IPL 2023 KKR Vs MI: ಕೆಕೆಆರ್ ತಂಡಕ್ಕೆ 16 ವರ್ಷಗಳ ಬಳಿಕ ಎರಡನೇ ಶತಕ ಗಳಿಸಿದ ವೆಂಕಟೇಶ್ ಅಯ್ಯರ್ : ಮುಂಬೈಗೆ ಸವಾಲಿನ ಗುರಿ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ ರನ್ ಕಲೆಹಾಕಿದೆ. ವೆಂಕಟೇಶ್ ಅಯ್ಯರ್ 51 ಎಸೆತಗಳಲ್ಲಿ 104 ರನ್ ಹೊಡೆಯುವ ಮೂಲಕ ತಂಡಕ್ಕೆ ಆಸರೆಯಾದರು. ಬರೋಬ್ಬರಿ 16 ವರ್ಷಗಳ ಬಳಿಕ ಕೆಕೆಆರ್ ಪರವಾಗಿ ಶತಕ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಎನ್ ಜಗದೀಶನ್ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ಔಟಾದರು. ರಹ್ಮನುಲ್ಲಾ ಗುರ್ಬಾಜ್ 12 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು.

ನಂತರ ಬಂದ ವೆಂಕಟೇಶ್ ಅಯ್ಯರ್ ಅಬ್ಬರಿಸಿದರು. 51 ಎಸೆತಗಳಲ್ಲಿ 6 ಬೌಂಡರಿ 9 ಭರ್ಜರಿ ಸಿಕ್ಸರ್ ಸಹಿತ 104 ರನ್ ಗಳಿಸಿ ಔಟಾದರು. ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರವಾಗಿ ಬ್ರೆಂಡನ್ ಮೆಕಲಮ್ ಶತಕ ಗಳಿಸಿದ್ದರು. ಅದಾದ ಬಳಿಕ ಕೆಕೆಆರ್ ತಂಡದ ಯಾವ ಬ್ಯಾಟರ್ ಕೂಡ ಶತಕ ಗಳಿಸಿರಲಿಲ್ಲ, 16 ಆವೃತ್ತಿಯ ಬಳಿಕ ವೆಂಕಟೇಶ್ ಅಯ್ಯರ್ ತಂಡದ ಪರವಾಗಿ ಎರಡನೇ ಶತಕ ಗಳಿಸಿದ ಸಾಧನೆ ಮಾಡಿದರು.

ಉಳಿದ ಬ್ಯಾಟರ್ ಗಳ ವೈಫಲ್ಯ
ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ವೆಂಕಟೇಶ್ ಅಯ್ಯರ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ರನ್ ಗಳಿಸಲು ವಿಫ;ವಾದರು. ನಾಯಕ ನಿತೀಶ್ ರಾಣಾ 10 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ 11 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ರಿಂಕು ಸಿಂಗ್ ಕೂಡ 18 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಂಡ್ರೆ ರಸೆಲ್ 10 ಎಸೆತಗಳಲ್ಲಿ 20 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರವಾಗಿ ಪಿಯೂಷ್ ಚಾವ್ಲಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. 4 ಓವರ್ ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರು. ಹೃತಿಕ್ ಶೋಕೆನ್ 4 ಎಸೆತಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಕ್ಯಾಮೆರಾನ್ ಗ್ರೀನ್, ಡುವಾನ್ ಜಾನ್ಸೆನ್ ರಿಲೀ ಮೆರೆಡಿತ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಕೆಕೆಆರ್ ಪ್ಲೇಯಿಂಗ್ 11
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಎನ್ ಜಗದೀಸನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಶಾರ್ದೂಲ್ ಠಾಕೂರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ. ಇಂಪ್ಯಾಕ್ಟ್ ಪ್ಲೇಯರ್: ಮಂದೀಪ್ ಸಿಂಗ್, ವೈಭವ್ ಅರೋರಾ, ಅಂಕುಲ್ ರಾಯ್, ಡೇವಿಡ್ ವೀಸೆ, ಸುಯಾಶ್ ಶರ್ಮಾ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಕ್ಯಾಮೆರಾನ್ ಗ್ರೀನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಡುವಾನ್ ಜಾನ್ಸೆನ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ. ಇಂಪ್ಯಾಕ್ಟ್ ಪ್ಲೇಯರ್: ರೋಹಿತ್ ಶರ್ಮಾ, ಕುಮಾರ್ ಕಾರ್ತಿಕೇಯ, ರಮಣ್‌ದೀಪ್ ಸಿಂಗ್, ವಿಷ್ಣು ವಿನೋದ್, ಅರ್ಷದ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications