Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: RCB ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಘಾತ: ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಸ ಸಾಕಷ್ಟು ಏರಿಳಿತದ ಪ್ರದರ್ಶನ ನೀಡುತ್ತಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಅದರ ಬೌಲಿಂಗ್ ವಿಭಾಗದ ಪ್ರದರ್ಶನ ಹೆಚ್ಚು ಆಘಾತ ನೀಡುತ್ತಿದೆ. ಈ ಸಂದರ್ಭದಲ್ಲಿ ಗಾಯದಿಂದ ಬಳಲುತ್ತಿರುವ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಟೂರ್ನಿಯ ಉಳಿದ ಭಾಗದಿಂದ ಸಂಪೂರ್ಣ ಹೊರಬಿದ್ದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಜೋಫ್ರಾ ಆರ್ಚರ್ ಬದಲಿಗೆ ಇಂಗ್ಲೆಂಡ್ ತಂಡದವರೇ ಆದ ಕ್ರಿಸ್ ಜೋಡನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಮುಂಬೈ ಇಂಡಿಯನ್ಸ ತಂಡ ಹಂಚಿಕೊಂಡಿದೆ. ಜೋಫ್ರಾ ಆರ್ಚರ್ ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಐದು ಪಂದ್ಯಗಳಲ್ಲಿ ಮಾತ್ರವೇ ಆಡಿದ್ದು ಇದರಲ್ಲಿ ಕೇವಲ 2 ವಿಕೆಟ್‌ಗಳನ್ನು ಮಾತ್ರವೇ ಕಬಳಿಸಿದೆ.

IPL 2023: Jofra Archer ruled out of the rest of the season, Chris Jordan replaces him

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಿಬ್ಬಂದಿಗಳು ಜೋಫ್ರಾ ಆರ್ಚರ್ ಚೇತರಿಕೆಯ ಮೇಲೆ ಗಮನವಿಟ್ಟಿಟ್ಟಿದೆ. ಪೂರ್ಣ ಪ್ರಮಾಣದ ಚೇತರಿಕೆಗಾಗಿ ಜೋಫ್ರಾ ಆರ್ಚರ್ ತವರಿಗೆ ವಾಪಾಸಾಗಿದ್ದಾರೆ. ಸುದೀರ್ಘ ಎರಡು ವರ್ಷಗಳ ವಿರಾಮದ ಬಳಿಕ ಜೋಫ್ರಾ ಆರ್ಚರ್ ಈ ವರ್ಷಾರಂಭದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಇದೀಗ ಆರ್ಚರ್ ಮತ್ತೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ.

ಇನ್ನು ಕ್ರಿಸ್ ಜೋರ್ಡನ್ ಕಳೆದ ಹರಾಜಿನಲ್ಲಿ 2 ಕೋಟಿ ಮೂಲಬೆಲೆ ಹೊಂದಿದ್ದು ಯಾವುದೇ ತಂಡಗಳು ಜೋರ್ಡನ್ ಅವರನ್ನು ತಂಡಕ್ಕೆ ಸೇರ್ಪಡೆಗೋಳಿಸಿರಲಿಲ್ಲ. ಇದಕ್ಕೂ ಮುನ್ನ ಜೋರ್ಡನ್ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರವಾಗಿ ಆಡಿದ್ದರು. ಈ ಬಾರಿಯ ಟೂರ್ನಿಯಲ್ಲಿ ಉಳಿದ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ಜೊರ್ಡನ್ ಅವರಿಂದ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು 34ರ ಹರೆಯದ ಜೋರ್ಡನ್ 2016ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಈವರೆಗೆ 28 ಐಪಿಎಲ್ ಪಂದ್ಯಗಳನ್ನು ಆಡಿರುವ ಆರ್ಚರ್ 27 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವೇಗದ ಬೌಲರ್ ಇಂಗ್ಲೆಂಡ್ ಪರವಾಗಿ 87 ಪಂದ್ಯಗಳಲ್ಲಿ ಆಡಿದ್ದು 96 ಅಂತಾರಾಷ್ಟ್ರೀಯ ಟಿ20 ವಿಕೆಟ್ ಪಡೆದುಕೊಂಡಿದ್ದಾರೆ. 2022ರಲ್ಲಿ ಜೋರ್ಡನ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಕಣಕ್ಕಿಳಿದಿದ್ದು ನಾಲ್ಕು ಪಂದ್ಯಗಳನ್ನು ಆಡಿ 2 ವಿಕೆಟ್ ಪಡೆದುಕೊಂಡಿದ್ದರು.

ಇನ್ನು ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜೋರ್ಡನ್ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ವಾಂಖೆಡೆ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಗಿ ಪಿಚ್‌ನಲ್ಲಿ ಆರ್‌ಸಿಬಿ ತಂಡದ ಬಲಿಷ್ಠ ಅಗ್ರ ಕ್ರಮಾಂಕವನ್ನು ಕಟ್ಟಿಹಾಕಬೇಕಿದ್ದರೆ ಮುಂಬೈ ಇಮಡಿಯನ್ಸ್ ಬೌಲಿಂಗ್ ವಿಭಾಗದನ್ನು ಬಲಿಷ್ಠಗೊಳಿಸುವುದು ಅಗತ್ಯವಾಗಿತ್ತು.

Story first published: Tuesday, May 9, 2023, 12:50 [IST]
Other articles published on May 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+