Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಕ್ನೋ ಪರ ಸ್ಪೋಟಕ ಪ್ರದರ್ಶನ ನೀಡಿದ ಮೇಯರ್ಸ್: ಅದೃಷ್ಟ ಸಾಥ್ ನೀಡಿದ್ದು ಖುಷಿಯಾಯ್ತ ಎಂದ ವಿಂಡೀಸ್ ಕ್ರಿಕೆಟಿಗ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೇಲ್ ಮೇಯರ್ಸ್ ಸ್ಪೋಟಕ ಪ್ರದರ್ಶನ ನೀಡಿ ಅಬ್ಬರಿಸಿದರು. ಈ ಪ್ರದರ್ಶನದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಲಕ್ನೋದ ಸವಾಲಿನ ಕ್ರೀಡಾಂಗಣದಲ್ಲಿಯೂ ಬೃಹತ್ ಮೊತ್ತವನ್ನು ಪೇರಿಸಲು ಯಶಸ್ವಿಯಾಯಿತು. ಈ ಸ್ಪೋಟಕ ಪ್ರದರ್ಶನದ ಬಳಿಕ ಮಾತನಾಡಿದ ಕೇಲ್ ಮೇಯರ್ಸ್ ಸಂತಸ ಹಂಚಿಕೊಂಡಿದ್ದಾರೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಏಕಾನ ಕ್ರೀಡಾಂಗಣದಲ್ಲಿ ರನ್‌ಗಳಿಸಲು ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಪರದಾಡಿತು. ನಂತರ ನಾಯಕ ಕೆಎಲ್ ರಾಹುಲ್ ಅಗ್ಗಕ್ಕೆ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಆರಂಭವಾಗಿದದ ಕೇಲ್ ಮೇಯರ್ಸ್ ಅಬ್ಬರ.

IPL 2023: Kyle Mayers reaction after excellent debut for LSG said Always good to get some luck

ಆರಂಭಿಕ ಆಟಗಾರ ಕೇಲ್ ಮೇಯರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಲು ಆರಂಭಿಸಿದರು. ಎರಡನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟವನ್ನು ನೀಡಿದರು. ಕುತೂಹಲಕಾರಿ ಅಂಶವೆಂದರೆ ಈ ಜೊತೆಯಾಟದಲ್ಲಿ ಹೂಡಾ ಪಾಲು ಕೇವಲ 17 ರನ್. ಹೂಡಾ ಔಟಾದ ತಕ್ಷಣವೇ ಕೇಲ್ ಮೇಯರ್ಸ್ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಈ ಮೂಲಕ ಸ್ಪೋಟಕ ಇನ್ನಿಂಗ್ಸ್ ಅಂತ್ಯವಾಯಿತು. 38 ಎಸೆತಗಳಲ್ಲಿ 73 ರನ್ ಬಾರಿಸಿ ಅಬ್ಬರಿಸಿದರು ಕೇಲ್ ಮೇಯರ್ಸ್. ಇದರಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳು ಇದ್ದವು.

ಇನ್ನು ಈ ಪಂದ್ಯದಲ್ಲಿ ಕೇಲ್ ಮೇಯರ್ಸ್ 14 ರನ್ ಗಳಿಸಿದ್ದಾಗ ಖಲೀಲ್ ಅಹ್ಮದ್ ಸುಲಭ ಕ್ಯಾಚನ್ನು ಕೈ ಚೆಲ್ಲಿದ ಕಾರಣ ಜೀವದಾನ ಪಡೆದುಕೊಂಡರು. ಇದನ್ನು ಅದ್ಭುತವಾದ ಬಳಸಿಕೊಂಡ ಎಲ್‌ಎಸ್‌ಜಿ ದಾಂಡಿಗ ಲಕ್ನೋ ಪಂದ್ಯಕ್ಕೆ ಸಂಪೂರ್ಣ ಮೇಲುಗೈ ಒದಗಿಸಿದರು. ಈ ಬಗ್ಗೆ ಮಾತನಾಡಿದ ಅವರು ಈ ಪಂದ್ಯದಲ್ಲಿ ಅದೃಷ್ಟವೂ ಸಾಥ್ ನೀಡಿದ್ದು ಖುಷಿ ನೀಡಿತು ಎಂದಿದ್ದಾರೆ.

"ಆರಂಭದಲ್ಲಿ ಪಿಚ್ ಬಹಳ ಸವಾಲಿನಿಂದ ಕೂಡಿತ್ತು. ಸಾಕಷ್ಟು ಏರಿಳಿತಗಳು ಪಿಚ್‌ನಲ್ಲಿ ಆಗುತ್ತಿದ್ದವು. ಆದರೂ ಉತ್ತಮವಾದ ಪಿಚ್ ಆಗಿದ್ದು ನಮ್ಮ ಬೌಲರ್‌ಗಳು ಕೂಡ ಈ ಪಿಚ್‌ನ ಲಾಭವನ್ನು ಉತ್ತಮವಾಗಿ ಬಳಸಿಕೊಂಡರು" ಎಂದಿದ್ದಾರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಬಿಕ ಆಟಗಾರ ಕೇಲ್ ಮೇಯರ್ಸ್. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 50 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿದೆ

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್
ಬೆಂಚ್: ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಕರಣ್ ಶರ್ಮಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಬೆಂಚ್: ಫಿಲಿಪ್ ಸಾಲ್ಟ್, ಅಮನ್ ಹಕೀಮ್ ಖಾನ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಅಭಿಷೇಕ್ ಪೊರೆಲ್

Story first published: Sunday, April 2, 2023, 2:35 [IST]
Other articles published on Apr 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+