Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs RCB: ಮುಂಬೈ ಇಂಡಿಯನ್ಸ್ ಸವಾಲು ಗೆಲ್ಲಿದೆಯಾ ಆರ್‌ಸಿಬಿ?: ಸಂಭಾವ್ಯ XI, ಪಿಚ್ ರಿಪೋರ್ಟ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಸದ್ಯ ಅಂಕಪಟ್ಟಿಯಲ್ಲಿ ಎರಡು ತಂಡಗಳ ಸ್ಥಿತಿ ಕೂಡ ಒಂದೇ ರೀತಿಯಾಗಿದ್ದು ನೆಟ್‌ ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತಲೂ ಮುಂಬೈ ಇಂಡಿಯನ್ಸ್ ಹಿಂದಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಗೆದ್ದು ತಮ್ಮ ಸ್ಥಾನವನ್ನು ಉತ್ತಮಗೊಳಿಸುವ ಲೆಕ್ಕಾಚಾರದಲ್ಲಿದೆ.

ಆರ್‌ಸಿಬಿ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಐ ಸೋಲು ಕಂಡಿತ್ತು. ಹೀಗಾಗಿ ತಂಡದ ಸ್ಥಿತಿ ಮತ್ತೊಮ್ಮೆ ಸಂಕಷ್ಟದಲ್ಲಿದೆ. ಸದ್ಯ ಆರ್‌ಸಿಬಿ ಆಡಿರುವ 10 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಐದು ಸೋಲು ಅನುಭವಿಸಿದ್ದು 10 ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲದೆ. ಈ ಪಂದ್ಯದಲ್ಲಿ ಗೆದ್ದರೆ 3ನೇ ಸ್ಥಾನಕ್ಕೇರುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ ಆರ್‌ಸಿಬಿ ಅಮೋಘ ಗೆಲುವು ಸಾಧಿಸಿತ್ತು.

IPL 2023, Match 54th, Mumbai Indians vs Royal Challengers Bangalore, Predicted Playing 11, Pitch Report

ಮುಂಬೈ ಇಂಡಿಯನ್ಸ್ ತಂಡ ಕೂಡ ಈ ಬಾರಿಯ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿದೆ. ಆರ್‌ಸಿಬಿ ರೀತಿಯಲ್ಲಿಯೇ ಮುಂಬೈ 10 ಪಂದ್ಯಗಳನ್ನು ಆಡಿದ್ದು ಐದು ಗೆಲುವು ಹಾಗೂ ಐದು ಸೋಲಿನಿಂದಿಗೆ ಹತ್ತು ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿನ ಗೆಲುವು ಮುಂಬೈ ಇಂರಿಯನ್ಸ್ ಪಡೆಗೂ ಮಹತ್ವದ್ದಾಗಿದೆ.

ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ

ಮುಂಬೈ ಇಂಡಿಯನ್ಸ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧದ ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 9 ಮಂಗಳವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.

MI vs RCB ಪಿಚ್ ರಿಪೋರ್ಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿದ್ದು ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಎರಡು ತಮಡಗಳು 100ಕ್ಕೂ ಅಧಿಕ ರನ್‌ಗಳಿಸಿದರೂ ಇಲ್ಲಿ ಅಚ್ಚರಿಯಿಲ್ಲ.ಉಳಿದ ತಾಣಗಳಿಗೆ ಹೋಲಿಸಿದರೆ ಇಲ್ಲಿ ಬ್ಯಾಟರ್‌ಗಳು ಸುಲಭವಾಗಿ ರನ್‌ಗಳನ್ನು ಗಳಿಸಬಹುದು. ಇಲ್ಲಿ ಬೌಲಿಂಗ್ ವಿಭಾಗಕ್ಕೆ ಕಠಿಣ ಸವಾಲು ಎದುರಾಗಲಿದ್ದು ಯಾವ ತಂಡ ಹೆಚ್ಚಿನ ನಿಯಂತ್ರಣ ಸಾಧಿಸಲಿದೆ ಅವರಿಗೆ ಪಂದ್ಯ ಗೆಲ್ಲುವ ಅವಕಾಶ ಹೆಚ್ಚಿದೆ.
ಹವಾಮಾನ ವರದಿ ಹೇಗಿದೆ?: ಈ ಪಂದ್ಯಕ್ಕೆ ಮಳೆಯ ಆತಂಕವಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಯೋಜನೆಯಾಗಲಿದೆ. 29-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರುವ ಸಾಧ್ಯತೆಯಿದೆ.

ಇತ್ತಂಡಗಳ ಆಡುವ ಬಳಗ:

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೇಹಲ್ ವಧೇರಾ, ತಿಲಕ್ ವರ್ಮಾ, ಪಿಯೂಷ್ ಚಾವ್ಲಾ, ಅರ್ಷದ್ ಖಾನ್, ಜೋಫ್ರಾ ಆರ್ಚರ್, ಆಕಾಶ್ ಮಧ್ವಲ್.

ರಾಯಲ್ ವಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ವನಿಂದು ಹಸರಂಗ, ವಿಜಯ್‌ಕುಮಾರ್ ವೈಶಾಕ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

Story first published: Tuesday, May 9, 2023, 8:57 [IST]
Other articles published on May 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+