ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಪೈಪೋಟಿಯ ಸೆಣೆಸಾಟ ನಡೆಯಲಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ. ಈ ಪಂದ್ಯ ಎರಡು ತಂಡಗಳಿಗೂ ಮಹತ್ವದ್ದಾಗಿದ್ದು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಲಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಳು ಸದ್ಯ ಅಂಕದಲ್ಲಿ ಸಮಾನವಾಗಿದ್ದು ನೆಟ್ ರನ್‌ರನ್‌ರೇಟ್‌ನಲ್ಲಿ ಆರ್‌ಸಿಬಿ ತಂಡಕ್ಕಿಂತಲೂ ಮುಂಬೈ ಇಂಡಿಯನ್ಸ್ ಕೆಳಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿ ನಡೆಸಲಿದೆ. ಈ ಪೈಪೋಟಿಯ ಪಂದ್ಯ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 9 ಮಂಗಳವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ. ಈ ಪಂದ್ಯದಲ್ಲಿ ಮೂವರು ಆಟಗಾರರು ಪ್ರಮುಖ ಮೈಲಿಗಲ್ಲು ದಾಟಲಿದ್ದು ಆ ಬಗೆಗಿನ ಮಾಹಿತಿ ಇಲ್ಲಿದೆ.

ಫಾಫ್‌ಗೆ ಆರ್‌ಸಿಬಿ ಪರ 1000 ರನ್ ಬಾರಿಸುವ ಅವಕಾಶ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಈವರೆಗೆ ಅತಿ ಹೆಚ್ಚು ರನ್‌ಗಳಿಸಿರುವ ಆಟಗಾರನೆಂದರೆ ಅದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್. 56.7ರ ಸರಾಸರಿಯಲ್ಲಿ ಫಾಫ್ ಈವರೆಗೆ 511 ರನ್‌ಗಳಿಸಿದ್ದಾರೆ. ಕಳೆದ ವರ್ಷ ಆರ್‌ಸಿಬಿ ತಂಡಕ್ಕೆ ಸೇರಿಕೊಂಡ ಫಾಫ್ ಡು ಪ್ಲೆಸಿಸ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಆರ್‌ಸಿಬಿ ತಂಡದ ನಾಯತ್ವವನ್ನು ವಹಿಸಿಕೊಂಡಿರುವ ಫಾಫ್ ಆರ್‌ಸಿಬಿ ಪರವಾಗಿ ಈವರೆಗೆ 979 ರನ್‌ಗಳಿಸಿದ್ದಾರೆ. ಇದಕ್ಕಾಗಿ ಅವರು ಕೇವಲ 26 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದು 40.8ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇಂದಿನ ಪಂದ್ಯದಲ್ಲಿ ಫಾಫ್ 21 ರನ್‌ಗಳಿಸಿದರೆ ಆರ್‌ಸಿಬಿ ಪರವಾಗಿ 1000 ರನ್‌ಗಳ ಸಾಧನೆ ಮಾಡಿದಂತಾಗುತ್ತದೆ.
ಐಪಿಎಲ್‌ನಲ್ಲಿ 3000 ರನ್ ಪೂರೈಸುವ ಸನಿಹದಲ್ಲಿ ಸೂರ್ಯಕುಮಾರ್ ಯಾದವ್
ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 3000 ರನ್‌ಗಳನ್ನು ಗಳಿಸುವ ಅವಕಾಶವಿದೆ. ಐಪಿಎಲ್‌ನಲ್ಲಿ ಸೂರ್ಯ ಈವರೆಗೆ 118 ಇನ್ನಿಂಗ್ಸ್‌ಗಳನ್ನು ಆಡಿದ್ದು 29.9ರ ಸರಾಸರಿಯಲಿ 139.9ರ ಸ್ಟ್ರೈಕ್‌ರೇಟ್‌ನೊಂದಿಗೆ 2937 ರನ್ ಬಾರಿಸಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಸೂರ್ಯ 63 ರನ್‌ಳಿಸಿದರೆ ಐಪಿಎಲ್ ವೃತ್ತಿ ಜೀವನದಲ್ಲಿ 3000 ರನ್‌ಗಳ ಮೈಲಿಗಲ್ಲು ದಾಟಿದಂತಾಗಲಿದೆ. ಇನ್ನು ಸೂರ್ಯಕುಮಾರ್ ಯಾದವ್ ಈವರೆಗೆ 96 ಸಿಕ್ಸರ್‌ಳನ್ನು ಬಾರಿಸಿದ್ದು ಇಂದಿನ ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರೆ ಸಿಕ್ಸರ್‌ಗಳ ಶತಕದ ಸಾಧನೆ ಮಾಡಿದಂತಾಗುತ್ತದೆ.
ಕೊಹ್ಲಿ ಮುಂದಿದೆ ಪ್ರಮುಖ ದಾಖಲೆಯ ಅವಕಾಶ
ಇನ್ನು ಆರ್‌ಸಿಬಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದಾಗ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಬಳಿಕ ತಮ್ಮ ಈ ಪ್ರದರ್ಶನವನ್ನು ಟೂರ್ನಿಯುದ್ದಕ್ಕೂ ಮುಂದಿವರಿಸಿದ್ದು ಮತ್ತೊಮ್ಮೆ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಈವರೆಗೆ 32.74ರ ಸರಾಸರಿಯಲ್ಲಿ 128.7 ಸ್ಟ್ರೈಕ್‌ರೇಟ್‌ನೊಂದಿಗೆ 851 ರನ್ ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಕೊಹ್ಲಿ 52 ರನ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಂತಾಗುತ್ತದೆ. ಸದ್ಯ ಶಿಖರ್ ಧವನ್ ಹೆಸರಿನಲ್ಲಿ ಈ ದಾಖಲೆಯಿದ್ದು ಅದನ್ನು ಮುರಿಯುವ ಅವಕಾಶ ವಿರಾಟ್ ಕೊಹ್ಲಿಗೆ ಇದೆ.