MI vs PBKS: ಸೂರ್ಯ, ಗ್ರೀನ್ ಹೋರಾಟ ವ್ಯರ್ಥ: ಎಂಐ 'ನಡು' ಮುರಿದ ಅರ್ಷ್‌ದೀಪ್!
ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಗುರಿಯನ್ನು ಅದ್ಭುತವಾಗಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಓವರ್‌ವರೆಗೂ ಹೋರಾಡಿತ್ತು. ಆದರೆ ಅಂತಿಮ ಓವರ್‌ನಲ್ಲಿ ಅರ್ಷ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಕೆಡವಿ ಹಾಕಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ತವರಿನಲ್ಲಿಯೇ ಸೋಲಿನ ರುಚಿ ತೋರಿಸಿದರು.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಗೆಲ್ಲಲು 215 ರನ್‌ಗಳ ಬೃಹತ್ ಗುರಿಯನ್ನು ಮುಂದಿಟ್ಟಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇಶಾನ್ ಕಿಶನ್ ಅಗ್ಗಕ್ಕೆ ವಿಕೆಟ್ ಕಳೆದುಕೊಂಡರೂ ನಾಯಕ ರೋಹಿತ್ ಶರ್ಮಾ ಹಾಗೂ ಕ್ಯಾಮರೂನ್ ಗ್ರೀನ್ ಅದ್ಭುತ ಜೊತೆಯಾಟ ನೀಡಿದರು. ಈ ಜೋಡಿ 2ನೇ ವಿಕೆಟ್‌ಗೆ 76 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದ್ದಲ್ಲದೆ ರನ್ ವೇಗವನ್ನು ಕೂಡ ಹೆಚ್ಚಿಸಿದರು.

ಇನ್ನು ತಂಡ 84 ರನ್‌ಗಳಿಸಿದ್ದ ವೇಳೆ 27 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸಿದ್ದ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು. ಬಳಿಕ ಗ್ರೀನ್‌ಗೆ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತೊಂದು ದೊಡ್ಡ ಜೊತೆಯಾಟದಲ್ಲಿ ಭಾಗುಯಾದರು. ಈ ಜೋಡಿ 36 ಎಸೆತಗಳಲ್ಲಿ 75 ರನ್‌ಗಳ ಮಹತ್ವದ ಜೊತೆಯಾಟ ನೀಡಿತು. ತಂಡದ ಮೊತ್ತ 159 ರನ್‌ಗಳಾಗಿದ್ದಾಗ ಗ್ರೀನ್ ತಮ್ಮ ವಿಕೆಟ್ ಕಳೆದುಕೊಂಡರು. ನಂತರ ಸೂರ್ಯಕುಮಾರ್ ಯಾದವ್ ಕೂಡ 57 ರನ್‌ಗಳಿಸಿ ಔಟಾದರು. ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ 17.4 ಓವರ್‌ಗಳಲ್ಲಿ 182 ರನ್‌ಗಳನ್ನು ಗಳಿಸಿತ್ತು.
ನಂತರ ತಂಡದಲ್ಲಿ ಟಿಮ್ ಡೇವಿಡ್, ತಿಲಕ್ ರ್ಮಾ ಅವರಂತಾ ಆಟಗಾರರು ಇದ್ದ ಕಾರಣ ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ ಸಾಧಿಸಬಹುದು ಎಂಬ ಭರವಸೆ ಮುಂಬೈ ಅಭಿಮಾಣಿಗಳಲ್ಲಿತ್ತು. ಅದಕ್ಕೆ ಪೂರಕವಾಗಿ ಟಿಮ್ ಡೇವಿಡ್ ಸ್ಪೋಟಕ ಪ್ರದರ್ಶನ ನಿಡಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು.
ಈ ಹಂತದಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಬೌಲಿಂಗ್ ದಾಳಿಗಿಳಿದಿದ್ದು ಅರ್ಷ್‌ದೀಪ್ ಸಿಂಗ್. ಮೊದಲ ಎಸೆತದಲ್ಲಿ ಟಿಮ್ ಡೇವಿಡ್ ಒಂಟಿ ರನ್ ಪಡೆದ ಕಾರಣ ಎರಡನೇ ಎಸೆತವನ್ನು ತಿಲಕ್ ವರ್ಮಾ ಎದುರಿಸಿದರು. ಎರಡನೇ ಎಸೆತದಲ್ಲಿ ರನ್ ಬಾರಲಿಲ್ಲ. ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಕ್ಲೀನ್ ಬೌಲ್ಡ್ ಆದರು. ಮಧ್ಯದ ವಿಕೆಟ್ ಎರಡು ತುಂಡಾಗಿತ್ತು.
ನಂತರ ಬಂದ ನೆಹಾಲ್ ವಧೇರಾ ಕೂಡ ಅರ್ಷ್‌ದೀಪ್ ಎಸೆತದಲ್ಲಿ ಔಲ್ಡ್ ಆದರು. ಈ ಸಂದರ್ಭದಲ್ಲಿ ಕೂಡ ವಿಕೆಟ್ ಎರಡು ಭಾಗವಾಗಿತ್ತು. ಸತತ ಎರಡು ಎಸೆತಗಳಲ್ಲಿ ವಿಕೆಟ್ ಮುರಿದು ಹಾಕಿದ್ದರು ಅರ್ಷ್‌ದೀಪ್ ಸಿಂಗ್. ಐದನೇ ಎಸೆತದಲ್ಲಿ ಯಾವುದೇ ರನ್ ಬಾರಲಿಲ್ಲ. ಕೊನೆಯ ಎಸೆತದಲ್ಲಿ ಒಂಟಿ ರನ್ ಬಂದಿತ್ತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ 13 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
ಬೆಂಚ್: ನೆಹಾಲ್ ವಧೇರಾ, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ಕುಮಾರ್ ಕಾರ್ತಿಕೇಯ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ದುವಾನ್ ಜಾನ್ಸೆನ್, ಸಂದೀಪ್ ವಾರಿಯರ್, ಆಕಾಶ್ ಮಾಧ್ವಲ್, ಅರ್ಷದ್ ಖಾನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್
ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ಬೆಂಚ್: ಸಿಕಂದರ್ ರಜಾ, ಕಗಿಸೊ ರಬಾಡ, ರಿಷಿ ಧವನ್, ಮೋಹಿತ್ ರಥಿ, ಶಿವಂ ಸಿಂಗ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಬ್ರಾರ್, ನಾಥನ್ ಎಲ್ಲಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications