ ಸ್ಥಾನ ಗಿಟ್ಟಿಸಿಕೊಂಡಿಲ್ಲ.

Story first published: Thursday, April 20, 2023, 10:54 [IST]
Other articles published on Apr 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+