IPL 2023: ರಿಷಬ್ ಪಂತ್ ಬದಲೀ ಆಟಗಾರನ ಹೆಸರಿಸಿದ ಡೆಲ್ಲಿ ಕ್ಯಾಪಿಟಲ್ಸ್: 20 ವರ್ಷದ ವಿಕೆಟ್-ಕೀಪರ್ ಬ್ಯಾಟರ್ ಆಯ್ಕೆ

ಸುದೀರ್ಘ ಕಾಯುವಿಕೆ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್‌ಗೆ ಬದಲೀ ಆಟಗಾರನ ಹೆಸರಿಸಿದೆ. 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಪಂತ್ ಬದಲಾಗಿ 20 ವರ್ಷದ ಯುವ ಬ್ಯಾಟರ್ ಆಯ್ಕೆಯಾಗಿದ್ದಾರೆ.
ಬಂಗಾಳ ತಂಡದ ಆಟಗಾರ ಅಭಿಷೇಕ್ ಪೊರೆಲ್ ಅವರನ್ನು ರಿಷಬ್ ಪಂತ್ ಬದಲಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಭಿಷೇಕ್ ಪೊರೆಲ್ ಬಂಗಾಳ ತಂಡದ ವಿಕೆಟ್ ಕೀಪರ್ ಆಗಿದ್ದು, ಎಡಗೈ ಬ್ಯಾಟರ್ ಆಗಿದ್ದಾರೆ. ಕಳೆದ ವರ್ಷ ಅವರು ಬಂಗಾಳ ತಂಡಕ್ಕೆ ಪದಾರ್ಪಣೆ ಮಾಡಿದ್ದರು, ಈಗ ಐಪಿಎಲ್ ತಂಡದ ಭಾಗವಾಗುವ ಅವಕಾಶ ಪಡೆದುಕೊಂಡಿದ್ದಾರೆ.
ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ, ಅಕ್ಷರ್ ಪಟೇಲ್ ತಂಡಕ್ಕೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ಸರ್ಫರಾಜ್ ಖಾನ್ ವಿಕೆಟ್ ಕೀಪರ್ ಆಗಿದ್ದರೂ, ಅವರಿಗೆ ಫಿಟ್‌ನೆಸ್ ಸಮಸ್ಯೆಯಿದೆ. ಇದೇ ಕಾರಣಕ್ಕೆ ಪಂತ್‌ಗೆ ಬದಲಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ನ ಹುಡುಕಾಟದಲ್ಲಿತ್ತು. ಈಗ 20 ವರ್ಷದ ಬಂಗಾಳ ಆಟಗಾರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ, ಭವಿಷ್ಯದ ದೃಷ್ಟಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನಿಗೆ ಮಣೆಹಾಕಿದೆ ಎನ್ನಲಾಗಿದೆ.

ಅಭಿಷೇಕ್ ಪೊರೆಲ್ ಅಂಕಿ ಅಂಶ
ಅಭಿಷೇಕ್ ಪೊರೆಲ್ 2022ರ ಫೆಬ್ರವರಿ ತಿಂಗಳಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದುವರೆಗೂ 16 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು, 26 ಇನ್ನಿಂಗ್ಸ್‌ಗಳಲ್ಲಿ 30.21 ಸರಾಸರಿಯಲ್ಲಿ 695 ರನ್ ಗಳಿಸಿದ್ದಾರೆ. ಇದುವರೆಗೂ 6 ಶತಕಗಳನ್ನು ಗಳಿಸಿ ಮಿಂಚಿದ್ದಾರೆ. ಕೇವಲ ಒಂದು ಇನ್ನಿಂಗ್ಸ್ ಲಿಸ್ಟ್ ಎ ಪಂದ್ಯದಲ್ಲಿ 54 ರನ್ ಗಳಿಸಿದ್ದಾರೆ.
ಇದುವರೆಗೂ ಕೇವಲ ಮೂರು ಟಿ20 ಪಂದ್ಯಗಳನ್ನಾಡಿದ್ದು, ಕೇವಲ 22 ರನ್ ಗಳಿಸಿದ್ದಾರೆ. ಅವರ ಆಟವನ್ನು ಹತ್ತಿರದಿಂದ ಗಮನಿಸಿ, ಭವಿಷ್ಯದಲ್ಲಿ ಉತ್ತಮ ಆಟಗಾರನನ್ನಾಗಿ ರೂಪಿಸುವ ಉದ್ದೇಶದಿಂದ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಮೊದಲನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್‌ನ ತಮ್ಮ ಮೊದಲನೇ ಪಂದ್ಯವನ್ನು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 1ರಂದು ಪಂದ್ಯ ನಡೆಯಲಿದ್ದು, ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ತನ್ನ ಮೊದಲ ತವರು ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 4ರಂದು ಪಂದ್ಯ ನಡೆಯಲಿದ್ದು, ದೆಹಲಿ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಮೊದಲನೇ ಪಂದ್ಯಕ್ಕಾಗಿ ತಂಡದ ಪ್ರಮುಖ ಬೌಲರ್ ಗಳಾದ ಲುಂಗಿ ಎನ್‌ಗಿಡಿ, ಅನ್ರಿಚ್ ನೊಕಿಯಾ ಮತ್ತು ಬಾಂಗ್ಲಾ ಬೌಲರ್ ಮುಸ್ತಫಿಜುರ್ ರೆಹಮಾನ್ ಅಲಭ್ಯರಾಗಿದ್ದು ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ : ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ರಿಪ್ಪಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಸರ್ ಪಟೇಲ್ (ಉಪನಾಯಕ), ಅನ್ರಿಚ್ ನೊಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಷ್ ಪಾಂಡೆ, ರಿಲೀ ರೊಸೌವ್, ಅಭಿಷೇಕ್ ಪೊರೆಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications