IPL 2023: ತವರಿನಲ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ವೇಗಿ ಜೋಶ್ ಹೇಜಲ್‌ವುಡ್ ಫಿಟ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಮಾಧಾನಕರ ಸುದ್ದಿ ಸಿಕ್ಕಿದೆ. ತಂಡದ ಪ್ರಮುಖ ಬೌಲರ್ ಜೋಶ್ ಹೇಜಲ್‌ವುಡ್ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದಾರೆ ಏಪ್ರಿಲ್ 26ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಹೇಳಲಾಗಿದೆ. ಅವರು ಒಮ್ಮೆ ತಂಡಕ್ಕೆ ಮರಳಿದರೆ ಆರ್ ಸಿಬಿ ಬೌಲಿಂಗ್ ದಾಳಿ ಇನ್ನಷ್ಟು ಮಾರಕವಾಗಲಿದೆ.
ಜೋಶ್ ಹೇಜಲ್‌ವುಡ್ ಜನವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಸಿಡ್ನಿಯಲ್ಲಿ ಹಿಮ್ಮಡಿ (ಅಕಿಲ್ಸ್ ಹೀಲ್) ಗಾಯಕ್ಕೆ ತುತ್ತಾಗಿದ್ದರು. ಭಾರತದ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಅವರು ಫಿಟ್ ಆಗುವ ಬಗ್ಗೆ ವಿಶ್ವಾಸ ಹೊಂದಿತ್ತಾದರೂ, ಮೊದಲನೇ ಟೆಸ್ಟ್‌ಗೆ ಮುನ್ನವೇ ಅವರು ಟೂರ್ನಿಯಿಂದ ಹೊರಬಿದ್ದರೂ, ಏಕದಿನ ಸರಣಿಗಾಗಿ ಆಯ್ಕೆಯಾದರೂ ಒಂದೂ ಪಂದ್ಯದಲ್ಲಿ ಕೂಡ ಅವರು ಮೈದಾನಕ್ಕೆ ಇಳಿಯಲಿಲ್ಲ.

ಜೋಶ್ ಹೇಜಲ್‌ವುಡ್ ತಮ್ಮ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದು, ಐಪಿಎಲ್ ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಆಡುವ ಬಗ್ಗೆ ಆರ್ ಸಿಬಿ ಮ್ಯಾನೇಜ್‌ಮೆಂಟ್ ವಿಶ್ವಾಸ ಹೊಂದಿತ್ತು. ಸದ್ಯ ಅದರಂತೆಯೇ ಅವರು ಏಪ್ರಿಲ್ ಕೊನೆಯ ವಾರದಲ್ಲಿ ತಂಡಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ, ಏಪ್ರಿಲ್ 26ರಂದು ಅವರು ಚಿನ್ನಸ್ವಾಮಿಯಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿಸಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಜೋಶ್
ಜೋಶ್ ಹೇಜಲ್‌ವುಡ್ ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಡಿದ 12 ಪಂದ್ಯಗಳಲ್ಲಿ 18.85 ಸರಾಸರಿಯಲ್ಲಿ 20 ವಿಕೆಟ್ ಪಡೆದು ಮಿಂಚಿದ್ದರು. ವನಿಂದು ಹಸರಂಗ ಮತ್ತು ಜೋಶ್ ಹೇಜಲ್‌ವುಡ್ ಬೌಲಿಂಗ್ ದಾಳಿಯಿಂದಾಗಿ ಆರ್ ಸಿಬಿ ಕಳೆದ ಬಾರಿ ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಡೆತ್ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದ ಜೋಶ್ ಹೇಜಲ್‌ವುಡ್ ರನ್ ಗಳಿಕೆಗೆ ಕಡಿವಾಣ ಹಾಕುತ್ತಿದ್ದರು.
ಜೋಶ್ ಹೇಜಲ್‌ವುಡ್ ಬದಲಾಗಿ ಐಪಿಎಲ್ 2023ರ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿಸಿದ ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟೋಪ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದರು. ಎರಡು ಓವರ್ ಬೌಲಿಂಗ್ ಮಾಡಿದರೂ ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮೊದಲ ಐಪಿಎಲ್ ವಿಕೆಟ್ ಪಡೆದು ಮಿಂಚಿದ್ದರು. ಸದ್ಯ ಏಪ್ರಿಲ್ 6ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ರೀಸ್ ಟೋಪ್ಲಿ ಗಾಯದ ಸಮಸ್ಯೆ ಗಂಭೀರವಾಗಿಲ್ಲ ಎಂದು ಹೇಳಲಾಗಿದ್ದು, ಏಪ್ರಿಲ್ 10 ರಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಲಾಗಿದೆ. ಅವರ ಬದಲಾಗಿ ಇಂಗ್ಲೆಂಡ್‌ನ ಮತ್ತೊಬ್ಬ ವೇಗದ ಬೌಲರ್ ಡೇವಿಡ್ ವಿಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ತಂಡದ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಕೂಡ ಗಾಯದ ಸಮಸ್ಯೆಯ ಕಾರಣ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಐಪಿಎಲ್ ಮಿನಿ ಹರಾಜಿನಲ್ಲಿ ಆರ್ ಸಿಬಿ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ವಿಲ್‌ಜ್ಯಾಕ್ಸ್ ಅವರನ್ನು ಖರೀದಿ ಮಾಡಿತ್ತು, ಆದರೆ ಐಪಿಎಲ್‌ಗೆ ಮುನ್ನವೇ ಅವರು ಗಾಯಗೊಂಡು ಹೊರಬಿದ್ದ ಬಳಿಕ, ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟರ್ ಮೈಕೆಲ್ ಬ್ರೇಸ್‌ವೆಲ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications