For Quick Alerts
ALLOW NOTIFICATIONS  
For Daily Alerts
 

ಶುಬ್ಮನ್ ಗಿಲ್ ಸೂಪರ್ ಸ್ಟಾರ್: ಯುವ ಆರಂಭಿಕ ಆಟಗಾರನ ಬಗ್ಗೆ ಜಿಟಿ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು!

ಐಪಿಎಲ್ 16ನೇ ಆವೃತ್ತಿಯ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿದ್ದು ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಲು ಕಾರಣವಾಗಿದ್ದಾರೆ. ಕೇವಲ 60 ಎಸೆತಗಳಲ್ಲಿ ಶುಬ್ಮನ್ ಗಿಲ್ 129 ರನ್‌ಗಳನ್ನು ಸಿಡಿಸುವ ಮೂಲಕ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಮುಂಬೈ ಇಂಡಿಯನ್ಸ್‌ಗೆ 234 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿತು. ಹೀಗಾಗಿ ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 62 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಸಿಡಿಸಿದ ಶತಕ ಕಳೆದ ನಾಲ್ಕು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಬಂದ ಮೂರನೇ ಶತಕವೂ ಹೌದು. ಶುಕ್ರವಾರದ ಪಂದ್ಯದಲ್ಲಿ ಭರ್ತಿ 10 ಸಿಕ್ಸರ್ ಸಿಡಿಸಿದ ಗಿಲ್ 7 ಬೌಂಡರಿ ಬಾರಿಸಿದ್ದಾರೆ. ಈ ಮೂಲಕ ಶುಬ್ಮನ್ ಗಿಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದು ಆರೆಂಜ್ ಕ್ಯಾಪ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

IPL 2023: He is a Superstar Hardik Pandya praises Shubman Gill heroic performance vs Mumbai Indians

ಇನ್ನು ಶುಬ್ಮನ್ ಗಿಲ್ ಅವರ ಈ ವಿಶೇಷ ಪ್ರದರ್ಶನದ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಶುಬ್ಮನ್ ಗಿಲ್ ಅವರನ್ನು ಸೂಪರ್ ಸ್ಟಾರ್ ಎಂದು ಬಣ್ಣಿಸಿದ್ದು ಗುಜರಾತ್ ಟೈಟನ್ಸ ಹಾಗೂ ಭಾರತ ತಂಡಕ್ಕೆ ಬಹಳ ದೊಡ್ಡ ಅಸ್ತ್ರ ಎಂದು ಕೊಂಡಾಡಿದ್ದಾರೆ.

ಶುಬ್ಮನ್ ಗಿಲ್ ಕಳೆದ ಬಾರಿಯ ಐಪಿಎಲ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದು 483 ರನ್‌ಗಳನ್ನು ಗಳಿಸಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ಅವರು ತಮ್ಮ ಆಟವನ್ನು ಮತ್ತಷ್ಟು ಉನ್ನತಮಟ್ಟಕ್ಕೇರಿಸಿದ್ದಾರೆ. ಇನ್ನು ಈ ಆವೃತ್ತಿಯಲ್ಲಿ ಗಿಲ್ ಕೇವಲ ರನ್‌ಗಳನ್ನು ಗಳಿಸಿರುವುದು ಮಾತ್ರವಲ್ಲ ಅವರ ಸ್ಟ್ರೈಕ್‌ರೇಟ್ ಕೂ ಅತ್ಯದ್ಭುತವಾಗಿದ್ದು 156ರ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದಾರೆ.

"ಆಟದಲ್ಲಿ ಆತನಿಗಿರುವ ಸ್ಪಷ್ಟತೆ ಹಾಗೂ ಮಾನಸಿಕವಾಗಿ ಆತ ಅದ್ಭುತವಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ನಾನು ಕಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಒಂದು. ಆತ ಯಾವಾಗಲೂ ಆತುರಪಡುವುದಿಲ್ಲ. ಬಹಳ ನಿಯಂತ್ರದಲ್ಲಿದ್ದು ಚೆಂಡನ್ನು ಸರಿಯಾಗಿ ಗಮನಿಸಿಕೊಂಡು ಬಾರಿಸುವ ಕಲೆ ಹೊಂದಿದ್ದಾರೆ. ಆತನೋರ್ವ ಸೂಪರ್ ಸ್ಟಾರ್. ಆತ ನಮ್ಮ ಫ್ರಾಂಚೈಸಿ ಹಾಗೂ ಭಾರತಕ್ಕೆ ಶ್ರೇಷ್ಠ ಆಟಗಾರನಾಗಲಿದ್ದಾರೆ" ಎಂದು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಹಾರ್ದಿಕ್ ಪಾಂಡ್ಯ.

ಎರಡನೇ ಐಪಿಎಲ್ ಆಡುತ್ತಿರುವ ಗುಜರಾತ್ ಟೈಟನ್ಸ್ ತಂಡ ಎರಡನೇ ಬಾರಿಯೂ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಇದೀಗ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದು ಗೆದ್ದು ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ ಜಿಟಿ. ಈ ಹಿನ್ನೆಲೆಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, "ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ. ಫಲಿತಾಂಶ ಯಾವುದೇ ಬರಲಿ, ನಾವು ನಮ್ಮ ಶೇಕಡಾ ನೂರರಷ್ಟು ಪರಿಶ್ರಮ ಹಾಕಿದರೆ ನಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರೆ ಮಜವಾದ ಅನುಭವ ದೊರೆಯಲಿದೆ. ನಾಕೌಟ್ ಎಂಬುದು ಮಜವಾದ ಆಟ. ಗೆದ್ದರೆ ಫೈನಲ್‌ಗೆ ಸೋತರೆ ಇಲ್ಲಿಗೆ ಆಟ ಅಂತ್ಯವಾಗುತ್ತದೆ. ಆಟಗಾರರೊಂದಿಗೆ ನಾವು ಮಜಾ ಮಾಡುತ್ತೇವೆ" ಎಂದಿದ್ದಾರೆ ಹಾರ್ದಿಕ್ ಪಾಂಡ್

Story first published: Saturday, May 27, 2023, 11:23 [IST]
Other articles published on May 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+