Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs RCB: ಆರ್‌ಸಿಬಿ ಇತಿಹಾಸದಲ್ಲೇ ಇದು ಶ್ರೇಷ್ಠ ಗೆಲುವು: ಹರ್ಷ ಭೋಗ್ಲೆ

ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಅದರಲ್ಲೂ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಪ್ರಖರ ದಾಳಿಯ ಮುಂದೆ ಆರ್‌ಆರ್ ದಾಂಡಿಗರು ಸಂಪೂರ್ಣ ವೈಫಲ್ಯ ಕಂಡಿದ್ದು ಐಪಿಎಲ್ ಇತಿಹಾಸದ ಮೂರನೇ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ. ಈ ಮೂಲಕ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ ನೆಟ್‌ ರನ್‌ರೆಟ್‌ನಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ.

ಈ ಪಂದ್ಯದಲ್ಲಿ ಅರ್‌ಸಿಬಿ ಸಾಧಿಸಿದ ಗೆಲುವಿನ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಹಾಗೂ ಕಾಮೆಂಟೇಟರ್ ಹರ್ಷ ಭೋಗ್ಲೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇದು ಆರ್‌ಸಿಬಿ ತನ್ನ ಇತಿಹಾಸದಲ್ಲಿಯೇ ಪಡೆದ ಅತ್ಯಂತ ಶ್ರೇಷ್ಠ ಗೆಲುವು ಎಂದು ಬಣ್ಣಿಸಿದ್ದಾರೆ. ಆರ್‌ಆರ್ ತಂಡವನ್ನು ಬರೊಬ್ಬರಿ 112 ರನ್‌ಗಳ ಅಂತರದಿಂದ ಮಣಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಕ್ಕೇರುವಲ್ಲಿ ಯಶಸ್ವುಯಾಗಿದೆ.

IPL 2023: Harsha Bhogle said RCB’s win against RR is greatest result in their IPL history

ಕ್ರಿಕ್ ಬಜ್ ಜೊತೆಗೆ ಮಾತನಾಡಿದ ಹರ್ಷ ಭೋಗ್ಲೆ "ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಇತಿಹಾಸದಲ್ಲಿ ಇದು ಶ್ರೇಷ್ಠವಾದ ಫಲಿತಾಂಶ. ಈ ಸೋಲಿನಿಂದ ರಾಜಸ್ಥಾನ್ ರಾಯಲ್ಸ್‌ಗೆ ಹೊರಬರುವುದು ಬಹಳ ಕಠಿಣವಾಗಲಿದೆ. ಆರ್‌ಆರ್ ಈ ಆವೃತ್ತಿಯಲ್ಲಿ ಸಾಕಷ್ಟು ಅದ್ಭುತ ಪಂದ್ಯಗಳನ್ನು ಆಡಿದೆ. ಆದರೆ ಈ ಸೊಲಿನಿಂದ ಅವರಿಗೆ ಹೊರಬರುವುದು ಬಹಳ ಕಠಿಣ" ಎಂದಿದ್ದಾರೆ ಹರ್ಷ ಭೋಗ್ಲೆ.

ಇನ್ನು ಇದೇ ಸಂದರ್ಭದಲ್ಲಿ ಹರ್ಷ ಭೋಗ್ಲೆ ಇಂದಿನ ಈ ಫಲಿತಾಂಶ ಟೂರ್ನಿಯ ಇತರ ತಂಡಗಳ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಆರ್‌ಸಿಬಿ ತಂಡದ ಈ ಬೃಹತ್ ಗೆಲುವು ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ತಂಡಗಳಿಗೆ ಸಂಕಷ್ಟವನ್ನುಂಟು ಮಾಡಲಿದೆ. ಅಂಕಪಟ್ಟಿಯಲ್ಲಿ ದೊಡ್ಡ ಅಲ್ಲೋಲಕಲ್ಲೋಲವುಂಡು ಮಾಡಿದೆ ಎಂದಿದ್ದಾರೆ ಹರ್ಷ ಭೋಗ್ಲೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ತಂಡ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧ ಶತಕ ಹಾಗೂ ಅನುಜ್ ರಾವತ್ ಅವರ ಸ್ಪೋಟಕ ಪ್ರದರ್ಶನದ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್‌ಗಳಿಸಿ ಆರ್‌ಆರ್ ತಂಡಕ್ಕೆ ಸವಾಲಿನ ಗುರಿ ನಿಗದಿಪಡಿಸಿತು.

ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್‌ಆರ್ ತಂಡಕ್ಕೆ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಸಿರಾಜ್ ಆಘಾತ ನೀಡಿದರು. ಯಶಸ್ವಿ ಜೈಸ್ವಾಲ್ ಯಾವುದೇ ರನ್‌ಗಳಿಸದೆ ವಿಕೆಟ್ ಕಳೆದುಕೊಂಡರು. ಇನ್ನು ಎರಡನೇ ಓವರ್‌ನಲ್ಲಿ ಜೋಸ್ ಬಟ್ಲರ್ ಕೂಡ ಯಾವುದೇ ರನ್‌ಗಳಿಸದೆ ಪಾರ್ನೆಲ್‌ವೆ ವಿಕೆಟ್ ಒಪ್ಪಿಸಿದರು. ನಂತರ ಅದೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಕೂಡ ೪ ರನ್‌ಗಳಿಸಿ ವಿಎಕಟ್ ಕಳೆದುಕೊಂಡಾಗ ತಂಡದ ಮೊತ್ತ 7-3.

ಹೀಗೆ ಮೊದಲ ಎರಡು ಓವರ್‌ಗಳಲ್ಲಿಯೇ ಆರ್‌ಆರ್ ತಂಡಕ್ಕೆ ಆಘಾತ ನಿಡಿದ ಆರ್‌ಸಿಬಿ ಈ ಲಯವನ್ನು ಅದ್ಭುತವಾಗಿ ಮುಂದುವರಿಸಿಕೊಂಡು ಸಾಗಿತ್ತು. ತಂಡದ ಪರವಾಗಿ ಶಿಮ್ರಾನ್ ಹೇಟ್ಮೇಯರ್ ಮಾತ್ರ 35 ರನ್‌ಗಳಿಸಿ ಉತ್ತಮ ಸ್ಕೋರ್ ಗಳಿಸಿ ತಂಡದ ಮೊತ್ತ 50ರ ಗಡಿ ದಾಟಲು ಕಾರಣವಾದರು. ಈ ಪಂದ್ಯದಲ್ಲಿ ಆರ್‌ಆರ್ ಪರವಾಗಿ ಹೇಟ್ಮೇಯರ್ ಹಾಗೂ ಜೋ ರೂಟ್ ಮಾತ್ರವೇ ಎರಡಂಕಿ ದಾಟಿದ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಆರ್‌ಆರ್ ಕೇವಲ 59 ರನ್‌ಗಳಿಸಿ 10.3 ಓವರ್‌ಗಳಲ್ಲಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ವೇಯ್ನ್ ಪಾರ್ನೆಲ್ 3 ಓವರ್‌ಗಳಲ್ಲಿ 3 ವಿಕೆಟ್ ಪಡೆದುಕೊಂಡರೆ ಮೈಕಲ್ ಬ್ರೇಸ್‌ವೆಲ್ ಹಾಗೂ ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದುಕೊಂಡಿದ್ದು ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಒಂದು ವಿಕೆಟ್ ಸಂಪಾದಿಸಿದರು.

Story first published: Sunday, May 14, 2023, 23:24 [IST]
Other articles published on May 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+