ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪಂಜಾಬ್ ಕಿಂಗ್ಸ್‌ ತಂಡಕ್ಕೆ ಶುಭಸುದ್ದಿ, ಐಪಿಎಲ್‌ ಆಡಲಿದ್ದಾರೆ ಸ್ಫೋಟಕ ಬ್ಯಾಟರ್

IPL 2023: England Batter Jonny Bairstow Set To Return To IPL, Punjab Kings Are Happy Side

ಪಂಜಾಬ್ ತಂಡ ಸ್ಫೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋ 2023ರ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ. ಬೈರ್‌ಸ್ಟೋ ಪುನರಾಗಮನ ಪಂಜಾಬ್ ತಂಡಕ್ಕೆ ಸಾಕಷ್ಟು ಶಕ್ತಿ ತುಂಬುತ್ತದೆ. 2022ರಲ್ಲಿ ಗಾಲ್ಫ್ ಆಡುವ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬೈರ್‌ಸ್ಟೋ ಚೇತರಿಕೆ ಕಾಣುತ್ತಿದ್ದು, ಐಪಿಎಲ್‌ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ಭರವಸೆ ಹೊಂದಿದ್ದಾರೆ. ಡೈಲಿ ಮೇಲ್ ವರದಿ ಮಾಡಿರುವ ಪ್ರಕಾರ, ಮಾರ್ಚ್ 2023ರ ವೇಳೆಗೆ ಜಾನಿ ಬೈರ್‌ಸ್ಟೋ ಕ್ರಿಕೆಟ್‌ ಆಡಲು ಶಕ್ತರಾಗಿರುತ್ತಾರೆ. ಮಾರ್ಚ್ ಆರಂಭದಲ್ಲಿ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ ಸೀಮಿತ ಓವರ್ ಸರಣಿಯನ್ನು ಆಡಲಿದೆ. ಆದರೆ, ಈ ಸರಣಿಯಲ್ಲಿ ಜಾನಿ ಬೈರ್‌ಸ್ಟೋ ಆಡುವುದು ಅನುಮಾನವಾಗಿದ್ದರು ಕೂಡ, ಅವರು ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ.

IPL Player Auction 2023: ಆರ್‌ಸಿಬಿ ಕುರಿತಂತೆ ದೊಡ್ಡ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್IPL Player Auction 2023: ಆರ್‌ಸಿಬಿ ಕುರಿತಂತೆ ದೊಡ್ಡ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್

ಸೆಪ್ಟೆಂಬರ್ 2022 ರಲ್ಲಿ ಜಾನಿ ಬೈರ್‌ಸ್ಟೋ ಅವರು ಗಾಲ್ಫ್ ಆಡುವಾಗ ಜಾರಿಬಿದ್ದು ಪಾದ ಸೇರಿದಂತೆ ಕಾಲಿನ ಮೂರು ಕಡೆಗಳಲ್ಲಿ ಗಾಯವಾಗಿತ್ತು. ನ್ಯೂಜಿಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬೈರ್‌ಸ್ಟೋಗೆ ಗಾಯಗೊಂಡಿದ್ದು ಸಾಕಷ್ಟು ನಷ್ಟವನ್ನು ಉಂಟುಮಾಡಿತು.

ಅದಾದ ನಂತರ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಮತ್ತು ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು. ಪ್ರಸ್ತುತ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಆಡುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೂಡ ಕಳೆದುಕೊಳ್ಳುವ ಮೂಲಕ ಸ್ಫೋಟಕ ಬ್ಯಾಟರ್ ನಿರಾಸೆ ಅನುಭವಿಸಿದ್ದಾರೆ.

IPL 2023: England Batter Jonny Bairstow Set To Return To IPL, Punjab Kings Are Happy Side

ತಂಡದಲ್ಲಿ ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್

2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಜಾನಿ ಬೈರ್‌ಸ್ಟೋ 6.75 ಕೋಟಿ ರುಪಾಯಿಗಳಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು. ಬೈರ್‌ಸ್ಟೋ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಧವನ್ ಜೊತೆಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಬೈರ್‌ಸ್ಟೋವ್ ಪವರ್ ಪ್ಲೇನಲ್ಲಿ ಸ್ಫೋಟಕ ಆರಂಭ ಒದಗಿಸುತ್ತಿದ್ದರು.

2022ರ ಆವೃತ್ತಿಯಲ್ಲಿ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್‌ರನ್ನು ಪಂಜಾಬ್ ಕಿಂಗ್ಸ್ ಈ ಬಾರಿ ತಂಡದಿಂದ ಬಿಡುಗಡೆ ಮಾಡಿದೆ. ಶಿಖರ್ ಧವನ್ ತಂಡದ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪಂಜಾಬ್ ಕಿಂಗ್ಸ್ ಚಿಂತನೆ ನಡೆಸಿದೆ.

ಬೆನ್‌ ಸ್ಟೋಕ್ಸ್ ಅಥವಾ ಸ್ಯಾಮ್ ಕರನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಗಂಭೀರವಾದ ಚಿಂತನೆ ನಡೆಸುತ್ತಿದ್ದು, ಬೈರ್‌ಸ್ಟೋ ಆಗಮನ ತಂಡದ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ.

Story first published: Sunday, December 18, 2022, 23:01 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X