For Quick Alerts
ALLOW NOTIFICATIONS  
For Daily Alerts
 

IPL 2023: ಲಕ್ನೋ ಸೂಪರ್ ಜೈಂಟ್ಸ್ ಅಗ್ನಿ ಪರೀಕ್ಷೆ ಗೆಲ್ಲುತ್ತಾ RCB: ಆಡುವ ಬಳಗದಲ್ಲಿ ಯಾರಿಗೆ ಅವಕಾಶ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೋಮವಾರ ಈ ಪಂದ್ಯ ನಡೆಯಲಿದ್ದು ಕುತೂಹಲ ಮೂಡಿಸಿದೆ. ಆರ್‌ಸಿಬಿ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರದ್ಧ ಸೋಲು ಅನುಭವಿಸಿದ್ದು ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯ ಆರ್‌ಸಿಬಿ ಪಾಳಿಗೆ ಬಹಳ ಮಹತ್ವದ್ದಾಗಿದೆ.

ಲಕ್ನೋ ಸೂಪರ್‌ ಜೈಂಟ್ಸ್ ತಂಡ ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದು ಬೃಹತ್ ಅಂತರದ ಗೆಲುವಿನೊಂದಿಗೆ ವಾಪಾಸಾಗಿದೆ. ಐಪಿಎಲ್ ಇತಿಹಾಸದ ಎರಡನೇ ಅತಿ ದೊಡ್ಡ ಮೊತ್ತ ಪೇರಿಸಿದ ಎಲ್‌ಎಸ್‌ಜಿ ತಂಡ 56 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಆಡಿರುವ 8 ಪಂದ್ಯಗಳಲ್ಲಿ ಲಕ್ನೋ ತಂಡ 5 ಗೆಲುವು ಹಾಗೂ 3 ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

IPL 2023, Lucknow Super Giants vs Royal Challengers Bangalore, Probable 11, Pitch Report

ಇತ್ತ ಆರ್‌ಸಿಬಿ ತಂಡ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದು ಸೋಲು ಅನುಭವಿಸಿತು. ಕೆಲ ವಿಭಾಗಗಳಲ್ಲಿ ಆರ್‌ಸಿಬಿ ತಂಡದ ವೈಫಲ್ಯ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಹೀಗಾಗಿ ಆರ್‌ಸಿಬಿ ಆಡಿರುವ 8 ಪಂದ್ಯಗಳಲ್ಲಿ 4ನೇ ಸೋಲು ಕಂಡಿದೆ. ಪ್ರಸ್ತುತ 8 ಅಂಕಗಳನ್ನು ಖಾತೆಯಲ್ಲಿ ಹೊಂದಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.

ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಈ ಪಂದ್ಯ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಮೇ 1 ಸೋಮವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಲಕ್ನೋದ ಏಕಾನ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಪಾಲಿಗೆ ಯಾವಾಗಲೂ ಕಠಿಣವಾಗಿರುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ವೇಗ ಹಾಗೂ ಬೌನ್ಸ್‌ಗೆ ಬ್ಯಾಟರ್‌ಗಳು ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರಲಿದೆ. ಇನ್ನು ಪಂದ್ಯ ಸಾಗಯತ್ತಿದ್ದಂತೆಯೇ ಇಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವಹಿಸಲಿದ್ದು ಬ್ಯಾಟರ್‌ಗಳಿಗೆ ಕಾಡಲಿದ್ದಾರೆ.
ಹವಾಮಾನ ವರದಿ: ಪಂದ್ಯದ ಅವಧಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಪಂದ್ಯಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಬಹಳ ಕಡಿಮೆಯಿದೆ. ಇನ್ನು ಪಂದ್ಯದ ಸಂದರ್ಭದಲ್ಲಿ 22-27 ಡಿಗ್ರಿ ಮಧ್ಯೆ ಉಷ್ಣಾಂಶವಿರುವ ನಿರೀಕ್ಷೆಯಿದೆ.

Rohit Sharma: ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಮುಂಬೈ ಇಂಡಿಯನ್ಸ್: ಕಾರಣ ಇಲ್ಲಿದೆ!
ಸಂಭಾವ್ಯ ಆಡುವ ಬಳಗ:
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನವೀನ್ ಉಲ್ ಹಕ್, ಅವೇಶ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಶಹ್ಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಮೈಕಲ್ ಬ್ರೇಸ್‌ವೆಲ್ ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್

Story first published: Sunday, April 30, 2023, 20:27 [IST]
Other articles published on Apr 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+