IPL 2023: ಯುವ ಆಟಗಾರನನ್ನು ತಂಡದಲ್ಲೇ ಉಳಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ಸೂಪರ್ ಜೈಂಟ್ಸ್ (LSG) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್‌ಗಾಗಿ ಯುವ ಆಟಗಾರ ಆಯುಷ್ ಬದೋನಿಯನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ.
ತನ್ಮಯ್ ಶ್ರೀವಾಸ್ತವ ಅವರ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ಮಾರ್ಗದರ್ಶಕ ಗೌತಮ್ ಗಂಭೀರ್ ಆಯುಷ್ ಬದೋನಿಯನ್ನು ಉಳಿಸಿಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.
"ಗೌತಮ್ ಗಂಭೀರ್ ಆಟಗಾರನಿಗೆ ಬೆಂಬಲ ನೀಡಲಿದ್ದಾರೆ. ಅವರಿಗೆ ಯಾರಾದರೂ ಮೆಚ್ಚುಗೆಯಾದರೆ, ಅವರಿಗಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ಆಯುಷ್ ಬದೋನಿ ಭವಿಷ್ಯದಲ್ಲಿ ಪ್ರಮುಖ ಆಟಗಾರನನ್ನಾಗಿ ಮಾಡಲು ಸಹಾಯ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.
ಆದರೂ, ಬದೋನಿ ಉತ್ತಮವಾಗಿ ರನ್ ಗಳಿಸಿದರೂ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಬದೋನಿ, ನಂತರದ ಪಂದ್ಯಗಳಲ್ಲಿ ಅಜೇಯ 19, 19 ಮತ್ತು 10 ರನ್‌ಗಳನ್ನು ಮಾತ್ರ ಗಳಿಸಿದ್ದರು. 11 ಇನ್ನಿಂಗ್ಸ್‌ಗಳಿಂದ 20.13 ಸರಾಸರಿಯಲ್ಲಿ ರನ್ ಗಳಿಸಿದರು.
ಡೆಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022ರಲ್ಲಿ ಫಿನಿಷರ್ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಡೆಲ್ಲಿ ವಿದರ್ಭ ವಿರುದ್ಧ ಒಂದು ರನ್‌ನಿಂದ ಸೋಲನುಭವಿಸಿತ್ತು.

ಬೌಲಿಂಗ್ ಕೂಡ ಮಾಡಬಲ್ಲ ಆಟಗಾರ
ಫೀಲ್ಡಿಂಗ್‌ನಲ್ಲಿ ಅದ್ಭುತ ಕ್ಷಮತೆ ಹೊಂದಿರುವ ಆಯುಷ್ ಬದೋನಿ ಮಧ್ಯಮ ಓವರ್‌ಗಳಲ್ಲಿ ಆಫ್-ಸ್ಪಿನ್ನರ್ ಆಗಿ ಕೆಲವು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೆಲ್ಲವನ್ನು ಗಮನಿಸಿ, ಲಕ್ನೋ ಯುವ ಆಟಗಾರನನ್ನು ತನ್ನಲ್ಲೇ ಉಳಿಸಿಕೊಳ್ಳಲು ಮುಂದಾಗಿದೆ. ಬದೋನಿ ವೇಗದ ಬೌಲಿಂಗ್‌ನಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆಯುಷ್ ಬದೋನಿಯನ್ನು ಮೂಲ ಬೆಲೆ 20 ಲಕ್ಷ ರುಪಾಯಿಗಳಿಗೆ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿತ್ತು.
2022ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಎವಿನ್ ಲೆವಿಸ್, ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಆಂಡ್ರ್ಯೂ ಟೈ, ಕೈಲ್ ಮೇಯರ್ಸ್, ಅವೇಶ್ ಖಾನ್ , ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಆಯುಷ್ ಬದೋನಿ, ಮನನ್ ವೋಹ್ರಾ, ಕೃಷ್ಣಪ್ಪ ಗೌತಮ್, ಶಹಬಾಜ್ ನದೀಮ್, ಅಂಕಿತ್ ರಾಜ್‌ಪೂತ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕರಣ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications