IPL 2023, RCB vs LSG: ಲಕ್ನೋ ಸವಾಲು ಗೆಲ್ಲುತ್ತಾ ಆರ್‌ಸಿಬಿ: ಪಂದ್ಯದ ಸಮಯ, ಸಂಭಾವ್ಯ ಆಡುವ ಬಳಗ
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಈ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸವಾಲು ಸ್ವೀಕರಿಸಲಿದೆ. ಆರ್‌ಸಿಬಿ ತಂಡ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆದ್ದ ಬಳಿಕ ಎರಡನೇ ಪಂದ್ಯವನ್ನು ಹೀನಾಯವಾಗಿ ಕಳೆದುಕೊಂಡಿದ್ದು ತವರಿನಲ್ಲಿ ಉತ್ತಮ ಪ್ರದರ್ಶನ ನಿಡಬೇಕಾದ ಒತ್ತಡದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಎರಡು ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಅಲ್ಲದೆ ಸೋತಿರುವ ಒಂದು ಪಂದ್ಯದಲ್ಲಿಯೂ ಎಲ್‌ಎಸ್‌ಜಿ ಬಹುತೇಕ ಗೆಲುವಿನ ಸನಿಹಕ್ಕೆ ತಲುಪಿತ್ತು. ಹೀಗಾಗಿ ಕಳೆದ ಬಾರಿಯ ಐಪಿಎಲ್‌ನಲ್ಲಿ ನಿಡಿದ ಪ್ರದರ್ಶನವನ್ನು ಈ ಭಾರಿಯೂ ಮುಂದುವರಿಸಿಕೊಂಡು ಹೋಗುವಲ್ಲಿ ಈವರೆಗೆ ಯಶಸ್ವಿಯಾಗಿದೆ. ಆರ್‌ಸಿಬಿ ವಿರುದ್ಧವೂ ಅಂಥಾದ್ದೇ ಪ್ರದರ್ಶನದ ವಿಶ್ವಾಸದಲ್ಲಿದೆ ಕೆಎಲ್ ರಾಹುಲ್ ಪಡೆ.

IPL 2023: ಇಂದು ನಡೆಯಲಿದೆ ಎರಡು ಪಂದ್ಯಗಳು; ಯಾರಿಗೆ ಯಾರು ಎದುರಾಳಿ? ಪಂದ್ಯದ ಸಮಯ
ಆದರೆ ಆರ್‌ಸಿಬಿ ತಂಡ ಮೊದಲ ಪಂದ್ಯದಲ್ಲಿ ಗೆದ್ದ ಬಳಿಕ ಎರಡನೇ ಪಂದ್ಯದಲ್ಲಿ ನೀಡಿದ ಪ್ರದರ್ಶನ ಆತಂಖಕಾರಿಯಾಗಿದೆ. ಆರಂಭದಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದರೂ ಬಳಿಕ ಎದುರಾಳಿಯನ್ನು ಕಟ್ಟಿ ಹಾಕಲು ವಿಫಲವಾಗುತ್ತಿದೆ. ಈ ಅಸ್ಥಿರ ಬೌಲಿಂಗ್ ಪ್ರದರ್ಶನ ಒಂದೆಡೆ ಚಿಂತೆಗೆ ದೂಡಿದ್ದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದ ಒಟ್ಟಾರೆ ಪ್ರದರ್ಶನವೂ ಕಳವಳಕಾರಿಯಾಗಿದೆ. ಹೀಗಾಗಿ ಈ ಸವಾಲನ್ನು ಆರ್‌ಸಿಬು ತವರಿನಲ್ಲಿ ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಏಪ್ರಿಲ್ 10 ಸೋಮವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್: ಬೆಂಗಳೂರಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ ಪಿಚ್ ಎಂಬುದರಲ್ಲಿ ಅನುಮಾನವಿಲ್ಲ. ಸಣ್ಣ ಅಂತರದ ಬೌಂಡರಿಗಳು ಇಲ್ಲಿ ಬ್ಯಾಟರ್‌ಗಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಆರ್‌ಸಿಬಿ ತಂಡದಲ್ಲಿ ಫಾಫ್ ಡಿ ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ರೀತಿಯ ಸ್ಪೋಟಕ ಬ್ಯಾಟರ್‌ಗಳು ಇದ್ದು ಈ ಆಟಗಾರರ ಬ್ಯಾಟಿಂಗ್ ಶೈಲಿಗೆ ಹೊಂದಿಕೆಯಾಗುವಂತಾ ಕ್ರೀಡಾಂಗಣ ಇದಾಗಿದೆ. ಇನ್ನು ಎಲ್‌ಎಸ್‌ಜಿ ತಂಡದ ನಾಯಕ ಕೆಎಲ್ ರಾಹುಲ್ ಹಾಗೂ ಅನುಭವಿ ಆಟಗಾರ ಕೆ ಗೌತಮ್‌ಗೆ ಈ ಅಂಗಳದ ಬಗ್ಗೆ ಸಂಪೂರ್ಣ ಅರಿವಿದ್ದು ಈ ಇಬ್ಬರು ಆಟಗಾರರು ಆರ್‌ಸಿಬಿಗೆ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ.
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್
ಎಲ್‌ಎಸ್‌ಜಿ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನಾದ್ಕತ್, ರವಿ ಬಿಷ್ಣೋಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications