Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR Vs LSG Preview : ಜೈಪುರದಲ್ಲಿ ಸ್ಯಾಮ್ಸನ್‌ಗೆ ಕೆಎಲ್ ರಾಹುಲ್ ಸವಾಲು: ಪ್ಲೇಯಿಂಗ್ 11, ಪಿಚ್ ವರದಿ

ಸೆಣೆಸಲಿದೆ. ಏಪ್ರಿಲ್ 19ರಂದು, ಬುಧವಾರ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳ ಹಣಾಹಣಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಆವೃತ್ತಿಯಲ್ಲಿ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ. ರಾಜಸ್ಥಾನ ರಾಯಲ್ಸ್ 5 ಪಂದ್ಯಗಳಲ್ಲಿ 4 ಗೆಲುವು ಕಂಡಿದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ 5 ಪಂದ್ಯಗಳಲ್ಲಿ 3 ಗೆಲುವು ಕಂಡಿದ್ದು ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ಈ ಆವೃತ್ತಿಯಲ್ಲಿ ಮೊದಲನೇ ಬಾರಿಗೆ ಜೈಪುರದಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಮೊದಲು ಅಸ್ಸಾಂನ ಗುವಾಹಟಿಯಲ್ಲಿ ಎರಡು ಪಂದ್ಯಗಳನ್ನು ಆಡಿತ್ತು.

RR Vs LSG Preview

ರಾಜಸ್ಥಾನ ರಾಯಲ್ಸ್ ತಾವು ಆಡಿದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಕಂಡಿತ್ತು. ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ರಾಜಸ್ಥಾನ ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿ ಕಳೆದ ಆವೃತ್ತಿಯಲ್ಲಿ ಮೂರು ಬಾರಿ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಲಕ್ನೋ ಸೂಪರ್ ಜೈಂಟ್ಸ್ ತವರಿನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿದೆ. ನಾಯಕ ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಆತ್ಮವಿಶ್ವಾಸ ನೀಡಿದೆ. ತಂಡದಲ್ಲಿ ಅತ್ಯುತ್ತಮ ಬೌಲಿಂಗ್ ಪಡೆಯಿದ್ದು, ರಾಜಸ್ಥಾನ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಸಿದ್ಧವಾಗಿದ್ದಾರೆ.

RR Vs LSG Preview

ಹೆಡ್ ಟು ಹೆಡ್ ಮತ್ತು ಪಿಚ್ ವರದಿ

ಉಭಯ ತಂಡಗಳು ಕಳೆದ ಈವರೆಗೆ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಇನ್ನು ಮೊದಲ ಗೆಲುವು ಸಾಧಿಸಬೇಕಿದೆ. ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಪಿಚ್ ಸ್ಪರ್ಧಾತ್ಮಕವಾಗಿರುತ್ತದೆ. ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಮೊತ್ತ 158 ಆಗಿದೆ. ಚೇಸ್ ಮಾಡುವ ತಂಡ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಮಾಡುವುದು ಉತ್ತಮ ಆಯ್ಕೆಯಾಗುತ್ತದೆ. ಈ ಅಂಗಳದಲ್ಲಿ ಇದುವರೆಗೂ 47 ಐಪಿಎಲ್ ಪಂದ್ಯಗಳು ನಡೆದಿದ್ದು, 32 ಪಂದ್ಯಗಳಲ್ಲಿ ಚೇಸಿಂಗ್ ತಂಡ ಗೆದ್ದಿದ್ದರೆ 15 ಪಂದ್ಯಗಳಲ್ಲಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.

RR Vs LSG Preview

ರಾಜಸ್ಥಾನ್ ರಾಯಲ್ಸ್ ಸಂಭ್ಯಾವ್ಯ ಪ್ಲೇಯಿಂಗ್ 11

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್. ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ ಪಡಿಕ್ಕಲ್, ಮುರುಗನ್ ಅಶ್ವಿನ್, ಡೊನಾವೊನ್ ಫೆರೇರಾ, ನವದೀಪ್ ಸೈನಿ, ಜೋ ರೂಟ್.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ 11

ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಅವೇಶ್ ಖಾನ್, ಯುಧ್ವೀರ್ ಸಿಂಗ್ ಚರಕ್, ಮಾರ್ಕ್ ವುಡ್, ರವಿ ಬಿಷ್ಣೋಯ್. ಇಂಪ್ಯಾಕ್ಟ್ ಪ್ಲೇಯರ್ಸ್: ಅಮಿತ್ ಮಿಶ್ರಾ, ಜಯದೇವ್ ಉನದ್ಕತ್, ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಡೇನಿಯಲ್ ಸ್ಯಾಮ್ಸ್.

Story first published: Tuesday, April 18, 2023, 20:12 [IST]
Other articles published on Apr 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+