Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಮತ್ತೋರ್ವ ಸ್ಟಾರ್ ವಿದೇಶೀ ಆಟಗಾರ!

ಈ ಬಾರಿಯ ಐಪಿಎಲ್‌ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ‌ ಪ್ರದರ್ಶನ ಉತ್ತಮವಾಗಿಲ್ಲ. ಗೆಲುವಿಗಿಂತ ಹೆಚ್ಚಾಗಿ ಸೋಲಿನ ರುಚಿ ಕಂಡಿರುವ ರೋಹಿತ್ ಶರ್ಮಾ ಪಡೆ ಐಪಿಎಲ್ ಟೂರ್ನಿಯ ದ್ವಿತಿಯಾರ್ಧದಲ್ಲಿ ಉತ್ತಮ‌ ಪ್ರದರ್ಶನ‌ ನೀಡುವತ್ತ ಚಿತ್ತ ನೆಟ್ಟಿದೆ. ಅದಕ್ಕೆ ಪೂರಕವಾಗಿ ಫ್ರಾಂಚೈಸಿ ಇಂಗ್ಲೆಂಡ್್ನ ಸ್ಟಾರ್ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ತಂಡದ ವೇಗದ‌ ಬೌಲರ್ ಕ್ರಿಸ್ ಜೋರ್ಡನ್ ಅವರೊಂದಿಗೆ ಮುಂಬೈ ಇಂಡಿಯನ್ಸ್ ತಂಡ‌ ಬದಲು ಆಟಗಾರನಾಗಿ ಒಪ್ಪಂದ‌ಮಾಡಿಕೊಂಡಿದೆ. ಹೀಗಾಗಿ ಕ್ರಿಸ್ ಜೋರ್ಡನ್ ಮುಂಬೈ ಇಂಡಿಯನ್ಸ್ ಕೂಡಿಕೊಳ್ಳಲಿದ್ದು ಮುಂದಿನ‌ಭಾಗದಲ್ಲಿ ತಂಡದ‌ ಪರ ಕಣಕ್ಕಿಳಿಯಲಿದ್ದಾರೆ.

IPL 2023: England pacer Chris Jordan joins MI as replacement for remain matches of the season

ಅಂದಹಾಗೆ ಜೋರ್ಡನ್ ಕಳೆದ‌‌ ಡಿಸೆಂಬರ್ ತಿಂಗಳಿನಲ್ಲಿ ನಡೆದ ಹರಾಜಿನಲ್ಲಿ ಯಾವ ತಂಡಕ್ಕೂ ಹರಾಜಾಗಿರಲಿಲ್ಲ. 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಜೋರ್ಡನ್ ಅವರನ್ನು ಯಾವ ತಂಡವೂ ಖರೀದಿಸುವ‌ಮನಸ್ಸು ಮಾಡಿರಲಿಲ್ಲ. ಇದೀಗ ಎಂಐ ಪರವಾಗಿ ಅಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಜೋರ್ಡನ್ ಐಪಿಎಲ್್ನಲ್ಲಿ ರಾಯಲ್‌ಚಾಲೆಂಜರ್ಸ್ ಬೆಂಗಳೂರು, ಸನ ರೈಸರ್ಸ್ ಜೈದರಾಬಾದ್, ಪಂಜಾಬ್ ಕಿಂಗ್ಸ್ ತಂಡದ‌ ಪರವಾಗಿ ಅಡಿದ ಅನುಭವ ಹೊಂದಿದ್ದಾರೆ.

34ರ ಹರೆಯದ ಕ್ರಿಸ್ ಜೋರ್ಡನ್ ಐಪಿಎಲ್‌ನಲ್ಲಿ ಈವರೆಗೆ 28 ಇನ್ನಿಂಗ್ಸ್ ಆಡಿದ್ದು ಇದರಲ್ಲಿ 27 ವಿಕೆಟ್ ಪಡೆದುಕೊಂಡಿದ್ದಾರೆ. 30.85 ಸರಾಸರಿಹೊಂದಿರುವ ಜೋರ್ಡನ್ 9.32ರ ರಕಾನಮಿಯಲ್ಲಿ ಬೌಲಿಂಗ್ ದಆಳಿ ನಡೆಸಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ಜೋರ್ಡನ್ ನಾಲ್ಕು ಪಂದ್ಯಗಳಲ್ಲಿ ಎರಡು ವಿಕೆಟ್ ಸಂಪಾದಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂತಾರಾಷ್ಟ್ರೀಯ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಅಲಭ್ಯವಾಗಿದ್ದು ಜೇ ರಿಚರ್ಡ್ಸನ್ ಕೂಡ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಜೋಫ್ರಾ ಆರ್ಚರ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ರಿಲೇ ಮೆರಿಡಿತ್ ಅವರು ರಿಚರ್ಡ್ಸನ್ ಬದಲಿಗೆ ತಂಡವನಬ್ನು ಸೇರಿಕೊಂಡಿದ್ದಾರೆ. ಆದರೆ ಕ್ರಿಸ್ ಜೋರ್ಡನ್ ಯಾರ ಬದಲಿಗೆ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ 7 ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಮಾತ್ರವೇ ಮುಂಬೈ ಗೆದ್ದುಕೊಂಡಿದ್ದು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ ಮುಂಬೈ ಇಂಡಿಯನ್ಸ್ ತಂಡ. ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಎಂಐ ಕಣಕ್ಕಿಳಿಯುತ್ತಿದ್ದು ಈ ಪಂದ್ಯದಲ್ಲಿ ಗೆದ್ದು ತಂಡದ ಸ್ಥಿತಿ ಉತ್ತಮ ಪಡಿಸುವ ಇರಾದೆಯಲ್ಲಿದೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ.

Story first published: Sunday, April 30, 2023, 17:00 [IST]
Other articles published on Apr 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+