Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ 16 ಐಪಿಎಲ್ ಸೀಸನ್ ಆಡಿದ 7 ಆಟಗಾರರಿವರು; 7 ತಂಡಗಳ ಪರ ಆಡಿದ್ದು ಈತನೊಬ್ಬನೇ!

IPL 2023: List of players who played all IPL seasons from 2008 to 2023

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ಮುಕ್ತಾಯಗೊಂಡಿವೆ. ಈ ಬಾರಿಯ ಟೂರ್ನಿಯಲ್ಲಿ ಹಲವು ಹೊಸ ಆಟಗಾರರು ಆಡುವ ಅವಕಾಶ ಪಡೆದುಕೊಂಡು ಐಪಿಎಲ್‌ಗೆ ಪದಾರ್ಪಣೆ ಮಾಡಿದರೆ, 7 ಆಟಗಾರರು ಮಾತ್ರ ತಮ್ಮ ಹದಿನಾರನೇ ಆವೃತ್ತಿಯ ಐಪಿಎಲ್ ಆಡುತ್ತಿದ್ದಾರೆ.

ಹೌದು, 2008ರಿಂದ ಈ ಬಾರಿ ನಡೆಯುತ್ತಿರುವ ಟೂರ್ನಿ ಸೇರಿದಂತೆ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ 7 ಆಟಗಾರರು ಮೈದಾನಕ್ಕಿಳಿದು ಆಟವನ್ನಾಡಿದ್ದು, ಈ ದಾಖಲೆ ಹೊಂದಿರುವ ಆ ಆಟಗಾರರು ಯಾರು, ಅವರು ಯಾವೆಲ್ಲಾ ತಂಡಗಳ ಪರ ಕಣಕ್ಕಿಳಿದಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಆರಂಭದಿಂದ ಇಲ್ಲಿಯವರೆಗೂ ಒಂದೇ ತಂಡದ ಪರ ಆಡುತ್ತಾ ಬಂದಿರುವ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನೂ ಸಹ ಹೊಂದಿದ್ದಾರೆ. ಹೌದು, ವಿರಾಟ್ ಕೊಹ್ಲಿ 2008ರಿಂದ ಈಗಿನ 2023ರ ಐಪಿಎಲ್ ಟೂರ್ನಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದಾರೆ. ಈ ಮೂಲಕ ಎಲ್ಲಾ 16 ಸೀಸನ್ ಆಡಿದ ಆಟಗಾರರಲ್ಲಿ ಓರ್ವರಾಗಿದ್ದಾರೆ.

2. ಎಂಎಸ್ ಧೋನಿ: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಸಹ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿಯೂ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತಿ ಪ್ರಮುಖ ಆಟಗಾರನಾಗಿರುವ ಎಂಎಸ್ ಧೋನಿ ಸಹ ವಿರಾಟ್ ಕೊಹ್ಲಿ ರೀತಿ ಎಲ್ಲಾ ಆವೃತ್ತಿಯಲ್ಲಿಯೂ ಒಂದೇ ತಂಡದ ಪರ ಆಡಬೇಕಿದ್ದ ಆಟಗಾರ. ಆದರೆ 2016 ಹಾಗೂ 2017ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ ಬ್ಯಾನ್ ಆದ ಕಾರಣ ಆ ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ ಆಡಿದ್ದರು.

dhoni kohli

3. ರೋಹಿತ್ ಶರ್ಮಾ: 2011ರಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ನಾಯಕ ರೋಹಿತ್ ಶರ್ಮಾ ಸಹ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಕಣಕ್ಕಿಳಿದಿರುವ ಆಟಗಾರ ಎನಿಸಿಕೊಂಡಿದ್ದಾರೆ. 2008ರಿಂದ 2010ರವರೆಗೆ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದರು.

4. ದಿನೇಶ್ ಕಾರ್ತಿಕ್: ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ದಿನೇಶ್ ಕಾರ್ತಿಕ್ ಸಹ ಎಲ್ಲಾ ಐಪಿಎಲ್ ಆವೃತ್ತಿಯಲ್ಲಿಯೂ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಒಟ್ಟು 6 ಫ್ರಾಂಚೈಸಿಗಳ ಪರ ಆಡಿದ್ದಾರೆ. ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ದಿನೇಶ್ ಕಾರ್ತಿಕ್ ಬಳಿಕ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ.

5. ಶಿಖರ್ ಧವನ್: ಶಿಖರ್ ಧವನ್ ಸಹ ಎಲ್ಲಾ ಐಪಿಎಲ್ ಆವೃತ್ತಿ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಶಿಖರ್ ಧವನ್ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಪರ ಕಣಕ್ಕಿಳಿದಿದ್ದಾರೆ.

6. ಮನೀಶ್ ಪಾಂಡೆ: ಕನ್ನಡಿಗ ಮನೀಶ್ ಪಾಂಡೆ ಸಹ ಎಲ್ಲಾ ಬಾರಿಯ ಐಪಿಎಲ್ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ಹೀಗೆ ಒಟ್ಟು 7 ಫ್ರಾಂಚೈಸಿಗಳ ಪರ ಮನೀಶ್ ಪಾಂಡೆ ಆಡಿದ್ದಾರೆ.

7. ವೃದ್ಧಿಮಾನ್ ಸಹಾ: ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೂಡ ಎಲ್ಲಾ ಐಪಿಎಲ್ ಆವೃತ್ತಿಯನ್ನು ಆಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ದಾರೆ.

Story first published: Thursday, April 27, 2023, 20:06 [IST]
Other articles published on Apr 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+