Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್; ಪ್ಲೇಆಫ್‌ ಪ್ರವೇಶದ ಅಂತಿಮ ಪ್ರಯತ್ನ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ ತಂಡಗಳು ಮುಖಾಮುಖಿಯಾಗಲಿದ್ದು ಪ್ಲೇಆಫ್ ಹಂತಕ್ಕೇರುವ ತಮ್ಮ ಕೊನೆಯ ಪ್ರಯತ್ನವನ್ನು ಎರಡು ತಂಡಗಳು ಕೂಡ ನಡೆಸಲಿದೆ. ಎರಡು ತಂಡಗಳಿಗೂ ಈ ಪಂದ್ಯ ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದು ಹೆದ್ದ ತಂಡ 14 ಅಂಕಗಳನ್ನು ಗಳಿಸಿ ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಉಳಿದುಕೊಂಡರೆ ಸೋಲು ಕಂಡ ತಂಡ ಅಧಿಕೃತವಾಗಿ ಪ್ಲೇಆಫ್ ಸ್ಪರ್ಧೆಯಿಂದ ಹೊರಬೀಳಲಿದೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಸಮಾನ ಸ್ಥಿತಿಯಲ್ಲಿದೆ. ಎರಡು ತಂಡಗಳು ಕೂಡ ತಲಾ 13 ಪಂದ್ಯಗಳನ್ನು ಆಡಿದ್ದು 6 ಗೆಲುವು ಹಾಗೂ 7 ಸೋಲು ಅನುಭವಿಸಿದೆ. ಈ ಮೂಲಕ 12 ಅಂಕಗಳು ಎರಡು ತಂಡಗಳ ಖಾತೆಯಲ್ಲಿದೆ. ಆದರೆ ರಾಜಸ್ಥಾನ್ ರಾಯಲ್ಸ್ ತಂಡ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಗೆಲುವಿನ ಜೊತೆಗೆ ಉತ್ತಮ ಅಂತರವನ್ನು ಕೂಡ ಪಡೆಯುವುದು ಅನಿವಾರ್ಯ.

ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಮಹತ್ವದ ಘಟ್ಟದಲ್ಲಿ ಗೆಲುವಿನ ಲಯವನ್ನು ಕಳೆದುಕೊಂಡಿತು. ಅದರಲ್ಲೂ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭಾರೀ ಅಂತರದಿಂದ ಸೋಲು ಕಂಡಿರುವುದು ಬಹಳ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ಈ ಸೋಲಿನ ಆಘಾತದಿಂದ ಹೊರಬರುವುದು ಆರ್‌ಆರ್ ಪಾಲಿಗೆ ಬಹಳ ಕಠಿಣವಾಗಿರಲಿದೆ.

ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ

ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ವಿರುದ್ಧದ ಈ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸಿಸಿಯೇಶನ್ ಕ್ರೀಡಾಂಗಣದಲ್ಲಿ ಮೇ 19ರಂದು ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.

ಪಿಚ್ ರಿಪೋರ್ಟ್ ಹೀಗಿದೆ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೊಸಿಯೇಶನ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಸಮತೋಲಿತ ಹೋರಾಟವನ್ನು ನೀಡುವ ನಿರೀಕ್ಷೆಯಿದೆ. ಇಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರೆ ಹೆಚ್ಚಿನ ಯಶಸ್ಸು ಸಾಧ್ಯ. ಬಳಿಕ ಮೇಲುಗೈ ಸಾಧಿಸುವ ಅವಕಾಶವಿದೆ. ಆದರೆ ಮಧ್ಯಮ ಓವರ್‌ಗಳಲ್ಲಿ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ.

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್

Story first published: Thursday, May 18, 2023, 17:46 [IST]
Other articles published on May 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+