For Quick Alerts
ALLOW NOTIFICATIONS  
For Daily Alerts
 

IPL 2023: ಈ ಆಟಗಾರ ಭಾರತದ ಪರವಾಗಿ ಆಡಲೇಬೇಕು: ಸ್ಪೋಟಕ ಆಟಗಾರನ ಬಗ್ಗೆ ಹರ್ಭಜನ್ ಬ್ಯಾಟ್!

ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ಹಲವು ರೋಚಕ ಪಂದ್ಯಗಳಿಗೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದು ಅದ್ಭುತ ಮನರಂಜನೆ ದೊರೆತಿದೆ. ಹಾಲಿ ಚಾಂಪಿಯನ್ ಹಾಗೂ ರನ್ನರ್‌ಅಪ್‌ ತಂಡಗಳ ನಡುವಿನ ಕದನದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ಸಾಧಿಸಿದೆ. ಸ್ವತಃ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಆರ್‌ಆರ್ ತಂಡದ ಪರ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂಜು ಸ್ಯಾಮ್ಸನ್ ಭಾರತದ ಪರವಾಗಿ ಆಡಲೆಬೇಕು ಎಂದು ಒತ್ತಾಯಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನವನ್ನು ಹೊಗಳಿದ ಭಜ್ಜಿ ಇದೊಂದು ದೈತ್ಯ ಪ್ರದರ್ಶನವಾಗಿದ್ದು ಸಂಜು ಸ್ಯಾಮ್ಸನ್ ನಿಜಕ್ಕೂ ವಿಶೇಷ ಆಟಗಾರ ಎಂದು ಬಣ್ಣಿಸಿದ್ದಾರೆ.

IPL 2023: Harbhajan Singh Praises Sanju Samson said he has to play for India

"ಇದು ಅದ್ಭುತವಾದ ಪ್ರದರ್ಶನ. ನಾಯಕನ ಆಟ ಎಂದರೆ ಇದು. ಇಂಥಾ ಆಟಗಾರರು ಇತರ ರಲ್ಲಾ ಆಟಗಾರರಿಗಿಂತ ಹೆಚ್ಚಿನ ಉತ್ಸಾಹದಲ್ಲಿರುತ್ತಾರೆ. ಆತ ಒಬ್ಬ ವಿಶೇಷವಾದ ಆಟಗಾರ. ಈ ಪಂದ್ಯದಲ್ಲಿ ಹೇಟ್ಮೇಯರ್ ಅವರಿಗಿಂತಲೂ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿದ್ದು ಸಂಜು ಸ್ಯಾಮ್ಸನ್. ಹೇಟ್ಮೇಯರ್ ಅದನ್ನು ಮುಂದುವರಿಸಿ ಪೂರ್ಣಗೊಳಿಸಿದರು" ಎಂದು ಸಂಜು ಸ್ಯಾಮ್ಸನ್ ಬಗ್ಗೆ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ.

"ನಿಮ್ಮ ಸಾಮರ್ಥ್ಯದ ಬಗ್ಗೆನಿಮಗೆ ಅರಿವಿದ್ದರೆ ಇಂಥಾ ಇನ್ನಿಂಗ್ಸ್ ಬರುತ್ತದೆ. ಎಂಎಸ್ ಧೋನಿ ಕೂಡ ಇದೇ ರೀತಿ ಪಂದ್ಯಗಳಲ್ಲಿ ಆಳಕ್ಕಿಳಿಯುತ್ತಿದ್ದರು. ಯಾಕೆಂದರೆ ಅವರಿಗೆ ಅವರ ಸಾಮರ್ಥ್ಯದ ಬಗ್ಗೆ ಅರಿವಿತ್ತು. ತಾನಿ ಕೊನೆಯ ವರೆಗೂ ಇದ್ದರೆ ಪಂದ್ಯವನ್ನು ಪೂರ್ಣಗೊಳಿಸಬಹುದು ಎಂಬುದು ಅವರಿಗೂ ತಿಳಿದಿತ್ತು" ಎಂದು ಸಂಜು ಸ್ಯಾಮ್ಸನ್ ಅವರನ್ನು ಎಂಎಸ್ ಧೋನಿ ಜೊತೆಗೆ ಹೋಲಿಕೆ ಮಾಡಿದ್ದಾರೆ ಹರ್ಭಜನ್ ಸಿಂಗ್.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಇನ್ನಿಂಗ್ಸ್ ಆಡಿದ್ದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. 32 ಎಸೆತಗಳನ್ನು ಎದುರಿಸಿದ ಸಂಜು 60 ರನ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ ವಿರುದ್ಧ ಆರ್‌ಆರ್ ತಂಡ ಪ್ರಪ್ರಥಮ ಗೆಲುವು ಸಾಧಿಸಲು ಕಾರಣವಾದರು. ಜಿಟಿ ತಂಡ ನೀಡಿದ್ದ 178 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಒಂದು ಹಂತದಲ್ಲಿ 54 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಿಂದ ಸಂಜು ಸ್ಯಾಮ್ಸನ್ ಮೇಲೆತ್ತುವಲ್ಲಿ ಯಶಸ್ವಿಯಾದರು. ಅಂತಿಮ ಹಂತದಲ್ಲಿ ಶಿಮ್ರಾನ್ ಹೇಟ್ಮೇಯರ್ ಕೂಡ ಅಮೋಘ ಆಟದ ಮೂಲಕ ತಂಡವನ್ನು ಗೆಲ್ಲಿಸಿದರು.

ಅಂದಹಾಗೆ ಈ ಗೆಲುವಿನ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡ ನಾಲ್ಕು ಗೆಲುವು ಸಾಧಿಸಿದ್ದು 8 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ಅಗ್ರ ಐದು ಸ್ಥಾನಗಳಲ್ಲಿರುವ ಉಳಿದ ತಂಡಗಳಾಗಿದೆ.

Story first published: Monday, April 17, 2023, 15:45 [IST]
Other articles published on Apr 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+