IPL 2023: ವಿಶೇಷ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ ಡೆಲ್ಲಿ ಕ್ಯಾಪಿಟಲ್ಸ್: ಕಾರಣ ಇಲ್ಲಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ಐಪಿಎಲ್ ಆವೃತ್ತಿಯ ತನ್ನ ಅಂತಿಮ ಪಂದ್ಯವನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಲೀಗ್ ಹಂತದಿಂದ ಈಗಾಗಲೇ ಹೊರಬಿದ್ದಿದ್ದು ಗೆಲುವಿನ ಮೂಲಕ ಟೂರ್ನಿ ಮುಗಿಸುವ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಾಮನಬಿಲ್ಲಿನ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಈ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಇಂದು ಅಧಿಕೃತವಾಗಿ ಪ್ರಕಟಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ 2020ರ ಬಳಿಕ ಪ್ರತಿ ಆವೃತ್ತಿಯಲ್ಲಿಯೂ ಈ ವಿಶೇಷ ಜರ್ಸಿಯೊಂದಿಗೆ ಕಣಕ್ಕಿಳಿಯುವ ಸಂಪ್ರದಾಯವನ್ನು ಇಟ್ಟುಕೊಂಡಿದೆ. ಭಾರತ ದೇಶದ ವೈವಿಧ್ಯತೆಯನ್ನು ಬಿಂಬಿಸುವ ದೃಷ್ಟಿಯಿಂದ ಈ ವಿಶೇಷವಾದ ಕಾಮನಬಿಲ್ಲಿನ ಬಣ್ಣಗಳ ಜರ್ಸಿಯೊಂದಿಗೆ ಡೆಲ್ಲಿ ಕ್ಯಾಪಿಟಕ್ಸ್ ತಂಡ ಕಣಕ್ಕಿಳಿಯಲಿದೆ.

ಇನ್ನು ಐಪಿಎಲ್‌ನಲ್ಲಿ ಕೆಲ ತಂಡಗಳು ಹೀಗೆ ವಿಶೇಷ ಕಾರಣಗಳಿಗಾಗಿ ವಿಶೇಷ ಜರ್ಸಿಯೊಂದಿಗೆ ಕಣಕ್ಕಿಳಿಯುವ ಸಂಪ್ರದಾಯವನ್ನು ಹೊಂದಿದೆ. ಇದರಲ್ಲಿ ಆರ್‌ಸಿಬಿ ಪ್ರಮುಖವಾಗಿದ್ದು ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜರ್ಸಿಯೊಂದಿಗೆ ಆಡುವ ಸಂಪ್ರದಾಯವನ್ನು ಇಟ್ಟುಕೊಂಡಿದೆ. ಪ್ರಕೃತಿಯನ್ನು ಉಳಿಸುವ ಸಂದೇಶವನ್ನು ಸಾರುವ ದೃಷ್ಟಿಯಿಂದ ಬಹುತೇಕ ಒಂದು ದಶಕದಿಂದ ಈ ಪದ್ದತಿಯನ್ನು ಮಾಡಿಕೊಂಡು ಬಂದಿದೆ ಆರ್‌ಸಿಬಿ. ಇನ್ನು ಆರ್‌ಸಿಬಿ ಈ ಹಿಂದೆ ನೀರಿನ ಮಹತ್ವ ಸಾರುವ ದೃಷ್ಟಿಯಿಂದ ನೀಲಿ ಬಣ್ಣದ ಜರ್ಸಿಯನ್ನು ಕೂಡ ತೊಟ್ಟು ಕಣಕ್ಕಿಳಿದಿತ್ತು.
ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಜರ್ಸಿಯೊಂದಿಗೆ ಕಣಕ್ಕಿಳಿದಿತ್ತು. ಎಲ್ಲರಿಗೂ ವಿದ್ಯೆ ಹಾಗೂ ಕ್ರೀಡೆಗೆ ಅವಕಾಶ ದೊರೆಯಬೇಕು ಎಂಬ ಆಶಯದೊಂದಿಗೆ ಈ ವಿಶೇಷ ಜರ್ಸಿಯೊಂದಿಗೆ ಎಂಐ ತಂಡ ಕಣಕ್ಕಿಳಿದಿತ್ತು. ಇನ್ನು ಗುಜರಾತ್ ಟೈಟನ್ಸ್ ತಂಡ ಕೂಡ ಇತ್ತೀಚೆಗೆ ಗುಲಾಬಿ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿದು ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿತ್ತು.
ಇನ್ನು ಶನಿವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಇದೇ ರೀತಿಯಾಗಿ ಭಿನ್ನ ಜರ್ಬಿಯೊಂದಿಗೆ ಕಣಕ್ಕಿಳಿಯಲಿದೆ. ಕೊಲ್ಕತ್ತಾ ನಯಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಕೊಲ್ಕತ್ತಾದಲ್ಲಿ ಆಡಲಿರುವ ಕಾರಣ ಕೊಲ್ಕತ್ತಾ ನಗರಕ್ಕೆ ಗೌರವ ಸಲ್ಲಿಸಲುವ ನಿಟ್ಟಿನಲ್ಲಿ ಖ್ಯಾತ ಫುಟ್ಬಾಲ್ ಕ್ಲಬ್ ಮೋಹನ್ ಬಾಗನ್ ತಂಡದ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications