IPL 2023: ಕೊಹ್ಲಿಗಿಂತ ಧೋನಿ ಕ್ಯಾಪ್ಟನ್ಸಿ ಇಷ್ಟ ಎಂದ ಪಡಿಕ್ಕಲ್; ರೂಟ್ ಆಯ್ಕೆ ಮಾಡಿದ್ದು ಯಾರನ್ನು?

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದೆಲ್ಲಾ ತಂಡಗಳೂ ಸಹ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಹೊಂದಿವೆ.
ಹೌದು, ಟೂರ್ನಿಯ 47 ಪಂದ್ಯಗಳು ಮುಕ್ತಾಯವಾದ ಬಳಿಕ ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಬಹುದು ಎಂಬ ಖಚಿತತೆ ಹಾಗೂ ಪಕ್ಕಾ ಸುಳಿವು ಸಿಗದಿದ್ದದ್ದು ಇದೇ ಮೊದಲ ಬಾರಿಗೆ ಎನ್ನಬಹುದು. ಹೀಗೆ ಟೂರ್ನಿಯ ಬಹುತೇಕ ಎಲ್ಲಾ ತಂಡಗಳು ಪ್ಲೇಆಫ್ ರೇಸ್‌ನಲ್ಲಿದ್ದು, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಸಹ ಟೂರ್ನಿಯ 47 ಲೀಗ್ ಪಂದ್ಯಗಳು ಮುಗಿದ ಬಳಿಕ ಪ್ಲೇಆಫ್ ರೇಸ್‌ನಲ್ಲಿ ದೊಡ್ಡ ಪೈಪೋಟಿ ನೀಡಬಲ್ಲ ತಂಡವಾಗಿ ಉಳಿದುಕೊಂಡಿದೆ.
ಹೀಗೆ ಪೈಪೋಟಿ ಒಡ್ಡುತ್ತಾ ಇರುವ ಹಾಲಿ ರನ್ನರ್ ಅಪ್ ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರು 'ದಿಸ್ ಆರ್ ದಟ್' ಗೇಮ್ ಆಡಿದ್ದಾರೆ. ಒಂದು ಪ್ರಶ್ನೆಗೆ ಎರಡು ಆಯ್ಕೆಗಳು ಬರಲಿದ್ದು, ಆಟಗಾರರು ತಮಗಿಷ್ಟವಾದ ಆಯ್ಕೆಯ ಕಡೆ ನಡೆದುಕೊಂಡು ಹೋಗಬೇಕಿತ್ತು. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡದ ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ ಹಾಗೂ ಜೋ ರೂಟ್ ಈ ಮೂವರು ಆಟಗಾರರು ಈ ಆಟದಲ್ಲಿ ಭಾಗವಹಿಸಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಉತ್ತರಗಳನ್ನು ಆರಿಸಿದರು.
ಅದರಂತೆ ಮೊದಲಿಗೆ ಚಾಹಲ್ ಡಾನ್ಸ್ ಸ್ಟೆಪ್ ಇಷ್ಟನಾ ಅಥವಾ ಜೋ ರೂಟ್ ಡಾನ್ಸ್ ಸ್ಟೆಪ್ ಇಷ್ಟನಾ ಎಂದು ಪ್ರಶ್ನೆಯನ್ನು ಕೇಳಲಾಯಿತು ಈ ಪ್ರಶ್ನೆಗೆ ಧ್ರುವ್ ಜುರೆಲ್ ಚಾಹಲ್ ಡಾನ್ಸ್ ಸ್ಟೆಪ್ ಇಷ್ಟ ಎಂದು ಆರಿಸಿದರೆ, ದೇವದತ್ ಪಡಿಕ್ಕಲ್ ಹಾಗೂ ಜೋ ರೂಟ್ ಇಬ್ಬರೂ ಸಹ ರೂಟ್ ಡಾನ್ಸ್ ಸ್ಟೆಪ್ ಇಷ್ಟ ಎಂದು ಆಯ್ಕೆ ಮಾಡಿದರು.
ಬಳಿಕ ಇನ್ಸ್ಟಾಗ್ರಾಮ್ ಅಥವಾ ಯುಟ್ಯೂಬ್, ಚಿತ್ರಗಳ ಹೆಸರು ಹಾಗೂ ಕ್ರಿಕೆಟ್‌ಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಮೂವರೂ ಸಹ ವಿಭಿನ್ನ ಉತ್ತರಗಳನ್ನು ಆರಿಸಿದರು.
ಅದೇ ರೀತಿ ಯಾರ ನಾಯಕತ್ವದಲ್ಲಿ ಆಡಲು ಇಷ್ಟಪಡ್ತೀರ ಎಂಬ ಪ್ರಶ್ನೆ ಬಂತು. ಈ ಪ್ರಶ್ನೆ ಬಂದ ಕೂಡಲೇ ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಇಬ್ಬರೂ ಸಹ ಎಂ ಎಸ್ ಧೋನಿ ನಾಯಕತ್ವದಲ್ಲಿ ಆಡಲು ಬಯಸುತ್ತೇವೆ ಎಂದು ಆಯ್ಕೆ ಮಾಡಿಕೊಂಡರು. ಆದರೆ ಜೋ ರೂಟ್ ಮಾತ್ರ ಎರಡನ್ನೂ ಆಯ್ಕೆ ಮಾಡದೆಯೇ ತನಗೆ ಇಬ್ಬರ ನಾಯಕತ್ವವೂ ಸಹ ಸಮ ಎಂದು ಮಧ್ಯದಲ್ಲಿಯೇ ನಿಂತುಕೊಳ್ಳುವ ಮೂಲಕ ತಿಳಿಸಿದರು.
ಅಷ್ಟೇ ಅಲ್ಲದೇ ರವಿಚಂದ್ರನ್ ಅಶ್ವಿನ್ ಹಾಗೂ ಜಡೇಜ್ ಸ್ಪಿನ್ ಕಾಂಬಿನೇಶನ್ ಇಷ್ಟನಾ ಅಥವಾ ಸ್ಟುವರ್ಟ್ ಬ್ರೋಡ್ ಹಾಗೂ ಜೇಮ್ಸ್ ಆಂಡರ್‌ಸನ್ ಕಾಂಬಿನೇಶನ್ ಇಷ್ಟನಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಧ್ರುವ್ ಜುರೆಲ್ ಹಾಗೂ ಜೋ ರೂಟ್ ಯೋಚಿಸದೆಯೇ ಸ್ಟುವರ್ಟ್ ಬ್ರೋಡ್ ಹಾಗೂ ಜೇಮ್ಸ್ ಆಂಡರ್‌ಸನ್ ಎಂದು ಉತ್ತರಿಸಿದರೆ, ದೇವದತ್ ಪಡಿಕ್ಕಲ್ ಕೆಲ ಸಮಯ ಯೋಚಿಸಿ ರವಿಚಂದ್ರನ್ ಅಶ್ವಿನ್ ಹಾಗೂ ಜಡೇಜ್ ಸ್ಪಿನ್ ಕಾಂಬಿನೇಶನ್ ಅನ್ನು ಆರಿಸಿಕೊಂಡರು.
ಅಲ್ಲದೇ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಇಬ್ಬರಲ್ಲಿ ಯಾರಿಷ್ಟ ಎಂಬ ಪ್ರಶ್ನೆ ಕೂಡ ಬಂದಿತು. ಈ ಪ್ರಶ್ನೆಗೆ ಜೋ ರೂಟ್ ಮೆಸ್ಸಿ ಆಯ್ಕೆ ಮಾಡಿದರೆ, ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ರಾನಾಲ್ಡೊ ಆಯ್ಕೆ ಮಾಡಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications