For Quick Alerts
ALLOW NOTIFICATIONS  
For Daily Alerts
 

"ಈತ ಯಂಗ್ ಎಂಎಸ್ ಧೋನಿ": ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾರ ಬಗ್ಗೆ ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತದತ್ತ ಮುಖಮಾಡುತ್ತಿದ್ದು ಪ್ರತಿ ಪಂದ್ಯವೂ ಕುತೂಹಲಕಾರಿಯಾಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಯಾವೆಲ್ಲಾ ತಮಡಗಳು ಪ್ಲೇಆಫ್ಗೆ ಪ್ರವೇಶಲಿದೆ ಎಂಬುದನ್ನು ಊಹಿಸುವುದು ಅತ್ಯಂತ ಕಠಿಣವಾಗಿದ್ದು ಎಲ್ಲಾ ತಂಡಗಳಿಗೂ ಇನ್ನೂ ಅವಕಾಶ ತೆರೆದೇ ಇದೆ. ಹೀಗಾಗಿ ಪ್ರತಿ ತಂಡಗಳಿಗೂ ಮುಂದಿನ ಪಂದ್ಯಗಳ ಗೆಲುವು ಅತ್ಯಂತ ನಿರ್ಣಾಯಕವಾಗಿದ್ದು ಕೊನೆಯ ಕ್ಷಣದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೆಯೇ ಆ ತಂಡಗಳು ಪ್ಲೇಆಫ್ ರೇಸ್‌ನಲ್ಲಿ ಮುಂದಿರಲಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಪ್ರತಿಕ್ರಿಯೆ ನೀಡಿದ್ದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಐಪಿಡೆಲ್ ಟೂರ್ನಿಯಲ್ಲಿ ಅದ್ಭುತ ಆಂಭವನ್ನು ಪಡೆದು ಮೇಲುಗೈ ಸಾಧಿಸಿದ್ದರೂ ಕಳೆದ ಕೆಲ ಪಂದ್ಯಗಳಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಸತತವಾಗಿ ಸಳು ಕಾಣುತ್ತಿರುವ ಆರ್‌ಆರ್ ತಂಡ ಈಗ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿದೆ. ಆದರೆ ತಂಡದ ನಾಯಕ ಸಂಜು ಸ್ಯಾಮ್ಸನ್ ಬಗ್ಗೆ ಗ್ರೇಮ್ ಸ್ವಾನ್ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

IPL 2023: Graeme Swann praises RR Skipper Sanju Samson said he is like a young MS Dhoni

ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಜೊತೆಗೆ ಹೋಲಿಕೆ ಮಾಡಿರುವ ಗ್ರೇಮ್ ಸ್ವಾನ್ ಯುವ ಧೋನಿ ಎಂದು ಹೊಗಳಿದ್ದಾರೆ. "ನಾನು ಕಳೆದ ಐದಾರು ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದು ಸಂಜು ಅವರಲ್ಲಿ ಇಷ್ಟವಾಗುವ ಅಂಶವೇನೆಂದರೆ ಆತ ನಾಯಕನಾಗಿ ಹಾಗೂ ಆಟಗಾರನಾಗಿ ಅತ್ಯಂತ ಪ್ರಬಲವಾಗುತ್ತಿದ್ದಾರೆ. ಅದು ಅವರ ಪ್ರತಿಭೆಯನ್ನು ಸೂಚಿಸುತ್ತಿದೆ. ನಾಲ್ಕೈದು ವರ್ಷಗಳ ಹಿಂದೆಯೇ ಆತ ಎಷ್ಟು ಉತ್ತಮ ಆಟಗಾರ ಎಂಬುದು ಎಲ್ಲರಿಗೂ ಅರಿವಿತ್ತು. ಆದರೆ ಆರೇಳು ಪಂದ್ಯಗಳಲ್ಲಿ ಅವರಿಂದ ಉತ್ತಮ ಪ್ರದರ್ಶನ ಬಾರದಿದ್ದರೂ ನಂತರ ಒಂದು ಅದ್ಭುತವಾದ ಪ್ರದರ್ಶನದೊಂದಿಗೆ ವಾಪಾಸಾಗುತ್ತಿದ್ದರು" ಎಂದಿದ್ದಾರೆ ಗ್ರೇಮ್ ಸ್ವಾನ್.

ಮುಂದುವರಿದು ಅವರು "ಈಗ ಅವರು ರಾಜಸ್ಥಾನ್ ರಾಯಲ್ಸ್‌ಗೆ ಆಧಾರ ಸ್ಥಂಭವಾಗಿದ್ದಾರೆ. ಅಲ್ಲದೆ ಆತ ಬಹಳ ಶಾಂತಚಿತ್ತದ ವ್ಯಕ್ತಿತ್ವದವರು. ಬಹಳ ಭರವಸೆಯ ಆಟಗಾರನಾಗಿದ್ದು ನಾಯಕತ್ವದಲ್ಲಿ ಯುವ ಎಂಎಸ್ ಧೋನಿಯಂತೆ. ಆತ ತನ್ನ ತಾಳ್ಮೆ, ಶಾಂತಚಿತ್ತವನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ ಏನಾಗುತ್ತಿದೆ ಎಂಬುದನ್ನು ಬಹಳ ಉತ್ತಮವಾಗಿ ಅರಿತುಕೊಳ್ಳುವ ಸಾಮರ್ಥ್ಯವಿದ್ದು ಆಟವನ್ನು ಬಹಳ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ" ಎಂದಿದ್ದಾರೆ ಗ್ರೇಮ್ ಸ್ವಾನ್.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿತ್ತು. ಆದರೆ ಅದಾದ ಬಳಿಕ ಗೆಲುವಿನ ಲಯ ಕಳೆದುಕೊಂಡ ಆರ್‌ಆರ್ ಕಳೆದ ಆರು ಪಂದ್ಯಗಳ ಪೈಕಿ ಐದರಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಆರ್‌ಆರ್ ತಂಡ ಹಿಂದುಳಿದಿದ್ದು ಸದ್ಯ ಐದನೇ ಸ್ಥಾನದಲ್ಲಿದೆ.

Story first published: Thursday, May 11, 2023, 18:38 [IST]
Other articles published on May 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+