For Quick Alerts
ALLOW NOTIFICATIONS  
For Daily Alerts
 

SRH vs RCB: ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ತೆಲೆದೂಗಿದ ಇಂಗ್ಲೆಂಡ್ ದಿಗ್ಗಜ ಕ್ರಿಕೆಟಿಗ!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದರು. ಈ ಮೂಲಕ ಈ ಬಾರಿಯ ವಿರ್ಆಟ್ ಕೊಹ್ಲಿ ಐಪಿಎಲ್‌ನಲ್ಲಿ 6ನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನು ಈ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸಿದ ರೀತಿಯ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಕೊಹ್ಲಿ ಮಧ್ಯಮ ಓವರ್‌ನಲ್ಲಿ ಬ್ಯಾಟಿಂಗ್ ನಡೆಸಿದ ರೀತಿಯ ಬಗ್ಗೆ ಪೀಟರ್ಸನ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆರಂಭದಿಂದಲೂ ಉತ್ತಮ ಲಯದಲ್ಲಿದ್ದಾರೆ. ತಂಡದ ಪರ ಸಾಕಷ್ಟು ರನ್‌ಗಳಿಸಿದ್ದಾರೆ. ಆದರೆ ವಿರಾಟ್ ಕೊಗ್ಲಿ ರನ್‌ಗಳಿಸುವ ವೇಗದ ಬಗ್ಗೆ ಕೆಲ ಸಂದರ್ಭಗಳಲ್ಲಿ ಟೀಕೆಗಳು ವ್ಯಕ್ತವಾಗತ್ತು. ಟಿ20 ಮಾದರಿಗೆ ಹೊಂದೊಕೆಯಾಗುವಂತಾ ವೇಗದಲ್ಲಿ ಕೊಹ್ಲಿ ಬ್ಯಾಟ್‌ನಿಂದ ರನ್‌ ಹರಿದುಬರುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬಹಳ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದಾರೆ.

IPL 2023: Kevin Pietersen praises Virat Kohli batting intensity against Sunrisers Hyderabad

"ಇಂದಿನ ಪಂದ್ಯದಲ್ಲಿ ವ್ಯತ್ಯಾಸವಾಗಿದ್ದು ಮಧ್ಯಮ ಓವರ್‌ಗಳಲ್ಲಿ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್‌ನ ತೀವ್ರತೆಯನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದರು. ಈ ಸಂದರ್ಭದಲ್ಲಿ ಹತ್ತಿರದಲ್ಲಿ ರನ್‌ಗಳಿಸುವ ಬಗ್ಗೆ ಅವರು ಗಮ,ನಹರಿಸಲೇ ಇಲ್ಲ. ಬೌಂಡರಿ ಹಾಗೂ ಸಿಕ್ಸರ್‌ಗಳ ಕಡೆಗೆ ಗಮನ ನೀಡಿದರು. ಅವರ ಬ್ಯಾಟಿಂಗ್ ಬಹಳ ಆಕ್ರಮಣಕಾರಿಯಾಗಿತ್ತು. ಸ್ಪಿನ್ನರ್‌ಗಳನ್ನು ಬಹಳ ದಂಡಿಸಿದರು" ಎಂದು ಕವಿನ್ ಪೀಟರ್ಸನ್ ಬಂದ್ಯದ ಮುಕ್ತಾಯದ ಬಳಿಕ ಹೇಳಿಕೆ ನೀಡಿದ್ದಾರೆ.

ಈ ಮಹತ್ವದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಸನ್‌ರೈಸರ್ಸ್ ಬೌಲರ್‌ಗಳಿಗೆ ಅಂತಿಮ ಹಂತದವರೆಗೂ ಸಾಧ್ಯವಾಗಲೇ ಇಲ್ಲ. ಆಕ್ರಮಣಕಾರಿಯಾಗಿ ಆಡಿದ ಈ ಇಬರು ಆಟಗಾರರು 17.5 ಓವರ್‌ಗಳಲ್ಲಿ 172 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಆರ್‌ಸಿಬಿ ಬಹುತೇಕ ಗೆಲುವಿನ ಸನಿಹಕ್ಕೆ ತಲುಪಿಯಾಗಿತ್ತು. ಫಾಫ್ 47 ಎಸೆತಗಳಲ್ಲಿ 71 ರನ್‌ಗಳ ಕೊಡುಗೆ ನೀಡಿ ಮಿಂಚಿದ್ದಾರೆ.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 62 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆದರೆ ಅದಾದ ಬಳಿಕ ವಿರಾಟ್ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. ಈ ಮೂಲಕ ವಿರಾಟ್ ಕೊಹ್ಲಿ 63 ಎಸೆತಗಳನ್ನು ಎದುರಿಸಿ 100 ರನ್‌ಗೆ ಇನ್ನಿಂಗ್ಸ್ ಅಂತ್ಯಗೋಳಿಸಿದರು. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು.

ಆರ್‌ಸಿಬಿ ಟೂರ್ನಿಯಲ್ಲಿ ಈಗಾಗಲೇ 13 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ಆರ್‌ಸಿಬಿ ತಂಡಕ್ಕೆ ಇನ್ನು ಕೇವಲ ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ಲೀಗ್ ಹಂತದ ಕೊನೆಯ ಪಂದ್ಯವನ್ನು ಆರ್‌ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ ತಂಡ ಪ್ಲೇಆಫ್‌ಗೆ ಪ್ರವೇಶಿಸುವುದು ಖಚಿತ. ಹೀಗಾಗಿ ಆ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

Story first published: Friday, May 19, 2023, 11:34 [IST]
Other articles published on May 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+