Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 145 ರನ್‌ಗಳ ಗುರಿ ನೀಡಿದ ಧೋನಿ ಪಡೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್‌ ಗಳಿಸಿದೆ. ಹೀಗಾಗಿ ಕೆಕೆಆರ್ ಈ ಪಂದ್ಯದಲ್ಲಿ ಸಾಧಾರಣ ಗುರಿ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಸಿಎಸ್‌ಕೆ ತಂಡ ಸಾಧಾರಣ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ಪಡೆದ ಸಿಎಸ್‌ಕೆ ಪರವಾಗಿ ಋತುರಾಜ್ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಅಜಿಂಕ್ಯಾ ರಹಾನೆಯಿಂದಲೂ 16 ರನ್‌ ಮಾತ್ರ ಹರಿದು ಬಂದಿತು. ಇನ್ನು ಡೆವೀಓನ್ ಕಾನ್ವೆ 30 ರನ್‌ಗಳಿಸಿ ಔಟಾದರು. ಅಂಬಾಟಿ ರಾಯುಡು ನಾಲ್ಕು ರನ್‌ಗಳಿಸಲು ಮಾತ್ರವೇ ಶಕ್ತವಾದರು. ಮೊಯೀನ್ ಅಲಿ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡಾದ ಸಿಎಸ್‌ಕೆ ತಮಡದ ಮೊತ್ತ 75 ರನ್‌ಗಳಿಗೆ 5 ವಿಕೆಟ್.

IPL 2023, Kolkata Knight Riders need 145 runs to win against CSK

ಆದರೆ ನಂತರ ಶಿವಂ ದುಬೆ ಹಾಗೂ ರವೀಮದ್ರ ಜಡೇಜಾ ಅವರಿಂದ ಮಹತ್ವದ ಜೊತೆಯಾಟವೊಂದು ಸಿಎಸ್‌ಕೆ ದೊರೆಯಿತು. ಜಡೇಜಾ 24 ಎಸೆತಗಳಲ್ಲಿ 20 ರನ್‌ಗಳಿಸಿ ಶಿವಂ ದುಬೆ ಅವರಿಗೆ ಅದ್ಭುತ ಸಾಥ್ ನೀಡಿದರು. ಶಿವಂ ದುಬೆ ಕೊನೆಯವರೆಗೂ ಹೋರಾಡಿದ್ದು ಅಜೇಯ 48 ರನ್‌ಗಳಿಸಿದರು. ಹೀಗಾಗಿ ಅಂತಿಮವಾಗಿ ಸಿಎಸ್‌ಕೆ ಕೆಕೆಆರ್‌ಗೆ 145 ರನ್‌ಗಳ ಗುರಿ ನಿಗದಿಪಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಬೆಂಚ್: ಮಥೀಶ ಪತಿರಾನ, ನಿಶಾಂತ್ ಸಿಂಧು, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಲಾ, ಬೆನ್ ಸ್ಟೋಕ್ಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ
ಬೆಂಚ್: ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ಎನ್ ಜಗದೀಸನ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ಕುಲ್ವಂತ್ ಖೆಜ್ರೋಲಿಯಾ, ಟಿಮ್ ಸೌಥಿ, ಮಂದೀಪ್ ಸಿಂಗ್, ಜಾನ್ಸನ್ ಚಾರ್ಲ್ಸ್, ಡೇವಿಡ್ ವೈಸ್, ಆರ್ಯ ದೇಸಾಯಿ

Story first published: Sunday, May 14, 2023, 21:37 [IST]
Other articles published on May 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+