IPL 2023: ಆರ್‌ಸಿಬಿ 263 ರನ್ ದಾಖಲೆ ಸೇಫ್; ಈ ಬೃಹತ್ ದಾಖಲೆಗೆ ಗೇಲ್ ಜತೆ ಆತನೂ ಕಾರಣ

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ನಿನ್ನೆ ( ಏಪ್ರಿಲ್ 28 ) ಮೊಹಾಲಿಯ ಪಂಜಾಬ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ರನ್ ಹೊಳೆಯೇ ಹರಿಯಿತು.
ಎರಡೂ ತಂಡಗಳೂ ಸೇರಿ 458 ರನ್‌ಗಳನ್ನು ಚಚ್ಚಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 258 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ಆದರೆ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲ್ಔಟ್ ಆದ ಪಂಜಾಬ್ ಕಿಂಗ್ಸ್ 56 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ಆಟಗಾರರು ಅಬ್ಬರಿಸುತ್ತಿದ್ದಾಗ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತಿದೊಡ್ಡ ರನ್ ಮೊತ್ತದ ದಾಖಲೆಯನ್ನು ಮುರಿದುಬಿಡಬಹುದು ಎಂದು ಕ್ರಿಕೆಟ್ ಪ್ರೇಮಿಗಳು ಕಾತರತೆಯಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಆದರೆ ಅಂತಿಮ ಹಂತದಲ್ಲಿ ದೊಡ್ಡ ರನ್ ಹೆಚ್ಚಾಗಿ ಹರಿದು ಬರದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 263 ರನ್ ದಾಖಲೆಯನ್ನು ಮುರಿಯಲಾಗಲಿಲ್ಲ. ಹೀಗೆ 6 ರನ್‌ಗಳ ಅಂತರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹಿನ್ನಡೆ ಅನುಭವಿಸಲು ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿವಿಲಿಯರ್ಸ್ ರೀತಿ ಅಂತಿಮ ಹಂತದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸದೇ ಇದ್ದದ್ದು.
ಹೌದು, 2013ರ ಏಪ್ರಿಲ್ 23ರಂದು ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ 66 ಎಸೆತಗಳಲ್ಲಿ 13 ಬೌಂಡರಿ ಹಾಗೂ 17 ಸಿಕ್ಸರ್ ಸಹಿತ ಅಜೇಯ 175 ರನ್ ಕಲೆಹಾಕಿದ್ದರು. ಒಂದೆಡೆ ಕ್ರಿಸ್ ಗೇಲ್ 265 ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿದರೆ ಇನ್ನೊಂದೆಡೆ ಗೇಲ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ದಿಲ್‌ಶಾನ್ 36 ಎಸೆತಗಳಲ್ಲಿ 33 ರನ್ ಗಳಿಸಿ ಟೆಸ್ಟ್ ಪಂದ್ಯದ ರೀತಿ ಬ್ಯಾಟ್ ಬೀಸಿದ್ದರು.
ಉಳಿದಂತೆ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ 11, ಸೌರಭ್ ತಿವಾರಿ 2 ಎಸೆತಗಳಲ್ಲಿ 2 ಹಾಗೂ ರವಿ ರಾಮ್‌ಪಾಲ್ 1 ಎಸೆತ ಎದುರಿಸಿ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಎಲ್ಲಾ ಆಟಗಾರರೂ ಕ್ರಿಸ್ ಗೇಲ್ ರನ್ ಗಳಿಕೆ ವೇಗಕ್ಕೆ ವಿರುದ್ಧವಾಗಿ ಬ್ಯಾಟ್ ಬೀಸಿದರೆ ಅಂತಿಮ ಹಂತದಲ್ಲಿ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 31 ರನ್ ಗಳಿಸಿದ ಎಬಿಡಿ 387 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬೃಹತ್ 263 ರನ್ ದಾಖಲೆ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಎಬಿಡಿ ಬಾರಿಸಿದ್ದ 31 ರನ್ ಪೈಕಿ 30 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ನಿಂದಲೇ ಹರಿದುಬಂದಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications