Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH IPL 2023 Jersey : ಹೊಸ ಜೆರ್ಸಿಯನ್ನು ಅನಾವರಣ ಮಾಡಿದ ಸನ್‌ರೈಸರ್ಸ್ ಹೈದರಾಬಾದ್

IPL 2023: Mayank, Umran And Washington Sundar Unveiled New Jersey Of Sunrisers Hyderabad

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳ ಮುನ್ನ ತಂಡದ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಜೆರ್ಸಿ ಅನಾವರಣ ಮಾಡುವ ವಿಡಿಯೋವನ್ನು ಹಂಚಿಕೊಂಡಿದೆ. ತಂಡದ ಪ್ರಮುಖ ಆಟಗಾರರಾದ ಮಯಾಂಕ್ ಅಗರ್ವಾಲ್, ಉಮ್ರಾನ್ ಮಲಿಕ್ ಮತ್ತು ವಾಷಿಂಗ್ಟನ್ ಸುಂದರ್ ಹೊಸ ಜೆರ್ಸಿಯಲ್ಲಿ ಮಿಂಚಿದ್ದಾರೆ.

ಮಯಾಂಕ್ ಅಗರ್ವಾಲ್, ಉಮ್ರಾನ್ ಮಲಿಕ್ ಮತ್ತು ವಾಷಿಂಗ್ಟನ್ ಸುಂದರ್ ಸನ್‌ರೈಸರ್ಸ್ ಹೈದರಾಬಾದ್ ಹೊಸ ಜೆರ್ಸಿಯ ಚಿತ್ರವನ್ನು ತೋರಿಸುವುದರೊಂದಿಗೆ ವೀಡಿಯೊ ಶುರುವಾಗುತ್ತದೆ. ಉತ್ತಮವಾಗಿರು ಹೊಸ ಜೆರ್ಸಿ ಬೇಕು ಎಂದು ಮೂವರು ಕೇಳುತ್ತಾರೆ. ನಂತರ ಮೂರು ತಮ್ಮ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸುತ್ತಾರೆ. ಭುಜದ ಮೇಲೆ ಕಪ್ಪು ಪಟ್ಟಿಗಳನ್ನು ಹೊಂದಿರುವ ಕಿತ್ತಳೆ ಬಣ್ಣದ ಜೆರ್ಸಿಯನ್ನು ತೊಟ್ಟು ಫೋಸ್ ನೀಡಿದ್ದಾರೆ.

ಹೊಸ ಜೆರ್ಸಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಲೋಗೋ ಮತ್ತು ಟಾಟಾ ಐಪಿಎಲ್ ಲೋಗೋವನ್ನು ಒಳಗೊಂಡಿದೆ. "2023 ಐಪಿಎಲ್‌ಗಾಗಿ ಆರೆಂಜ್ ಆರ್ಮಿಯ ಹೊಸ ಜೆರ್ಸಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ." ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

IPL 2023: Mayank, Umran And Washington Sundar Unveiled New Jersey Of Sunrisers Hyderabad

ಬಲಿಷ್ಠವಾಗಿದೆ ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ತಂಡ ತಂಡ ಈ ಬಾರಿ ಸಾಕಷ್ಟು ಬಲಿಷ್ಠವಾಗಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನು ಖರೀದಿಸಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಹೊಸ ಜೆರ್ಸಿಯಲ್ಲಿ ಮಿಂಚಲು ಆಟಗಾರರು ಕಾತರರಾಗಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಹೊಸ ಜೆರ್ಸಿಯನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ನೂತನ ಜೆರ್ಸಿಯನ್ನು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೊಸ ಜೆರ್ಸಿಯನ್ನು ಖರೀದಿ ಮಾಡಲು ಕೂಡ ಫ್ರಾಂಚೈಸಿ ಅವಕಾಶ ನೀಡಿದೆ, ಅತಿ ಶೀಘ್ರದಲ್ಲೇ ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ಜೆರ್ಸಿಗಳು ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದೆ.

IPL 2023: Mayank, Umran And Washington Sundar Unveiled New Jersey Of Sunrisers Hyderabad

ಐಡೆನ್ ಮಾರ್ಕ್ರಾಮ್ ನಾಯಕನಾಗಿ ಆಯ್ಕೆ

ಕೇನ್‌ ವಿಲಿಯಮ್ಸ್‌ರನ್ನು ತಂಡದಿಂದ ಕೈಬಿಟ್ಟ ಬಳಿಕ ತಂಡಕ್ಕೆ ನಾಯಕ ಯಾರು ಎನ್ನುವ ಕುತೂಹಲ ಇತ್ತು. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಐಡೆನ್ ಮಾರ್ಕ್ರಾಮ್‌ರನ್ನು ನಾಯಕನಾಗಿ ಆಯ್ಕೆ ಮಾಡುವ ಮೂಲಕ ಎಲ್ಲಾ ಲೆಕ್ಕಾಚಾರಗಳಿಗೆ ತೆರೆ ಬಿದ್ದಿತ್ತು. ಎಸ್‌ಎ20 ಲೀಗ್‌ನಲ್ಲಿ ಎಸ್​ಆರ್​ಹೆಚ್ ಫ್ರಾಂಚೈಸಿ ಒಡೆತನದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಚಾಂಪಿಯನ್ ಆಗಿತ್ತು, ಈ ತಂಡಕ್ಕೆ ಮಾರ್ಕ್ರಾಮ್ ನಾಯಕರಾಗಿದ್ದರು.

ಸನ್‌ರೈಸರ್ಸ್ ಹೈದರಾಬಾದ್: ಹೆನ್ರಿಚ್ ಕ್ಲಸೀನ್, ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಾಂತ್ ಶರ್ಮಾ, ಐಡೆನ್ ಮಾರ್ಕ್‌ರಾಮ್ (ನಾಯಕ), ಉಮ್ರಾನ್ ಮಲಿಕ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಫಜಲ್ಹಾಕ್ ಫಾರೂಕಿ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್.

Story first published: Thursday, March 16, 2023, 14:04 [IST]
Other articles published on Mar 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+