For Quick Alerts
ALLOW NOTIFICATIONS  
For Daily Alerts
 

IPL 2023: ಇವರಿಬ್ಬರೂ ಆರ್‌ಸಿಬಿ ಆಡುವ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದ ಮಾಜಿ ಕ್ರಿಕೆಟಿಗ

IPL 2023: Glenn Pocknall Suggests That Glenn Maxwell And Michael Bracewell Should Be In RCB Playing XI

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಇಂಗ್ಲೆಂಡ್ ಸ್ಫೋಟಕ ಆಲ್‌ರೌಂಡರ್ ವಿಲ್‌ ಜ್ಯಾಕ್ಸ್‌ರನ್ನು ಖರೀದಿ ಮಾಡಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್‌ನಿಂದ ಹೊರಗುಳಿಯುವುದು ಖಚಿತವಾಗಿದೆ.

ವಿಲ್‌ ಜ್ಯಾಕ್ಸ್ ಬದಲಾಗಿ ಆರ್‌ಸಿಬಿ ನ್ಯೂಜಿಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಎಡಗೈ ಸ್ಫೋಟಕ ಬ್ಯಾಟರ್ ಮತ್ತು ಬಲಗೈ ಆಫ್‌ ಬ್ರೇಕ್ ಬೌಲರ್ ಆಗಿರುವುದರಿಂದ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಅವರಿಗಿದೆ.

ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಇರುವುದರಿಂದ ಇಬ್ಬರಲ್ಲಿ ಒಬ್ಬರಷ್ಟೇ ಆಡುವ ಅವಕಾಶ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ನ್ಯೂಜಿಲೆಂಡ್‌ನ ಮಾಜಿ ಕೋಚ್ ಗ್ಲೆನ್ ಪೊಕ್ನಾಲ್ ಮಾತ್ರ ಆರ್ ಸಿಬಿ ತಮ್ಮ ಪ್ಲೇಯಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಇಬ್ಬರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮಿಚೆಲ್ ಬ್ರೇಸ್‌ವೆಲ್ ಅಮೋಘ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದರು. ಹೈದರಾಬಾದ್‌ನಲ್ಲಿ ನಡೆದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 350 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 12 ರನ್‌ಗಳ ಅಂತರದಲ್ಲಿ ಸೋಲನುಭವಿಸಿತ್ತು. ಮೈಕೆಲ್ ಬ್ರೇಸ್‌ವೆಲ್ ಈ ಪಂದ್ಯದಲ್ಲಿ ಕೇವಲ 78 ಎಸೆತಗಳಲ್ಲಿ 12 ಬೌಂಡರಿ 10 ಭರ್ಜರಿ ಸಿಕ್ಸರ್ ಸಹಿತ 140 ರನ್ ಗಳಿಸಿದ್ದರು. ಅವರ ಪ್ರದರ್ಶನವನ್ನು ಗಮನಿಸಿ ಆರ್ ಸಿಬಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

IPL 2023: Glenn Pocknall Suggests That Glenn Maxwell And Michael Bracewell Should Be In RCB Playing XI

ಇಬ್ಬರೂ ಆಡಿದರೆ ಅಪಾಯಕಾರಿ ತಂಡವಾಗಲಿದೆ

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಇಬ್ಬರನ್ನೂ ಒಟ್ಟಿಗೆ ಆಡುವುದರಿಂದ ಬೆಂಗಳೂರಿಗೆ ಇತರೆ ತಂಡಗಳ ಮೇಲೆ ಮೇಲುಗೈ ಸಾಧಿಸಲು ಕಾರಣವಾಗುತ್ತದೆ ಎಂದುನ್ಯೂಜಿಲೆಂಡ್‌ನ ಮಾಜಿ ಕೋಚ್ ಗ್ಲೆನ್ ಪೊಕ್ನಾಲ್ ಅಭಿಪ್ರಾಯಪಟ್ಟಿದ್ದಾರೆ. "ಇಬ್ಬರೂ ಸ್ಫೋಟಕ ಬ್ಯಾಟರ್ ಗಳಾಗಿರುವುದರಿಂದ ನಾನು ನೀಡುವ ಸಲಹೆ ಉತ್ತಮವಾಗಿದೆ ಎಂದು ಭಾವಿಸುತ್ತೇನೆ. ಅವರಿಬ್ಬರೂ ಮ್ಯಾಚ್ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಬಲ್ಲರು" ಎಂದು ಗ್ಲೆನ್ ಪೊಕ್ನಾಲ್ ಹೇಳಿದ್ದಾರೆ.

"ಇತರೆ ತಂಡಗಳಲ್ಲಿ ಈ ರೀತಿಯ ಇಬ್ಬರು ಆಟಗಾರರು ಇಲ್ಲ, ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದ್ದರೂ, ಇಬ್ಬರೂ ಆಡಬೇಕು ಎಂದು ನಾನು ಬಯಸುತ್ತೇನೆ. ಏಕೆಂದರೆ ಈ ಇಬ್ಬರೂ ಪಂದ್ಯದಲ್ಲಿ ವ್ಯತ್ಯಾಸ ಮಾಡಬಲ್ಲರು" ಎಂದು ಪೊಕ್ನಾಲ್ ಹೇಳಿದರು.

IPL 2023: Glenn Pocknall Suggests That Glenn Maxwell And Michael Bracewell Should Be In RCB Playing XI

ಆರಂಭದಲ್ಲಿ ಬ್ರೇಸ್‌ವೆಲ್ ಹರಾಜಾಗದ ಬಗ್ಗೆ ಪ್ರತಿಕ್ರಿಯೆ

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಮೈಕೆಲ್ ಬ್ರೇಸ್‌ವೆಲ್ ಯಾಕೆ ಹರಾಜಾಗಲಿಲ್ಲ ಎನ್ನುವ ಪ್ರಶ್ನೆಗೆ ಕೂಡ ಗ್ಲೆನ್ ಪೊಕ್ನಾಲ್ ಉತ್ತರ ನೀಡಿದ್ದಾರೆ. "ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮೈಕೆಲ್ ಬ್ರೇಸ್‌ವೆಲ್ ಹೊಸಬರಾಗಿದ್ದಾರೆ ಆದ್ದರಿಂದ ಅವರನ್ನು ಹರಾಜಿನ ವೇಳೆ ಯಾವ ತಂಡವೂ ಪರಿಗಣಿಸಿಲ್ಲ, ಆದರೆ ಭಾರತದ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ನೀಡಿದ ಬಳಿಕ ಹಲವು ಫ್ರಾಂಚೈಸಿಗಳು ಅವರನ್ನು ಗಮನಿಸಿದ್ದವು, ಭಾರತದ ವಿಕೆಟ್‌ಗಳಲ್ಲಿ ಬ್ರೇಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಬೌಲಿಂಗ್ ಕೂಡ ಉತ್ತಮವಾಗಿದೆ." ಎಂದು ಹೇಳಿದ್ದಾರೆ.

ಆರ್‌ಸಿಬಿ ಆಡುವ ಬಳಗದಲ್ಲಿ ನ್ಯೂಜಿಲೆಂಡ್‌ನ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಫಿನ್ ಅಲೆನ್‌ಗೂ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಗ್ಲೆನ್ ಪೊಕ್ನಾಲ್ ಅವರು ವೆಲ್ಲಿಂಗ್ಟನ್ ತಂಡದ ತರಬೇತುದಾರರಾಗಿದ್ದ ಸಮಯದಲ್ಲಿ ಮೈಕೆಲ್ ಬ್ರೇಸ್‌ವೆಲ್ ಮತ್ತು ಫಿನ್ ಅಲೆನ್ ಇಬ್ಬರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಅಲೆನ್ ಅತ್ಯುತ್ತಮ ಪ್ರತಿಭಾವಂತ ಕ್ರಿಕಟಿಗ ಎಂದು ಅವರು ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಐಪಿಎಲ್ 2023 ರ ಅಭಿಯಾನವನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಏಪ್ರಿಲ್ 2 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಿದೆ.

Story first published: Thursday, March 23, 2023, 19:14 [IST]
Other articles published on Mar 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+